ರಮೇಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ

ಚುನಾವಣೆಗೆ 3 ತಿಂಗಳು ಮಾತ್ರ ಇದೆ.. ಸಚಿವ ಸ್ಥಾನ ನೀಡೋದರಲ್ಲಿ ಅರ್ಥ ಇಲ್ಲ: ರಮೇಶ್ ಜಾರಕಿಹೊಳಿ

ಕರ್ನಾಟಕ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ರಮೇಶ್ ಜಾರಕಿಹೊಳಿ ಸಚಿವ ಸ್ಥಾನದ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ.
Published on

ಬೆಳಗಾವಿ: ಕರ್ನಾಟಕ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ರಮೇಶ್ ಜಾರಕಿಹೊಳಿ ಸಚಿವ ಸ್ಥಾನದ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಚುನಾವಣೆ ಸಂದರ್ಭದಲ್ಲಿ ಸಚಿವ ಸ್ಥಾನ ಬೇಡ ಎಂದು ನಾನೇ ಹೇಳಿದ್ದೇನೆ. ಮುಂದೆ 2023ಕ್ಕೆ ಮತ್ತೆ ಆಗೋಣ, ಇನ್ನೆಷ್ಟು ಮೂರು ತಿಂಗಳು ಮಾತ್ರ ಇದೆ. ಮೂರು ತಿಂಗಳಲ್ಲಿ ಸಚಿವ ಸ್ಥಾನ ನೀಡೋದರಲ್ಲಿ ಅರ್ಥ ಇಲ್ಲ ಎಂದರು.

ಅಂತೆಯೇ ಯಡಿಯೂರಪ್ಪ (BS Yediyurappa) ನೇತೃತ್ವದಲ್ಲಿ ಟಿಕೆಟ್ ನೀಡಬೇಕು ಎಂದು ಶಾಸಕರು ಪತ್ರ ಬರೆದ ವಿಚಾರಕ್ಕೆ ಅದು ನನಗೆ ಗೊತ್ತಿಲ್ಲ. ನಮ್ಮಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಮಾಡ್ತೇವೆ ಎಂದರು.

'ನೂರು ಸಿಡಿ ಬಂದ್ರೂ ಹೆದರೊಲ್ಲ, ನಾನೊಬ್ಬನೇ ಅವನನ್ನು ಎದುರಿಸೋನು.. 
ಮತ್ತೆ ಸಿಡಿ ವಿಚಾರವಾಗಿ ಕಾಂಗ್ರೆಸ್ ಮತ್ತು ಡಿಕೆ ಶಿವಕುಮಾರ್ ವಿರುದ್ಧ ಕಿಡಿಕಾರಿದ ರಮೇಶ್ ಜಾರಕಿಹೊಳಿ, ನೂರು ಸಿಡಿ ಬಂದ್ರೂ ನಾನು ಹೆದರೊಲ್ಲ.. ನಾನೊಬ್ಬನೇ ಅವನನ್ನು ಎದುರಿಸೋನು.. ಮಹಾ ನಾಯಕನ ಎಲ್ಲ ಕುತಂತ್ರ ಬಗ್ಗೆ ಸಿಬಿಐ ತನಿಖೆಗೆ ನೀಡಬೇಕು ಎಂದು ಆಗ್ರಹಿಸಿದರು.

ಈ ಬಗ್ಗೆ  ಸಿಎಂಗೆ ಮನವಿ ಮಾಡಿದ್ದು ಕೇಂದ್ರ ಗೃಹಸಚಿವರಿಗೂ ಮನವಿ ಮಾಡ್ತೇನೆ..  ಡಿಕೆಶಿಗೆ ನನ್ನ ಹೆದರಿಕೆ ಇದೆ. ನಾನು ಒಬ್ಬನೇ ಅವನನ್ನು ಎದುರಿಸೋನು. ಅವನಿಗೆ ಹೆದರಿಕೆ ಇದೆ, ಇಂತಹ ನೂರು ಸಿಡಿ ಬಂದ್ರೂ ನಾನು ಹೆದರಲ್ಲ ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.

ಸಿಡಿ ಪ್ರಕರಣದಲ್ಲಿ ಸ್ಥಳೀಯ ನಾಯಕರ ಪಾತ್ರ ಇದೆಯಾ ಎಂದು ಮಾಧ್ಯಮಗಳ ಪ್ರಶ್ನೆಗೆ ಅವರೆಲ್ಲ ಏಜೆಂಟರು ಎಂದ ರಮೇಶ್ ಜಾರಕಿಹೊಳಿ, ನಮಗೇನಿದ್ದರೂ ಟಾರ್ಗೆಟ್ ಡಿ.ಕೆ.ಶಿವಕುಮಾರ್. ಸಿಬಿಐ ತನಿಖೆ ಆದ್ರೆ ಎಲ್ಲ ಗೊತ್ತಾಗುತ್ತದೆ. ನನ್ನ ಹಾಗೆ ಬೇರೆಯವರು ಸಫರ್ ಆಗಬಾರದು ಎಂದರು.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com