ಯಶವಂತಪುರದಲ್ಲಿ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಗೆಲ್ಲದಿದ್ದರೆ ರಾಜಕೀಯ ನಿವೃತ್ತಿ: ಎಚ್.ಡಿ.ಕುಮಾರಸ್ವಾಮಿ
ಯಶವಂತಪುರ ಕ್ಷೇತ್ರದಿಂದ ಪಕ್ಷದ ಜೆಡಿಎಸ್ ಅಭ್ಯರ್ಥಿ ಗೆಲ್ಲಲು ವಿಫಲವಾದಲ್ಲಿ ರಾಜಕೀಯದಿಂದ ನಿವೃತ್ತಿ ಪಡೆಯುವೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ.
Published: 07th February 2023 11:58 AM | Last Updated: 07th February 2023 01:52 PM | A+A A-

ಎಚ್.ಡಿ ಕುಮಾರಸ್ವಾಮಿ
ಕೆಂಗೇರಿ: ಯಶವಂತಪುರ ಕ್ಷೇತ್ರದಿಂದ ಪಕ್ಷದ ಜೆಡಿಎಸ್ ಅಭ್ಯರ್ಥಿ ಗೆಲ್ಲಲು ವಿಫಲವಾದಲ್ಲಿ ರಾಜಕೀಯದಿಂದ ನಿವೃತ್ತಿ ಪಡೆಯುವೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ.
ಯಶವಂತಪುರ ಕಾರ್ಯಕರ್ತರ ಸಭೆಯಲ್ಲಿ ಜವರಾಯಿಗೌಡ ಅವರನ್ನು ಕ್ಷೇತ್ರದ ಆಭ್ಯರ್ಥಿಯಾಗಿ ಘೋಷಿಸಿ ಅವರು ಮಾತನಾಡಿದ ಅವರು, ಕಳೆದ ಮೂರು ಚುನಾವಣೆಗಳಲ್ಲಿ ಜವರಾಯಿಗೌಡ ಕಡಿಮೆ ಅಂತರದಲ್ಲಿ ಸೋತಿದ್ದಾರೆ. ಕ್ಷೇತ್ರದ ಮತದಾರರ ಅನುಕಂಪ ಅವರ ಮೇಲಿದೆ. ಈ ಬಾರಿ ಜನರು ಅವರನ್ನು ಕೈ ಹಿಡಿಯಲಿದ್ದಾರೆ. ವೈಯಕ್ತಿಕವಾಗಿ ಬೆಂಬಲ ನೀಡುವ ಅವರನ್ನು ಜಯಶೀಲರನ್ನಾಗಿ ಮಾಡಿಯೇ ತೀರುವೆ ಎಂದು ಹೇಳಿದರು.
ತ್ಯಾಜ್ಯ ವಿಲೇವಾರಿ ದೊಡ್ಡ ಮಾಫಿಯವಾಗಿದೆ. ತ್ಯಾಜ್ಯ ಸಂಸ್ಕರಣೆಗೆ ಹಲವಾರು ನೂತನ ವಿಧಾನಗಳಿವೆ. ಸರ್ಕಾರ ಈ ಬಗ್ಗೆ ಬದ್ಧತೆ ತೋರುತ್ತಿಲ್ಲ. 8 ಸಾವಿರ ಕೋಟಿ ಖರ್ಚಾದರೂ ಬೆಂಗಳೂರಿನಲ್ಲಿ ಗುಂಡಿಗಳ ಸಂಖ್ಯೆ ಕಡಿಮೆಯಾಗಿಲ್ಲ ಎಂದು ಅವರು ದೂರಿದರು.
ಕಾಂಗ್ರೆಸ್- ಬಿಜೆಪಿ ಒಳ ಮೈತ್ರಿಯಿಂದ ಕಳೆದ ಉಪಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಯಿತು ಎಂದು ಅವರು ತಿಳಿಸಿದರು. ಯಶವಂತಪುರ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿ ನಾನಲ್ಲ. ಜನಸೇವೆ ಮಾಡಲು ಅಧಿಕಾರವೊಂದೇ ಮಾರ್ಗವಲ್ಲ’ ಎಂದು ಜೆಡಿಎಸ್ ಮುಖಂಡ ಜವರಾಯಿಗೌಡ ಅವರು ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್ ನಲ್ಲಿ ಅಸಮಾಧಾನದ ಬೆಂಕಿ; ಜೆಡಿಎಸ್ ಗೆ ಕುಟಂಬದವರ ಕಿತ್ತಾಟದ್ದೆ ಸಮಸ್ಯೆ (ಸುದ್ದಿ ವಿಶ್ಲೇಷಣೆ)
ಕುಮಾರಸ್ವಾಮಿ ಅವರೇ ಯಶವಂತಪುರ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು. ಕಳೆದ ಮೂರು ಬಾರಿ ನಡೆದ ಚುನಾವಣೆಯಲ್ಲೂ ಜೆಡಿಎಸ್ ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ಬಾರಿ ನೀವೇ ಸ್ಪರ್ಧಿಸಿದರೆ ಕಾರ್ಯ ಕರ್ತರ ವಿಶ್ವಾಸ ಇಮ್ಮಡಿಗೊಳ್ಳಲಿದೆ’ ಎಂದು ಕಾರ್ಯಕರ್ತರು ಒತ್ತಾಯಿಸಿದರು.
ನಿಷ್ಠಾವಂತ ಕಾರ್ಯಕರ್ತರು ಇಲ್ಲಿ ಇದ್ದಾರೆ. ಯಶವಂತಪುರದಲ್ಲಿ 2013 ರಲ್ಲಿ ಅಭ್ಯರ್ಥಿ ಆದರು. 2013 ರಲ್ಲಿ 15 ಸಾವಿರದಲ್ಲಿ ಸೋತಿದ್ದೇವೆ. ಶೋಭಾ ಕರಂದ್ಲಾಜೆ ರಾಜಾಜಿನಗರದಲ್ಲಿ ಅಭ್ಯರ್ಥಿ ಆದರು. ಬಿಜೆಪಿ ಅಂದು 30 ಸಾವಿರ ಮತ ಪಡೆದಿದ್ದರೆ, ಜವರಾಯಿಗೌಡ ಶಾಸಕರಾಗುತ್ತಿದ್ದರು.
2018 ರಲ್ಲಿ ಮುಸಲ್ಮಾನ ಬಂಧುಗಳಿಂದ ದೋಷ ಆಯ್ತು. ಅದಕ್ಕೆ ಕಾರಣ ಕಾಂಗ್ರೆಸ್ ನವರು. ಬಿಜೆಪಿ ಬಿ ಟೀಂ ಅಂತ ಹೇಳಿ ದಾರಿ ತಪ್ಪಿಸಿದ್ರು. ಇಡೀ ರಾಜ್ಯದಲ್ಲಿ ಅಪ ನಂಬಿಕೆ ಮೂಡಿಸಿದರು. ಹಾಗಾಗಿ ಕಡಿಮೆ ಅಂತರದಲ್ಲಿ ಸೋತರು. ಉಪ ಚುನಾವಣೆ ವೇಳೆ ಕಾಂಗ್ರೆಸ್ ಬಿಜೆಪಿ ಸೇರಿ ಮಾಡಿದ ಚುನಾವಣೆ ಅದು. ಸೋಮಶೇಖರ್ ಅವರಿಗೇ ಕಾಂಗ್ರೆಸ್ ಅವರು ಮತ ಹಾಕಿದ್ರು. ಈ ಕ್ಷೇತ್ರ ಇಂದಿಗೂ ಜೆಡಿಎಸ್ ನ ಭದ್ರಕೋಟೆ ಎಂದರು.