ರಾಮನಗರದಲ್ಲಿ ಬಿಜೆಪಿ 'ರಾಮಮಂದಿರ ರಾಜಕೀಯ': ಜೆಡಿಎಸ್-ಕಾಂಗ್ರೆಸ್ ಭದ್ರಕೋಟೆಯಲ್ಲಿ ಖಾತೆ ತೆರೆಯಲು ಕೇಸರಿ ಪಾಳಯ ಸಜ್ಜು!

ರಾಮನಗರ ಸಮೀಪದ ರಾಮದೇವರ ಬೆಟ್ಟದಲ್ಲಿ ‘ಭವ್ಯ’ ರಾಮಮಂದಿರ ನಿರ್ಮಿಸುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಜೆಟ್ ಘೋಷಣೆಯು ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ಹಳೇ ಮೈಸೂರು ಭಾಗದಲ್ಲಿ ಕಾಲಿಡುವ ಬಿಜೆಪಿಯ ದೊಡ್ಡ ಯೋಜನೆಗಳ ಭಾಗವಾಗಿದೆ.
ಡಿ.ಕೆ ಶಿವಕುಮಾರ್, ಎಚ್ ಡಿ ಕುಮಾರಸ್ವಾಮಿ ಮತ್ತು ಅಶ್ವತ್ಥ ನಾರಾಯಣ
ಡಿ.ಕೆ ಶಿವಕುಮಾರ್, ಎಚ್ ಡಿ ಕುಮಾರಸ್ವಾಮಿ ಮತ್ತು ಅಶ್ವತ್ಥ ನಾರಾಯಣ

ರಾಮನಗರ: ರಾಮನಗರ ಸಮೀಪದ ರಾಮದೇವರ ಬೆಟ್ಟದಲ್ಲಿ ‘ಭವ್ಯ’ ರಾಮಮಂದಿರ ನಿರ್ಮಿಸುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಜೆಟ್ ಘೋಷಣೆಯು ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ಹಳೇ ಮೈಸೂರು ಭಾಗದಲ್ಲಿ ಕಾಲಿಡುವ ಬಿಜೆಪಿಯ ದೊಡ್ಡ ಯೋಜನೆಗಳ ಭಾಗವಾಗಿದೆ.

ಮಂದಿರ ನಿರ್ಮಾಣಕ್ಕೆ ಒತ್ತಾಯಿಸುತ್ತಿದ್ದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್, ಈ ದೇವಾಲಯವು ಅಯೋಧ್ಯೆಯಲ್ಲಿರುವ ದೇವಾಲಯವನ್ನು ಹೋಲುತ್ತದೆ ಎಂದು ಹೇಳಿದ್ದಾರೆ.

ಡಿಸೆಂಬರ್ 2022 ರಲ್ಲಿ ಅಶ್ವಥ್ ನಾರಾಯಣ್ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ, ಕರ್ನಾಟಕ ಮತ್ತು ಉತ್ತರ ಪ್ರದೇಶವು ಮಹತ್ವದ ಪೌರಾಣಿಕ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಸಂಬಂಧಗಳನ್ನು ಹೊಂದಿದೆ ಎಂದು ಪ್ರತಿಪಾದಿಸಿ ದೇವಾಲಯದ ಸಮಗ್ರ ಯೋಜನೆಯನ್ನು ಪ್ರಾರಂಭಿಸಲು ರಾಮನಗರಕ್ಕೆ ಆಹ್ವಾನಿಸಿದ್ದರು.

ಒಕ್ಕಲಿಗ ಮುಖಂಡ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ್ ಅವರ ಈ ನಡೆ ಈಗಾಗಲೇ ಒಕ್ಕಲಿಗರ ಹೃದಯಭಾಗದಲ್ಲಿ ಸಂಚಲನ ಮೂಡಿಸಿದೆ. ಈ ಭಾಗದಲ್ಲಿ ಪ್ರಬಲ ಪ್ರಭಾವ ಹೊಂದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಬಜೆಟ್ ಘೋಷಣೆಯನ್ನು ಪ್ರಶ್ನಿಸಿದ್ದರೂ ಮಂದಿರ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿಲ್ಲ.

ಆದರೆ ಬಿಜೆಪಿಯ ಘೋಷಣೆಗೆ ಪ್ರತಿಕ್ರಿಯಿಸಿರುವ ಡಿ.ಕೆ ಶಿವಕುಮಾರ್, ಮೊದಲು ರಾಮನಗರದಲ್ಲಿ ಬಿಜೆಪಿ ಕಚೇರಿ ಕಟ್ಟಲಿ ಎಂದು ವ್ಯಂಗ್ಯವಾಡಿದ್ದಾರೆ. ರಾಮನಗರದಲ್ಲಿ ಬಿಜೆಪಿಗೆ ರಾಮಮಂದಿರ ನಿರ್ಮಿಸಲು ಸಾಧ್ಯವಿಲ್ಲ, ಅದು ಬಜೆಟ್ ಪುಸ್ತಕದಲ್ಲಿಯೇ ಉಳಿಯಲಿದೆ, ಇದು ನನ್ನಿಂದ ಮಾತ್ರ ಸಾಧ್ಯ. ಈ ಪ್ರದೇಶದ ರಾಜಕೀಯ ಚಿತ್ರಣವನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇನ್ನೂ ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ನಿಂದ ರಾಮನಗರ ವಿಧಾನಸಭೆ ಚುನಾವಣೆ ಅಭ್ಯರ್ಥಿಯಾಗಲಿರುವ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರಿಗೂ ಕುತೂಹಲ ಮೂಡಿಸಿದೆ.

ಸ್ವಾತಂತ್ರ್ಯ ಬಂದಾಗಿನಿಂದಲೂ ಕಾಂಗ್ರೆಸ್ ಮತ್ತು ಜೆಡಿಎಸ್ ಭದ್ರಕೋಟೆ ಎಂದು ಸಾಬೀತುಪಡಿಸಿರುವ ರಾಮನಗರದಲ್ಲಿ ಬಿಜೆಪಿ ಇನ್ನೂ ಖಾತೆ ತೆರೆದಿಲ್ಲ. ಇಲ್ಲಿಂದ ಗೆದ್ದ ಕೆಂಗಲ್ ಹನುಮಂತಯ್ಯ (1957), ಎಚ್.ಡಿ.ದೇವೇಗೌಡ (1994) ಮತ್ತು ಎಚ್.ಡಿ.ಕುಮಾರಸ್ವಾಮಿ (2004) ಮುಖ್ಯಮಂತ್ರಿಯಾದರು.

ಇದು ಬಿಜೆಪಿಯ ರಾಜಕೀಯ ಅಜೆಂಡಾದ ಭಾಗವಾಗಿದೆ, ಆದರೆ ದೇವಾಲಯವನ್ನು ನಿರ್ಮಿಸಲು ಕೆಡವಲು ಏನೂ ಇಲ್ಲ. ಜನರ ಗಮನ ಬೇರೆಡೆ ಸೆಳೆಯುವ ಕೆಲಸವಾಗಿದೆ’’ ಎಂದು ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದರು.

ಅನೇಕ ಸ್ಥಳೀಯ ನಿವಾಸಿಗಳು ದೇವಸ್ಥಾನವು ಭಾವನಾತ್ಮಕ ವಿಷಯವಾಗಿದೆ, ಇದರಿಂದ ರಾಜಕೀಯವಾಗಿ ಯಾವುದೇ ಪಕ್ಷಕ್ಕೆ ಸಹಾಯ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ರಾಮನಗರದಲ್ಲಿ ಪ್ರತಿ ವರ್ಷ ಹನುಮ ಜಯಂತಿಯನ್ನು ಸೌಹಾರ್ದಯುತವಾಗಿ ಆಚರಿಸುತ್ತೇವೆ. ಮಂದಿರ ನಿರ್ಮಾಣದ ಮೂಲಕ ಬಿಜೆಪಿಯು ಈ ಪ್ರದೇಶವನ್ನು ಕೋಮುವಾದಗೊಳಿಸಲು ಸಾಧ್ಯವಿಲ್ಲ ಎಂದು 2018 ರ ಉಪಚುನಾವಣೆಯಲ್ಲಿ  ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದ ಇಕ್ಬಾಲ್ ಹುಸೇನ್ ಹೇಳಿದ್ದಾರೆ.

ಕಂದಾಯ, ಅರಣ್ಯ ಮತ್ತು ಮುಜರಾಯಿ ಇಲಾಖೆಗಳ ಜಂಟಿ ಸಮೀಕ್ಷೆಯಲ್ಲಿ ಮುಜರಾಯಿ ಇಲಾಖೆಗೆ 19 ಎಕರೆ ಭೂಮಿಯಿದೆ ಎಂದು ತಿಳಿಸಲಾಗಿದೆ. ಆದರೆ ಅದು ಪರಿಸರ ಸೂಕ್ಷ್ಮ ವಲಯವಾದ ರಣಹದ್ದು ಅಭಯಾರಣ್ಯದಲ್ಲಿದೆ.

ಸುಮಾರು 34 ಗುಂಟೆಗಳ ಬಯಲು ಭೂಮಿಯಿದ್ದು, ಅಲ್ಲಿ ಸಣ್ಣ ದೇವಾಲಯಗಳ ಅಭಿವೃದ್ಧಿಗೆ ಅವಕಾಶವಿದೆ. ಆದರೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅನುಮತಿ ಅಗತ್ಯವಿದೆ ಎಂದು ತಿಳಿದು ಬಂದಿದೆ. ಪುರಾಣದ ಪ್ರಕಾರ ಶ್ರೀರಾಮನು ತನ್ನ 14 ವರ್ಷಗಳ ವನವಾಸದಲ್ಲಿ ರಾಮದೇವರ ಬೆಟ್ಟದಲ್ಲಿ ಒಂದು ವರ್ಷವನ್ನು ಕಳೆದಿದ್ದ ಎಂಬ ಪ್ರತೀತಿಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com