ಹಾಸನದಲ್ಲಿ ಮುಂದುವರಿದ ದಳಪತಿಗಳ 'ಫ್ಯಾಮಿಲಿ ಪಾಲಿಟಿಕ್ಸ್': ಅಖಾಡಕ್ಕೆ ದೇವೇಗೌಡರ ಎಂಟ್ರಿ; ಎಚ್ ಡಿಕೆಗೆ ತಲೆನೋವಾದ 'ಭವಾನಿ ರೇವಣ್ಣ'!
ಜಾತ್ಯತೀತ ಜನತಾ ದಳದಲ್ಲಿ ಹಾಸನ ಟಿಕೆಟ್ ಗದ್ದಲಕ್ಕೆ ಅಂತ್ಯ ಕಾಣುತ್ತಿಲ್ಲ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಕುಟುಂಬದಲ್ಲಿ ಕಾಣಿಸಿಕೊಂಡಿರುವ ಭಿನ್ನಾಭಿಪ್ರಾಯ ರಾಜ್ಯದ ಎಲ್ಲರ ಕಣ್ಣು ನೆಟ್ಟಿದೆ.
Published: 27th February 2023 08:16 AM | Last Updated: 27th February 2023 08:18 AM | A+A A-

ಎಚ್.ಡಿ ಕುಮಾರಸ್ವಾಮಿ, ಭವಾನಿ ರೇವಣ್ಣ ಮತ್ತು ಎಚ್.ಡಿ ದೇವೇಗೌಡ
ಬೆಂಗಳೂರು: ಜಾತ್ಯತೀತ ಜನತಾ ದಳದಲ್ಲಿ ಹಾಸನ ಟಿಕೆಟ್ ಗದ್ದಲಕ್ಕೆ ಅಂತ್ಯ ಕಾಣುತ್ತಿಲ್ಲ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಕುಟುಂಬದಲ್ಲಿ ಕಾಣಿಸಿಕೊಂಡಿರುವ ಭಿನ್ನಾಭಿಪ್ರಾಯ ರಾಜ್ಯದ ಎಲ್ಲರ ಕಣ್ಣು ನೆಟ್ಟಿದೆ.
ಮಾಜಿ ಪ್ರಧಾನಿ ಎಚ್ .ಡಿ ದೇವೇಗೌಡರ ಹಿರಿಯ ಸೊಸೆ ಭವಾನಿ ರೇವಣ್ಣ ತಮ್ಮ ಭಾವ-ಮೈದುನ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಹಲವು ಬಾರಿ ತಿರುಗಿ ಬಿದ್ದಿದ್ದರೂ ಹಾಸನ ವಿಧಾನಸಭೆ ಕ್ಷೇತ್ರಕ್ಕೆ ಬಿ ಫಾರಂ ಪಡೆಯುವ ವಿಶ್ವಾಸದಲ್ಲಿದ್ದಾರೆ.
ಭಾನುವಾರ ಬೆಂಗಳೂರಿನಲ್ಲಿ ನಿಗದಿಯಾಗಿದ್ದ ಹಾಸನದ ಗೊಂದಲದ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲು ಸ್ಥಳೀಯ ಮುಖಂಡರ ಸಭೆಯನ್ನು ಕುಮಾರಸ್ವಾಮಿ ರದ್ದುಪಡಿಸಿದ ನಂತರ ಅವರು ಅಸಮಾಧಾನಗೊಂಡಿದ್ದಾರೆ.
ಸದ್ಯ ದೇವೇಗೌಡರು ತಮ್ಮ ಹಿರಿಯ ಮಗನ ಕುಟುಂಬಕ್ಕೆ ಯಾವ ರೀತಿಯ ಸಲಹೆ ನೀಡಲಿದ್ದಾರೆ ಎಂಬುದನ್ನು ಭವಾನಿ ಕಾಯುತ್ತಿದ್ದು, ಆನಂತರ ತಮ್ಮ ನಿರ್ಧಾರ ಕೈಗೊಳ್ಳಲಿದ್ದಾರೆ. ಆದರೆ, ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಪತಿ ರೇವಣ್ಣ ಅವರೊಂದಿಗೆ ಖಾಸಗಿ ಕಾರ್ಯಕ್ರಮಗಳಿಗೆ ಹಾಜರಾಗುವುದನ್ನು ಮುಂದುವರಿಸಿದ್ದು, ತಮ್ಮ ಉಮೇದುವಾರಿಕೆಗೆ ಪ್ರಬಲ ಪೈಪೋಟಿ ನೀಡಿದ್ದಾರೆ. ಕುಟುಂಬದಲ್ಲಿನ ಭಿನ್ನಾಭಿಪ್ರಾಯವನ್ನು ಬಯಲಿಗೆಳೆದು ಜೆಡಿಎಸ್ ಅನ್ನು ಕುಟುಂಬ ಪಕ್ಷ ಎಂದು ಲೇವಡಿ ಮಾಡುವ ಅವಕಾಶವನ್ನು ಇತರೆ ಪಕ್ಷಗಳಿಗೂ ನೀಡಿರುವುದರಿಂದ ಇಡೀ ವಿಷಯ ಕುಮಾರಸ್ವಾಮಿ ಅವರಿಗೆ ತಲೆನೋವಾಗಿ ಪರಿಣಮಿಸಿದೆ.
ಹಾಸನದಲ್ಲಿ ಭವಾನಿ ಸ್ಪರ್ಧೆಗೆ ಮುಂದಾದರೆ ಪಕ್ಷವು ಕೆಲವು ಸ್ಥಾನಗಳನ್ನು ಕಳೆದುಕೊಳ್ಳುತ್ತದೆ ಎಂದು ಜೆಡಿಎಸ್ ಯುವ ಮುಖಂಡರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ. ಇದು ನಿಷ್ಠಾವಂತ ಕಾರ್ಯಕರ್ತರ ನೈತಿಕತೆಯ ಮೇಲೆ ಪರಿಣಾಮ ಬೀರುತ್ತದೆ. ಪ್ರತಿಸ್ಪರ್ಧಿ ಪಕ್ಷಗಳು ಪರಿಸ್ಥಿತಿಯನ್ನು ಹೇಗೆ ಹಾಳುಮಾಡುತ್ತವೆ ಎಂದು ತಿಳಿದಿದ್ದರೂ ಸಹ ತಮ್ಮ ಪತ್ನಿಗೆ ಟಿಕೆಟ್ ನೀಡುವಂತೆ ಪಕ್ಷದ ಮೇಲೆ ಒತ್ತಡ ಹೇರಿದ್ದಕ್ಕಾಗಿ ಕುಮಾರಸ್ವಾಮಿ ತಮ್ಮ ಹಿರಿಯ ಸಹೋದರ ರೇವಣ್ಣ ವಿರುದ್ಧವೂ ಅಸಮಾಧಾನಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭವಾನಿ ರೇವಣ್ಣ ಅವರ ನಡೆಯಿಂದ ಎದಿುರಾಗುತ್ತಿರುವ ಅವಮಾನ ತಪ್ಪಿಸಲು ಹಾಸನ ಟಿಕೆಟ್ ವಿಚಾರವನ್ನು ಮಾಜಿ ಮುಖ್ಯಮಂತ್ರಿ ಒಂದು ವಾರ ಮುಂದೂಡಿದ್ಗಾರೆ. ಈ ನಡುವೆ ಮಾಜಿ ಪ್ರಧಾನಿ ದೇವೇಗೌಡರು ಅಸ್ವಸ್ಥರಾಗಿದ್ದು, ಸದ್ಯ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಆದರೆ ಈ ಸಂಬಂಧ ರೇವಣ್ಣ ಹಾಗೂ ಅವರ ಪತ್ನಿ ಭವಾನಿ ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ.