ನಮ್ಮನ್ನು ಕಡೆಗಣಿಸಿದರೆ ಉಳಿಗಾಲವಿಲ್ಲ, ಹೆಚ್ಚು ಟಿಕೆಟ್ ನೀಡಿರಿ, ಸಮುದಾಯದ ಬೆಂಬಲ ಪಡೆಯಿರಿ: ಕಾಂಗ್ರೆಸ್ ಗೆ ಲಿಂಗಾಯತರ ಎಚ್ಚರಿಕೆ
ಕಾಂಗ್ರೆಸ್ ಸಮುದಾಯವನ್ನು ನಿರ್ಲಕ್ಷಿಸಲು ಪ್ರಾರಂಭಿಸಿದ ನಂತರ, ಪಕ್ಷಕ್ಕೆ ನಿರ್ಣಾಯಕ ಬೆಂಬಲ ಕಡಿಮೆಯಾಗಲು ಪ್ರಾರಂಭಿಸಿತು, ಇದು 1957 ರಿಂದ 2018 ರ ವಿಧಾನಸಭಾ ಚುನಾವಣೆಯ ಫಲಿತಾಂಶಗಳಲ್ಲಿ ಸ್ಪಷ್ಟವಾಗಿ ಗೋಚರಿಸಿತ್ತು
Published: 17th February 2023 11:30 AM | Last Updated: 17th February 2023 01:12 PM | A+A A-

ಕಾಂಗ್ರೆಸ್ ಲೋಗೋ
ಬೆಂಗಳೂರು: 1990ರ ದಶಕದಲ್ಲಿ ಕಾಂಗ್ರೆಸ್ ಪಕ್ಷ ಲಿಂಗಾಯತ ಸಮುದಾಯದ ಬೆಂಬಲ ಕಳೆದುಕೊಂಡಿತ್ತು. ಹೀಗಾಗಿ ಸಮುದಾಯಕ್ಕೆ ವಿಶೇಷ ಒತ್ತು ನೀಡಬೇಕು, ಲಿಂಗಾಯತ ಅಭ್ಯರ್ಥಿಗಳಿಗೆ ಹೆಚ್ಚಿನ ಟಿಕೆಟ್ ನೀಡಬೇಕು ಎಂದು ಗುರುವಾರ ಬೆಂಗಳೂರಿನಲ್ಲಿ ಸಭೆ ನಡೆಸಿದ ವೀರಶೈವ-ಲಿಂಗಾಯತ ಮುಖಂಡರು ಒತ್ತಾಯಿಸಿದ್ದಾರೆ.
ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರೂ ಆದ ದಾವಣಗೆರೆ ದಕ್ಷಿಣ ಶಾಸಕ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಹಾಲಿ ಶಾಸಕರು, ಮಾಜಿ ಸಚಿವರು ಹಾಗೂ ವೀರಶೈವ-ಲಿಂಗಾಯತ ಸಮುದಾಯದ ಸುಮಾರು 100 ಮಂದಿ ಲಿಂಗಾಯತ ಸಮುದಾಯದ ಆಕಾಂಕ್ಷಿಗಳು ಸಭೆಯಲ್ಲಿ ಕಾಂಗ್ರೆಸ್ ಟಿಕೆಟ್‌ಗಾಗಿ ಒತ್ತಾಯಿಸಿದರು.
ಮಾಜಿ ಸಿಎಂ ವೀರೇಂದ್ರ ಪಾಟೀಲ ಅವರನ್ನು ಅಮಾನುಷವಾಗಿ ಪದಚ್ಯುತಿಗೊಳಿಸಲಾಗಿತ್ತು, ಹೀಗಾಗಿ ಲಿಂಗಾಯತ ಸಮುದಾಯವನ್ನು ಮತ್ತೆ ಕಾಂಗ್ರೆಸ್ ತೆಕ್ಕೆಗೆ ತರಲು ಗರಿಷ್ಠ ಪ್ರಾತಿನಿಧ್ಯ ನೀಡುವಂತೆ ಸ್ಕ್ರೀನಿಂಗ್ ಕಮಿಟಿ ಅಧ್ಯಕ್ಷ ಮೋಹನ್ ಪ್ರಕಾಶ್ ಅವರನ್ನು ಮುಖಂಡರು ಒತ್ತಾಯಿಸಿದರು.
ಚಾಮರಾಜನಗರ, ಮಂಡ್ಯ, ಮೈಸೂರು, ಹಾಸನ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ ಮತ್ತು ತುಮಕೂರು ಎಂಟು ಜಿಲ್ಲೆಗಳಲ್ಲಿ ಸುಮಾರು 40,000 ಲಿಂಗಾಯತ ಮತದಾರರಿದ್ದು, ಒಂದು ಕಾಲದಲ್ಲಿ ಈ ಕ್ಷೇತ್ರಗಳಿಂದಲೇ ಸುಮಾರು 20 ಲಿಂಗಾಯತ ಶಾಸಕರಿದ್ದರು, ಇತ್ತೀಚೆಗೆ ಅವಕಾಶ ಸಿಗದೇ ಕೆಲವೇ ಶಾಸಕರು ಆರಿಸಿ ಬರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್ ಸಮುದಾಯವನ್ನು ನಿರ್ಲಕ್ಷಿಸಲು ಪ್ರಾರಂಭಿಸಿದ ನಂತರ, ಪಕ್ಷಕ್ಕೆ ನಿರ್ಣಾಯಕ ಬೆಂಬಲ ಕಡಿಮೆಯಾಗಲು ಪ್ರಾರಂಭಿಸಿತು, ಇದು 1957 ರಿಂದ 2018 ರ ವಿಧಾನಸಭಾ ಚುನಾವಣೆಯ ಫಲಿತಾಂಶಗಳಲ್ಲಿ ಸ್ಪಷ್ಟವಾಗಿ ಗೋಚರಿಸಿತ್ತು.
ಇದನ್ನೂ ಓದಿ: ಯತ್ನಾಳ್-ನಿರಾಣಿ ಜಟಾಪಟಿ ಬಿಜೆಪಿಗೆ ಇಕ್ಕಟ್ಟು; ಲಿಂಗಾಯಿತ ನಾಯಕರ ಒಡಕಿನ ಲಾಭ ಯಾರಿಗೆ?
ಕಳೆದ ವರ್ಷಗಳಲ್ಲಿ, 24 ಲಿಂಗಾಯತ ಶಾಸಕರು ಡಿಲಿಮಿಟೇಶನ್ ಮತ್ತು ಮೀಸಲಾತಿಯಿಂದಾಗಿ ಸೋತಿದ್ದಾರೆ. 2013 ರಲ್ಲಿ ಲಿಂಗಾಯತರು ಕಾಂಗ್ರೆಸ್ ಅನ್ನು ಬೆಂಬಲಿಸಿದರು ಮತ್ತು 26 ಲಿಂಗಾಯತ ನಾಯಕರು ಆಯ್ಕೆಯಾದರು ಎಂದು ಅವರು ಪಕ್ಷಕ್ಕೆ ನೆನಪಿಸಿದರು.
ದಕ್ಷಿಣ ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಕಾಂಗ್ರೆಸ್ ಕೇವಲ ಒಬ್ಬ ಲಿಂಗಾಯತ, ದಿವಂಗತ ಮಹದೇವ ಪ್ರಸಾದ್ ಅವರನ್ನು ಕಣಕ್ಕಿಳಿಸಿತ್ತು ಎಂಬುದನ್ನು ಲಿಂಗಾಯತ ಸಮುದಾಯದ ಮುಖಂಡರು ಗಮನಿಸಿದ್ದಾರೆ. ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಕೂಡ ಕಾಂಗ್ರೆಸ್ ಸುಮಾರು 200 ವಾರ್ಡ್‌ಗಳಲ್ಲಿ ಕೇವಲ ಒಬ್ಬರು ಅಥವಾ ಇಬ್ಬರನ್ನು ಲಿಂಗಾಯತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು ಘೋರ ಅನ್ಯಾಯವಾಗಿದೆ. ಕಾಂಗ್ರೆಸ್ ಹೆಚ್ಚು ಲಿಂಗಾಯತರನ್ನು ಕಣಕ್ಕಿಳಿಸಿದರೆ, ಅದು ನ್ಯಾಯಯುತವಾಗಿ ಮತ್ತೆ ಸಮುದಾಯದ ಮತಗಳನ್ನು ಕೇಳಬಹುದು ಎಂದು ರಾಜಕೀಯ ವಿಶ್ಲೇಷಕ ಬಿ.ಎಸ್ ಮೂರ್ತಿ ಅಭಿಪ್ರಾಯ ಪಟ್ಟಿದ್ದಾರೆ.
2018 ರಲ್ಲಿ ಬಿಜೆಪಿ 67 ಲಿಂಗಾಯತರನ್ನು ಕಣಕ್ಕಿಳಿಸಿದರೆ ಕಾಂಗ್ರೆಸ್ 43 ಅಭ್ಯರ್ಥಿಗಳಿಗೆ ಟಿಕೆಟ್ ನೀಡಿತ್ತು. ಲಿಂಗಾಯತರು 150 ಸ್ಥಾನಗಳಲ್ಲಿ ಹರಡಿಕೊಂಡಿದ್ದಾರೆ, ಇದರಿಂದ ಯಾವುದೇ ಪಕ್ಷವನ್ನು ಗೆಲ್ಲಲು ಸಹಾಯ ಮಾಡಬಹುದು" ಎಂದು ವೀರಶೈವ ಮಹಾಸಭಾ ಕಾರ್ಯದರ್ಶಿ ರೇಣುಕಾ ಪ್ರಸನ್ನ ಹೇಳಿದರು.