ಸಿದ್ದರಾಮಯ್ಯ ಏನಾದರೂ ಪಾಕಿಸ್ತಾನದ ಮುಖ್ಯಮಂತ್ರಿನಾ?: ಬಸನಗೌಡ ಪಾಟೀಲ್ ಯತ್ನಾಳ್

ಸಿಎಂ ಸಿದ್ದರಾಮಯ್ಯ ಏನು ಪಾಕಿಸ್ತಾನದ ಮುಖ್ಯಮಂತ್ರಿನಾ? ಅವರು ರಾಜ್ಯದ ಮುಖ್ಯಮಂತ್ರಿ. ಆದ್ದರಿಂದ ಶಾಸಕರು ಅವರ ಬಳಿ ಹೋಗೋದು ಸಹಜ ಎಂದು ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಂಗಳವಾರ ಹೇಳಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್
ಬಸನಗೌಡ ಪಾಟೀಲ್ ಯತ್ನಾಳ್
Updated on

ವಿಜಯಪುರ: ಸಿಎಂ ಸಿದ್ದರಾಮಯ್ಯ ಏನು ಪಾಕಿಸ್ತಾನದ ಮುಖ್ಯಮಂತ್ರಿನಾ? ಅವರು ರಾಜ್ಯದ ಮುಖ್ಯಮಂತ್ರಿ. ಆದ್ದರಿಂದ ಶಾಸಕರು ಅವರ ಬಳಿ ಹೋಗೋದು ಸಹಜ ಎಂದು ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಂಗಳವಾರ ಹೇಳಿದ್ದಾರೆ.

ದೇವರ ಹಿಪ್ಪರಗಿ ಪಟ್ಟಣದಲ್ಲಿ ನಡೆದ ಸಂಗೊಳ್ಳಿ ರಾಯಣ್ಣ ಮೂರ್ತಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ಸಿದ್ದರಾಮಯ್ಯ ಅವರ ಹಿಂದಿನ ಗತ್ತು, ಆರ್ಭಟ ಈ ಬಾರಿ ಕಾಣುತ್ತಿಲ್ಲ. ಈ ಬಗ್ಗೆ ಅವರನ್ನು ನಾನು ಖುದ್ದು ವಿಚಾರಿಸಿದಾಗ "ಇದು ನನ್ನ ಕೊನೆಯ ಅವಧಿಯಾಗಿದೆ ಎಂದು ಭಾವುಕರಾಗಿದ್ದರು. ಐದು ವರ್ಷ ಉತ್ತಮ ಆಡಳಿತ ನೀಡಬೇಕಾಗಿದೆ ಎಂದು ಹೇಳಿದ್ದರು.

ಆ ವೇಳೆ ಐದು ವರ್ಷ ನೀವೇ ಸಿಎಂ ಇರುತ್ತೀರಿ ತಾನೆ? ಎಂದು ನಾನು ನಗೆ ಚಟಾಕಿ ಹಾರಿಸಿದೆ. ಆಗ ನೀನು ಮತ್ತೆ ಬೆಂಕಿ ಹಚ್ಚುವ ಕೆಲಸ ಮಾಡಬೇಡ" ಎಂದು ಹೇಳಿದರು. ಅದಕ್ಕೆ ನಾನು ಸುಮ್ಮನಾದೆ. ರಾಜಕಾರಣ ಬೇರೆ, ಆತ್ಮೀಯತೆ ಬೇರೆ. ಅಧಿವೇಶನದ ವೇಳೆ ನಾನು ಅಸ್ವಸ್ಥನಾಗಿ ಆಸ್ಪತ್ರೆಗೆ ದಾಖಲಾದಾಗ ಖುದ್ದು ಸಿಎಂ ಸಿದ್ದರಾಮಯ್ಯ ಆರೋಗ್ಯ ವಿಚಾರಿಸಲು ಬಂದಿದ್ದರು. ಆ ವೇಳೆ ನಡೆದ ಪ್ರಸಂಗ ನೆನೆಪಿಸಿಕೊಂಡಿದ್ದೇನೆಂದು ತಿಳಿಸಿದರು.

ಒಮ್ಮೆ ಜನಪ್ರತಿನಿಧಿಯಾದ ಮೇಲೆ ಅವರಿಗೆ ಸಿಗುವ ಗೌರವ ಎಲ್ಲರೂ ನೀಡಲೇಬೇಕು. ಈಗ ಕೆಲವರು ಇದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯರು ಆಗಿರುವುದಿಲ್ಲ. ಆದರೂ ಅವರ ನಡುವಳಿಕೆ ನೋಡಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದೇ ವೇಳೆ ಶಾಸಕರು ಸಿಎಂ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಶಾಸಕರಾದವರು ಯಾವುದೇ ಪಕ್ಷದವರಾಗಿದ್ದರೂ ಸಹ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತರಲು ಸಿಎಂ ಭೇಟಿಯಾಗಲೇಬೇಕು.‌ ಅದನ್ನೇ ಹೈಡ್​ಲೈನ್ ಮಾಡಲಾಗುತ್ತದೆ. ಸಿಎಂ ಏನು ಪಾಕಿಸ್ತಾನ ಮುಖ್ಯಮಂತ್ರಿನಾ?. ಮುಖ್ಯಮಂತ್ರಿ ಅಂದ್ರೆ ಶಾಸಕರು ಅವರು ಬಳಿ ಹೋಗೋದು ಸಹಜ ಎಂದು ​ಸಮರ್ಥಿಸಿಕೊಂಡರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com