ಸಮಯ ಬಂದಾಯ್ತು ಪ್ಯಾಕ್ ಮಾಡ್ಕೊಳ್ಳಿ, ವಿಧಾನಸೌಧವನ್ನು ಡೆಟಾಲ್ ಹಾಕಿ ಕ್ಲೀನ್ ಮಾಡ್ತೇವೆ: ಬಿಜೆಪಿಗೆ ಡಿ.ಕೆ. ಶಿವಕುಮಾರ್
ಸಮಯ ಬಂದಾಯ್ತು ನಿಮ್ಮ ಟೆಂಟ್ ಗಿಂಟ್ ಪ್ಯಾಕ್ ಮಾಡಿಕೊಳ್ಳಿ, ವಿಧಾನಸೌಧವನ್ನು ಡೆಟಾಲ್ ನಿಂದ ಸ್ವಚ್ಛಗೊಳಿಸುತ್ತೇವೆಂದು ಬಿಜೆಪಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು ಹೇಳಿದ್ದಾರೆ.
Published: 25th January 2023 09:49 AM | Last Updated: 25th January 2023 03:40 PM | A+A A-

ಡಿಕೆ.ಶಿವಕುಮಾರ್.
ಬೆಂಗಳೂರು; ಸಮಯ ಬಂದಾಯ್ತು ನಿಮ್ಮ ಟೆಂಟ್ ಗಿಂಟ್ ಪ್ಯಾಕ್ ಮಾಡಿಕೊಳ್ಳಿ, ವಿಧಾನಸೌಧವನ್ನು ಡೆಟಾಲ್ ನಿಂದ ಸ್ವಚ್ಛಗೊಳಿಸುತ್ತೇವೆಂದು ಬಿಜೆಪಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು ಹೇಳಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ನಿಮ್ಮ ಸರ್ಕಾರಕ್ಕೆ ಕೇವಲ 40-45 ದಿನಗಳು ಉಳಿದಿವೆ. ನಿಮ್ಮ ಟೆಂಟ್ ಗಿಂಡ್ ಪ್ಯಾಕ್ ಮಾಡಿಕೊಳ್ಳಿ. ಡೆಟಾಲ್‌ನಿಂದ ವಿಧಾನಸೌಧವನ್ನು ಸ್ವಚ್ಛಗೊಳಿಸುತ್ತೇವೆ. ನನ್ನ ಬಳಿ ಶುದ್ಧೀಕರಣಕ್ಕೆ ಗೋಮೂತ್ರವೂ ಇದೆ ಎಂದು ಹೇಳಿದ್ದಾರೆ.
ಈ ದುಷ್ಟ ಸರ್ಕಾರ ತೊಲಗಬೇಕಿದೆ. ಜನ ಬಯಸಿದ್ದು ಅದನ್ನೇ. ಬೊಮ್ಮಾಯಿಯವರೇ ನಿಮ್ಮ ಮಂತ್ರಿಗಳಿಗೆ ಪ್ಯಾಕ್ ಅಪ್ ಮಾಡಲು ಹೇಳಿ ಎಂದು ತಿಳಿಸಿದ್ದಾರೆ.
ಸುಧಾಕರ ಮೇಲೆ ಭ್ರಷ್ಟಾಚಾರದ ಕೂಪ ಕೂತಿದೆ, ಮುತ್ತು ರತ್ನಗಳೆಲ್ಲೆ ಇದಾರಲ್ಲ ಬಿಜೆಪಿ ಕೈಲಿ, ಆಪರೇಷನ್ ಲೋಟಸ್ ಆದವರ ಕೈಯ್ಯಲ್ಲೇ ಮಾತಾಡಿಸ್ತೀರಲ್ಲ. ನಮ್ಮ ಬಸ್ ಫುಲ್ ಆಗಿದೆ ಯಾರನ್ನೂ ನಾವು ಕರೆದುಕೊಳ್ಳಲ್ಲ. ಬಿ ರಿಪೋರ್ಟ್ ಸರ್ಕಾರ ಇದು ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಯವರಿಗೆ ತಲೆ ಕೆಟ್ಟು ಹೋಗಿಬಿಟ್ಟಿದೆ, ಅವರ ಸರ್ವೆಯಲ್ಲಿ 60-70 ಸೀಟು ದಾಟ್ತಾ ಇಲ್ಲ. ಅದಕ್ಕೆ ಸುಧಾಕರ್'ನನ್ನು ಬಿಟ್ಟು 35 ಸಾವಿರ ಕೋಟಿ ಹೊಡೆದಿದ್ದಾರೆ ಎಂದು ಆರೋಪ ಮಾಡಿಸ್ತಿದ್ದಾರೆ. ಬಿಜೆಪಿಯಲ್ಲಿ 37 ಗುಂಪಿದೆ, ಬಸವರಾಜ ಬೊಮ್ಮಾಯಿಯವರೇ ಹೇಳಿ ಬಿಡಿ. ನಿಮ್ಮ ಮಂತ್ರಿಗಳಿಗೆ ಪ್ಯಾಕಪ್ ಮಾಡೋಕೆ. ನೀವು ಪ್ಯಾಕಪ್ ಮಾಡಿಕೊಂಡು ಹೊರಡಿ ಎಂದು ತಿಳಿಸಿದ್ದಾರೆ.