ವಿಧಾನಸಭೆ ಚುನಾವಣೆ: ಅಲ್ಪಸಂಖ್ಯಾತ ಮತಗಳನ್ನು ನುಂಗಲಿದೆ ಎಸ್ ಡಿಪಿಐ; ಕಾಂಗ್ರೆಸ್ ಗೆ ಎದುರಾಗಿದೆ ಆತಂಕ!

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 113ರ ಗಡಿ ತಲುಪುವತ್ತ ಗಮನ ಹರಿಸುತ್ತಿದ್ದರೂ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದೆ. ಇದಕ್ಕೆ ಕಾರಣ ಬಿಜೆಪಿ ಅಲ್ಲ, ಎಸ್‌ಡಿಪಿಐ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 113ರ ಗಡಿ ತಲುಪುವತ್ತ ಗಮನ ಹರಿಸುತ್ತಿದ್ದರೂ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದೆ. ಇದಕ್ಕೆ ಕಾರಣ ಬಿಜೆಪಿ ಅಲ್ಲ, ಎಸ್‌ಡಿಪಿಐ.

2018 ರಲ್ಲಿ ಕೇವಲ ಮೂರು ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ 11 ಅಭ್ಯರ್ಥಿಗಳನ್ನು ಗುರುತಿಸಿದೆ. ಅಲ್ಪಸಂಖ್ಯಾತರ ಮತಗಳನ್ನು ಕಬಳಿಸಲು 40-50 ಅಭ್ಯರ್ಥಿಗಳನ್ನು ಹುಡುಕಾಡುತ್ತಿದೆ.

ಕಳೆದ ಬಾರಿ ಅಲ್ಪಸಂಖ್ಯಾತರ ಮತಗಳಲ್ಲಿ ಸಿಂಹಪಾಲು ಪಡೆದಿದ್ದ ಕಾಂಗ್ರೆಸ್ ಮೇಲೆ ಎಸ್‌ಡಿಪಿಐ ನಡೆ ನೇರವಾಗಿ ಪರಿಣಾಮ ಬೀರುವ ಸಾಧ್ಯತೆ ಇದೆ. ಕೆಲವು ದಿನಗಳ ಹಿಂದೆ, ಎಸ್‌ಡಿಪಿಐ ಸುಮಾರು 100 ಸ್ಥಾನಗಳಿಂದ ಸ್ಪರ್ಧಿಸುವ ಬಗ್ಗೆ ಚಿಂತಿಸುತ್ತಿರುವುದು ಕಾಂಗ್ರೆಸ್‌ಗೆ ಆತಂಕವನ್ನುಂಟು ಮಾಡಿದೆ.

ಕಾಂಗ್ರೆಸ್ ಲೆಕ್ಕಾಚಾರದ ಮೇಲೆ ಎಸ್ ಡಿಪಿಐ ಪ್ರಭಾವ ಬೀರಿದ ನಿದರ್ಶನಗಳಿವೆ. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 2018ರಲ್ಲಿ ಎಸ್‌ಡಿಪಿಐನಿಂದ ಸ್ಪರ್ದಿಸಿದ್ದ ಮುಜಾಹಿದ್ ಪಾಷಾ  11,700 ಮತಗಳನ್ನು ಪಡೆದು ಶೇ.9.08ರಷ್ಟು ಮತಗಳನ್ನು ಪಡೆದಿದ್ದರು.

ಇದರಿಂದಾಗಿ ಕಾಂಗ್ರೆಸ್‌ನ ಆರ್‌ವಿ ದೇವರಾಜ್‌ ಕೇವಲ 49,378 ಅಂದರೆ ಶೇಕಡಾ 38.3 ಮತಗಳನ್ನು ಮಾತ್ರ ಪಡೆದರು. ಇದರಿಂದಾಗಿ ಬಿಜೆಪಿಯ ಉದಯ್ ಗರುಡಾಚಾರ್ ಅವರು 57,000 ಮತಗಳನ್ನು ಗಳಿಸಲು ಅವಕಾಶ ಮಾಡಿಕೊಟ್ಟರು. ಇನ್ನೊಂದು ಪ್ರಕರಣವೆಂದರೆ ಮಡಿಕೇರಿ ನಗರಸಭೆಯ 26 ಸ್ಥಾನಗಳಲ್ಲಿ ಎಸ್‌ಡಿಪಿಐ ಐದು, ಕಾಂಗ್ರೆಸ್ ಕೇವಲ ಒಂದು ಮತ್ತು ಬಿಜೆಪಿ 16 ಸದಸ್ಯರನ್ನು ಹೊಂದಿದೆ.

ಎಸ್‌ಡಿಪಿಐ ಹೊರತಾಗಿ ಜೆಡಿಎಸ್ ಮತ್ತು ಎಐಎಂಐಎಂ ಸವಾಲಿನ ಬಗ್ಗೆಯೂ ಕಾಂಗ್ರೆಸ್ ಚಿಂತಿಸಬೇಕಾಗಿದೆ. ಕಾಂಗ್ರೆಸ್‌ನ ಹಿರಿಯ ಮುಖಂಡ ಸಿ.ಎಂ.ಇಬ್ರಾಹಿಂ ಅವರನ್ನು ಕಣಕ್ಕಿಳಿಸಿದ ಜೆಡಿಎಸ್, ಅಲ್ಪಸಂಖ್ಯಾತರ ಮತಗಳನ್ನು ಸೆಳೆಯುವ ನಿರೀಕ್ಷೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಶ್ರಮಿಸುತ್ತಿದೆ.

ಕಾಂಗ್ರೆಸ್‌ ಅಲ್ಪಸಂಖ್ಯಾತರ ಹಲವು ಸಮಸ್ಯೆಗಳಿಗೆ  ಗಮನ ಹರಿಸದಿರುವುದು ಇದಕ್ಕೆ ಪ್ರಮುಖ ಕಾರಣ ಎಂದು, ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಎಂ ತುಂಬೆ ಹೇಳಿದ್ದಾರೆ. ಎಸ್‌ಡಿಪಿಐನ ಸೈದ್ಧಾಂತಿಕ ಅಂಗವಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮೇಲೆ ಕೇಂದ್ರದ ನಿಷೇಧಿಸಿದೆ.

ಇದು ಕೂಡ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರಬಹುದು. ಅಲ್ಲದೆ, ಡಿಜೆ ಹಳ್ಳಿ ಗಲಭೆಗೆ ಹಲವು ಪಿಎಫ್‌ಐ ಮತ್ತು ಎಸ್‌ಡಿಪಿಐ ಸದಸ್ಯರನ್ನು ಹೊಣೆ ಮಾಡಲಾಗಿದ್ದು, ಇನ್ನೂ ಕೆಲವರು ಕಂಬಿ ಹಿಂದೆ ಇದ್ದಾರೆ, ಈ ಎಲ್ಲಾ ಅಂಶಗಳು ಕಾಂಗ್ರೆಸ್ ಫಲಿತಾಂಶ ಬೀರಲಿದೆ ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com