'ಅಯ್ಯೋ, ನಾನು ಹೇಳಿದ್ದು ತಮಾಷೆಗೆ, ಸೀರಿಯಸ್ ಆಗಿ ತಗೊಂಡು ಬಿಜೆಪಿ ಟಿಕೆಟ್ ಕೇಳಲು ಬರಬೇಡಿ; ಭವಾನಿ ಅಕ್ಕಂಗೆ ಹಾಸನ ಸುರಕ್ಷಿತವಲ್ಲ'
ನಾನು ಹೇಳಿದ್ದು ಶುದ್ಧ ತಮಾಷೆಗಾಗಿ, ಹಾಗಂತ ಅದನ್ನು ಗಂಭೀರವಾಗಿ ತೆಗೆದುಕೊಂಡು ಟಿಕೆಟ್ ಕೇಳಲು ಬಂದರೆ ಸಂಸದೀಯ ಮಂಡಳಿಗೆ ನಾನು ಏನು ಉತ್ತರ ಕೊಡಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.
Published: 28th January 2023 02:28 PM | Last Updated: 28th January 2023 03:10 PM | A+A A-

ಭವಾನಿ ರೇವಣ್ಣ
ಬೆಂಗಳೂರು: ನಾನು ಹೇಳಿದ್ದು ಶುದ್ಧ ತಮಾಷೆಗಾಗಿ, ಹಾಗಂತ ಅದನ್ನು ಗಂಭೀರವಾಗಿ ತೆಗೆದುಕೊಂಡು ಟಿಕೆಟ್ ಕೇಳಲು ಬಂದರೆ ಸಂಸದೀಯ ಮಂಡಳಿಗೆ ನಾನು ಏನು ಉತ್ತರ ಕೊಡಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.
ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿ.ಟಿ ರವಿ, ನಾನು ಹೇಳಿದ್ದ ತಮಾಷೆಗೆ, ಆದರೆ ನನ್ನನ್ನು ಮನೆ ಮುರುಕ ಎಂದು ಬಿಂಬಿಸುತ್ತಿದ್ದಾರೆ, ದಯವಿಟ್ಟು ಅದನ್ನು ಯಾರು ಗಂಭೀರವಾಗಿ ಪರಿಗಣಿಸಬಾರದು ಎಂದು ಸ್ಪಷ್ಟಪಡಿಸಿದ್ದಾರೆ.
ಆ ಬಗ್ಗೆ ಚರ್ಚೆ ಕೂಡ ನಡೆದಿಲ್ಲ, ನಾನು ಜೆಡಿಎಸ್ ಹೈಕಮಾಂಡ್ ಅಲ್ಲ, ಅವರ ಮನೆಯಲ್ಲಿಯೇ ಹೈಕಮಾಂಡ್ ಇದ್ದಾರೆ, ಅದನ್ನು ಸೀರಿಯಸ್ ಆಗಿ ತೆಗೆದುಕೊಂಡು ಟಿಕೆಟ್ ಕೊಡಿ ಅಂತಾ ಬರಬೇಡಿ, ಕುಮಾರಸ್ವಾಮಿ ಬೇಕಾದರೆ ಇದು ಮನೆ ಜಗಳ ಎಂದು ಹೇಳಬಹುದು ಎಂದಿದ್ದಾರೆ. ಭವಾನಿ ರೇವಣ್ಣ ಅವರಿಗೆ ಹಾಸನ ಕ್ಷೇತ್ರ ಸುರಕ್ಷಿತವಲ್ಲ ಎಂದು ಸಿ.ಟಿ ರವಿ ಭವಿಷ್ಯ ನುಡಿದಿದ್ದಾರೆ. ಪ್ರೀತಂ ಗೌಡ ವಿರುದ್ಧ ಯಾರೇ ಸ್ಪರ್ಧಿಸಿದರೂ ಪ್ರೀತಂ ಗೆಲುವು ನಿಶ್ಚಿತ ಎಂದು ಹೇಳಿದ್ದಾರೆ.
ಹಾಸನ ವಿಧಾನಸಭೆ ಕ್ಷೇತ್ರದ ಟಿಕೆಟ್ ಗಾಗಿ ಜೆಡಿಎಸ್ ನಲ್ಲಿ ನಡೆಯುತ್ತಿರುವ ಕೌಟುಂಬಿಕ ಜಗಳದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ್ದ ಸಿ.ಟಿ ರವಿ, ಭವಾನಿ ಅಕ್ಕ ಬಯಸಿದರೇ ಹಾಸನದಿಂದ ಬಿಜೆಪಿ ಟಿಕೆಟ್ ಕೊಡಲು ಸಿದ್ಧವಿದೆ ಎಂದು ನಿನ್ನೆ ಹೇಳಿದ್ದರು.