ಬೆಳಗಾವಿ: ಕರ್ನಾಟಕ ನಾಯಕರನ್ನು ಅವಮಾನಿಸುವುದು ಕಾಂಗ್ರೆಸ್‌ನ ಹಳೆಯ ಸಂಸ್ಕೃತಿಯ ಭಾಗವಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು ಬೆಳಗಾವಿ ನಗರದಲ್ಲಿ ನಡೆದ ಬೃಹತ್ ಸಮಾರಂಭದಲ್ಲಿ ವಿವಿಧ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ನ ಹಿರಿಯ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆ ರೀತಿ ನಡೆಸಿಕೊಳ್ಳಬಾರದಿತ್ತು..ನಿಮಗೆ ಈಗ ತಿಳಿಯಿತೇ, ಕಾಂಗ್ರೆಸ್ ಪಕ್ಷದ ರಿಮೋಟ್ ಯಾರ ಕೈಯಲ್ಲಿ ಇದೆ ಎಂದು ಲೇವಡಿ ಮಾಡಿದ್ದಾರೆ.
ನರೇಂದ್ರ ಮೋದಿ ಜೀವಂತ ಇರೋವರೆಗೂ ಕಾಂಗ್ರೆಸ್ ಮೇಲೆ ಏಳಲ್ಲ. ಎಸ್.ನಿಜಲಿಂಗಪ್ಪ, ವೀರೇಂದ್ರ ಪಾಟೀಲ್‌ರಿಗೆ ಅಪಮಾನ ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಈಗ ಮತ್ತೊಬ್ಬ ನಾಯಕನಿಗೆ ಅವಮಾನ ಮಾಡಿದೆ. ಬಿಸಿಲಿನಲ್ಲಿ ಕುಳಿತರೂ ಛತ್ರಿಯ ಸೌಭಾಗ್ಯ ಮಲ್ಲಿಕಾರ್ಜುನ ಖರ್ಗೆಗೆ ಸಿಗಲಿಲ್ಲ ಎಂದರು.
ನಾನು ಮಲ್ಲಿಕಾರ್ಜುನ ಖರ್ಗೆ ಜೀ ಅವರಿಗೆ ತುಂಬಾ ಗೌರವ ನೀಡುತ್ತೇನೆ.ಕಾಂಗ್ರೆಸ್ ಅಧಿವೇಶನ ನಡೆಯುತ್ತಿತ್ತು. ಅವರೇ ಹಿರಿಯ ನಾಯಕ. ಅಲ್ಲಿ ಬಿಸಿಲಿತ್ತು, ಆದರೆ ಖರ್ಗೆ ಜೀ ಅವರಿಗೆ ಬಿಸಿಲಲ್ಲಿ ಕೊಡೆ ಭಾಗ್ಯ ಸಿಗಲಿಲ್ಲ… ಯಾರೋ ಬೇರೆಯವರಿಗೆ (ಸೋನಿಯಾ ಗಾಂಧಿ) ಕೊಡೆ ಹಿಡಿಯಲಾಗಿತ್ತು. ಇದನ್ನು ನೋಡಿದರೆ ರಿಮೋಟ್ ಕಂಟ್ರೋಲ್ ಯಾರ ಕೈಯಲ್ಲಿದೆ ಎಂಬುದು ಸಾರ್ವಜನಿಕರಿಗೆ ಅರ್ಥವಾಗುತ್ತಿದೆ.ಕಾಂಗ್ರೆಸ್ ಪಕ್ಷ ಎಸ್. ನಿಜಲಿಂಗಪ್ಪ ಮತ್ತು ವೀರೇಂದ್ರ ಪಾಟೀಲ್ ಅವರಿಗೆ ಅವಮಾನ ಮಾಡಿತ್ತು” ಎಂದು ಕಿಡಿಕಾರಿದರು.
ಮಲ್ಲಿಕಾರ್ಜುನ ಖರ್ಗೆ ಅವರು 50 ವರ್ಷಗಳ ಕಾಲ ರಾಜಕೀಯ ಮಾಡಿದ್ದಾರೆ. ನಾನು ಖರ್ಗೆ ಅವರನ್ನು ಗೌರವಿಸುತ್ತೇನೆ. ಕಾಂಗ್ರೆಸ್ ಅವಧಿಯಲ್ಲಿ ಕರ್ನಾಟಕವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಎಸ್.ನಿಜಲಿಂಗಪ್ಪ, ವೀರೇಂದ್ರ ಪಾಟೀಲ್ ಅವರಂತೆ ಈಗ ಕರ್ನಾಟಕದ ಮತ್ತೊಬ್ಬ ನಾಯಕನನ್ನು ಅವಮಾನಿಸಿದೆ. ಛತ್ತೀಸ್‌ಗಢದ ರಾಯ್‌ಪುರದಲ್ಲಿ ನಡೆದ ಸಮಾವೇಶದಲ್ಲಿ ಖರ್ಗೆ ಅವರಿಗೆ ಅವಮಾನ ಮಾಡಿದೆ ಎಂದಿದ್ದಾರೆ.
ಕಾಂಗ್ರೆಸ್ ಕುಟುಂಬಕ್ಕೆ ಯಾರನ್ನು ಇಷ್ಟವಿಲ್ಲವೋ ಅಂಥವರಿಗೆ ವ್ಯವಸ್ಥಿತವಾಗಿ ಅವಮಾನ ಮಾಡುವ ಕಾರ್ಯ ನಡೆಸುತ್ತದೆ. ನಿಜಲಿಂಗಪ್ಪ, ವೀರೇಂದ್ರ ಪಾಟೀಲ್ ಅವರಂತಹ ನಾಯಕರನ್ನು ಕಾಂಗ್ರೆಸ್ ಕುಟುಂಬ ಹೇಗೆ ಅವಮಾನಿಸಲಾಯಿತು ಎಂಬುದಕ್ಕೆ ಇತಿಹಾಸವೇ ಸಾಕ್ಷಿ, ಕರ್ನಾಟಕದ ಪ್ರತಿಯೊಬ್ಬ ವ್ಯಕ್ತಿಗೂ ಗೊತ್ತು ಎಂದಿದ್ದಾರೆ.
Advertisement