ಹಿಂದಿನ ಬಿಜೆಪಿ ಸರ್ಕಾರದಿಂದ ತನ್ನ ಕ್ಷೇತ್ರಕ್ಕೆ 105 ಕೋಟಿ ರೂ. ಅನುದಾನ ತಡೆ: ಪಕ್ಷಕ್ಕೆ ಮತ್ತೆ ಮುಜುಗರ ತಂದ ಯತ್ನಾಳ್!

ಹಿಂದಿನ ಬಿಜೆಪಿ ಸರ್ಕಾರದಿಂದ ತನ್ನ ಕ್ಷೇತ್ರಕ್ಕೆ ಮಂಜೂರಾಗಿದ್ದ 105 ಕೋಟಿ ರೂಪಾಯಿ ಅನುದಾನವನ್ನು ತಡೆಹಿಡಿಯಲಾಯಿತು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಂಗಳವಾರ ವಿಧಾನಸಭೆ ಅಧಿವೇಶನದಲ್ಲಿ ಹೇಳಿಕೆ ನೀಡುವ ಮೂಲಕ  ಪಕ್ಷಕ್ಕೆ ಮತ್ತೊಮ್ಮೆ ಮುಜುಗರ ತಂದಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್
ಬಸನಗೌಡ ಪಾಟೀಲ್ ಯತ್ನಾಳ್

ಬೆಳಗಾವಿ: ಹಿಂದಿನ ಬಿಜೆಪಿ ಸರ್ಕಾರದಿಂದ ತನ್ನ ಕ್ಷೇತ್ರಕ್ಕೆ ಮಂಜೂರಾಗಿದ್ದ 105 ಕೋಟಿ ರೂಪಾಯಿ ಅನುದಾನವನ್ನು ತಡೆಹಿಡಿಯಲಾಯಿತು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಂಗಳವಾರ ವಿಧಾನಸಭೆ ಅಧಿವೇಶನದಲ್ಲಿ ಹೇಳಿಕೆ ನೀಡುವ ಮೂಲಕ  ಪಕ್ಷಕ್ಕೆ ಮತ್ತೊಮ್ಮೆ ಮುಜುಗರ ತಂದಿದ್ದಾರೆ.

ವಿಧಾನಸಭೆಯಲ್ಲಿ ಮಾತನಾಡಿದ ಯತ್ನಾಳ್, ಸಮ್ಮಿಶ್ರ ಸರ್ಕಾರ ಅವಧಿಯಲ್ಲಿ ತಾವು ಪ್ರತಿನಿಧಿಸುವ ವಿಜಯಪುರ ಕ್ಷೇತ್ರದ ಅಭಿವೃದ್ಧಿಗೆ ಅಂದಿನ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ 105 ಕೋಟಿ ರೂಪಾಯಿ ಅನುದಾನಮಂಜೂರು ಮಾಡಿದ್ದರು. ದುರದೃಷ್ಟವಶಾತ್, ಬಿಜೆಪಿ ಅಧಿಕಾರಕ್ಕೆ ಬಂದಾಗ ಅದನ್ನು ತಡೆಹಿಡಿಯಲಾಯಿತು ಮತ್ತು ರದ್ದುಗೊಳಿಸಲಾಯಿತು ಎಂದು ಹೇಳಿದರು.

"ಹೆಚ್ಚು ಮಾತನಾಡಬೇಡಿ ಎಂದು ಜನರು ನನಗೆ ಸಲಹೆ ನೀಡುತ್ತಾರೆ. ಇದರಿಂದ ಸಿಎಂ ಆಗುವ ಅವಕಾಶವನ್ನು ಹಾಳುಮಾಡಿಕೊಂಡಿದ್ದೇನೆ. ಆದರೆ, ನಾನು ಯಾರಿಗೂ ಹೆದರುವುದಿಲ್ಲ ಮತ್ತು ನೇರವಾಗಿ ಸಂದೇಶವನ್ನು ರವಾನಿಸುತ್ತೇನೆ ಎಂದರು. 

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಚಿವ ಭೈರತಿ ಬಸವರಾಜ್ ಅವರು ಹಣ ಬಿಡುಗಡೆ ಮಾಡಿ ಸಹಾಯ ಮಾಡಿದ್ದರು. ಅಧಿಕಾರದಲ್ಲಿದ್ದಾಗ ಸಹಾಯ ಮಾಡದವರು ಈಗ ನಿವೃತ್ತರಾಗಿದ್ದಾರೆ, ಯಾರನ್ನಾದರೂ ಟಾರ್ಗೆಟ್ ಮಾಡಿದರೆ ಅವರು ಅಧಿಕಾರ ಕಳೆದುಕೊಳ್ಳುವುದನ್ನು ನೋಡಿದ್ದೇನೆ ಎಂದು ಹೇಳುವ ಮೂಲಕ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಟಾಂಗ್ ನೀಡಿದರು. 

ಈ ವೇಳೆ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಶಾಸಕ ರಾಜು ಕಾಗೆ, ನಾನು ನಿಮ್ಮೊಂದಿಗಿದ್ದೇನೆ ಎಂದರು. ತನ್ನನ್ನು ಸಮರ್ಥಿಸಿಕೊಳ್ಳಲು ತಾನು ಸಾಕು. ನಾನು ಒಂಟಿ ಸಲಗ, ಪೈಟ್ ಮಾಡುತ್ತೇನೆ ಎಂದು ಯತ್ನಾಳ್ ಹೇಳಿದರು.ಈ ವೇಳೆ ಬಿಜೆಪಿಯಲ್ಲಿ ಯಾರೂ ನಿಮ್ಮನ್ನು ಬೆಂಬಲಿಸುತ್ತಿಲ್ಲವೇ ಎಂದು ಕಾಂಗ್ರೆಸ್ ಶಾಸಕ ಅಬ್ಬಯ್ಯ ಪ್ರಸಾದ್ ಲೇವಡಿ ಮಾಡಿದರು. ಯಾರೂ ಇಲ್ಲ ಎಂದು ನೀವು ಊಹಿಸುತ್ತೀರಿ. ನೀವು ಆರು ತಿಂಗಳಿಗೊಮ್ಮೆ ಎದ್ದು ನಿಂತು ಮಾತನಾಡುತ್ತೀರಿ ಎಂದು ಯತ್ನಾಳ್ ತಿರುಗೇಟು ನೀಡಿದರು.

ಯತ್ನಾಳ್ ನೇರವಾಗಿ ಯಡಿಯೂರಪ್ಪ ಮತ್ತು ಅವರ ಪುತ್ರ ಬಿಜೆಪಿ ಶಾಸಕ ಬಿ.ವೈ. ವಿಜಯೇಂದ್ರ ಅವರನ್ನು ನೇರವಾಗಿ ಗುರಿಯಾಗಿಸಿ ಸೋಮವಾರ ವಾಗ್ದಾಳಿ ನಡೆಸಿದ್ದರು. ತನಗೆ ಅಥವಾ ಉತ್ತರ ಕರ್ನಾಟಕದ ಯಾವುದೇ ನಾಯಕನಿಗೆ ವಿಪಕ್ಷ ನಾಯಕ ಅಥವಾ ರಾಜ್ಯಾಧ್ಯಕ್ಷ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದರು. ಬಸವರಾಜ್ ಬೊಮ್ಮಾಯಿ, ಮಾಜಿ ಸಚಿವ ವಿ.ಸೋಮಣ್ಣ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರನ್ನು ಸೋಲಿಸಲು ವಿಜಯೇಂದ್ರ ಚುನಾವಣೆಗೆ ಹಣ ಹಾಕಿದ್ದಾರೆ ಎಂದೂ ಯತ್ನಾಳ್ ಆರೋಪಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com