ಬಾಡೂಟದ ಬಡಿದಾಟದ ನಂತರ ಸಿ.ಟಿ ರವಿ ಮತ್ತೊಂದು ವಿವಾದ: ಬಾಲ ಬಿಚ್ಚಿದ್ರೆ ಅಂಗಿ ಚೆಡ್ಡಿ ಬಿಚ್ಕೋತ್ತಾರೆ; ಮಂಡ್ಯ ಜೆಡಿಎಸ್ ಕಾರ್ಯಕರ್ತರ ಎಚ್ಚರಿಕೆ
ಮಂಡ್ಯದಲ್ಲಿ ನಿಂತು ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಬಗ್ಗೆ ಮಾತನಾಡಿದ ಸಿಟಿ ರವಿ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಸಿಡಿದೆದ್ದಿದ್ದಾರೆ.
Published: 25th February 2023 12:15 PM | Last Updated: 25th February 2023 01:20 PM | A+A A-

ಸಿ.ಟಿ ರವಿ
ಮಂಡ್ಯ: ಮಂಡ್ಯದಲ್ಲಿ ನಿಂತು ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಬಗ್ಗೆ ಮಾತನಾಡಿದ ಸಿಟಿ ರವಿ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಸಿಡಿದೆದ್ದಿದ್ದಾರೆ.
ಸಿ.ಟಿ.ರವಿ ಒಬ್ಬ ರಾಜಕೀಯ ವಿದೂಷಕ, ಬೃಹನ್ನಳೆ. ಸಿ.ಟಿ ರವಿ ದತ್ತ ಮಾಲೆ ಹಿಡಿದುಕೊಂಡು ಚಿಕ್ಕಮಗಳೂರಲ್ಲಿ ಆಟವಾಡಬೇಕು. ಮಂಡ್ಯದಲ್ಲಿ ಬಾಲ ಬಿಚ್ಚಿದ್ರೆ ಅಂಗಿ ಚೆಡ್ಡಿ ಬಿಚ್ಕೋತ್ತಾರೆ ಎಂದು ಎಚ್ಚರಿಸಿದ್ದಾರೆ.
ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೀನಿ ಎಂಬ ಹೆಚ್.ಡಿ.ಡಿ ಹೇಳಿಕೆ ಪ್ರಸ್ತಾಪಿಸಿ, ಮೊನ್ನೆ ಮಂಡ್ಯದ ಯುವ ಸಮಾವೇಶದಲ್ಲಿ ಸಿ.ಟಿ.ರವಿ, ದೇವೇಗೌಡರಿಗೆ ಕುಟುಕಿದ್ದರು. ಈ ಕುರಿತು ಸಿ.ಟಿ.ರವಿ ಮುಸ್ಲಿಮರಾಗಿ ಹುಟ್ಟುವುದಿದ್ದರೆ ತಡ ಮಾಡುವುದೇಕೆ ಈಗಲೇ ಹೋಗಲಿ ಎಂದು ನಾಲಿಗೆ ಹರಿಬಿಟ್ಟಿದ್ದಾರೆ. ಸದ್ಯ ಇದರ ವಿರುದ್ಧವೇ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಈ ಸಂಬಂಧ ದೇವೇಗೌಡರಿಗೆ ಸಿ.ಟಿ.ರವಿ ಕ್ಷಮೆಯಾಚಿಸಲಿ ಅಂತ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಮಂಡ್ಯ ಜನ ವಂಶವಾಹಿ ರಾಜಕಾರಣ ವಿರೋಧಿಸಿ; ಸಾರ್ವಜನಿಕವಾಗಿ ಕಣ್ಣೀರು ಹಾಕುವ ನಾಯಕರ ನಂಬುವುದನ್ನು ಬಿಡಿ: ಸಿ.ಟಿ ರವಿ
ದೇವೇಗೌಡರ ಬಗ್ಗೆ ಸಿ.ಟಿ ರವಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಹಾಗೂ ಹೆಚ್ ಡಿ ದೇವೇಗೌಡ ಸಾವನ್ನ ಬಯಸಿದ್ದಾರೆಂದು ಆರೋಪಿಸಿ ಮಂಡ್ಯದ ಮಳವಳ್ಳಿಯಲ್ಲಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಒಟ್ಟಾರೆ ಜೆಡಿಎಸ್ ವರಿಷ್ಟ ಹೆಚ್.ಡಿ ದೇವೇಗೌಡ ವಿರುದ್ಧ ಮಾತನಾಡಿ ಸಿಟಿ ರವಿ ದಳ ಕಾರ್ಯಕರ್ತರ ಕೆಂಗಣ್ಣಿಗೆ ಸಿಲುಕಿದ್ದಾರೆ. ಈಗಾಗಲೇ ಬಾಡೂಟದ ಬಡಿದಾಟವೆಬ್ಬಿಸಿರುವ ನಾಯಕ ಈಗ ಮತ್ತೊಂದು ವಿವಾದಕ್ಕೆ ಎಡೆಮಾಡಿಕೊಟ್ಟಿದ್ದಾರೆ. ಯಾರೇ ಆದರೂ ಹಿರಿಯರ ಬಗ್ಗೆ ಮಾತನಾಡುವಾಗ ಸ್ವಲ್ಪ ಎಚ್ಚರಿಕೆ ವಹಿಸಿದ್ರೆ ಉತ್ತಮ ಎಂದು ಎಚ್ಚರಿಕೆ ನೀಡಿದ್ದಾರೆ.