ವಿಪಕ್ಷಗಳ ಒಗ್ಗಟ್ಟು ಭಾರತದ ರಾಜಕೀಯ ಚಿತ್ರಣವನ್ನು ಬದಲಿಸಲಿದೆ; ಬಿಜೆಪಿ ಎನ್ ಡಿಎಗೆ ಹೊಸ ಜೀವ ತುಂಬುವ ಪ್ರಯತ್ನ ಮಾಡುತ್ತಿದೆ: ಕಾಂಗ್ರೆಸ್

ಪ್ರತಿಪಕ್ಷಗಳ ಒಗ್ಗಟ್ಟು ಭಾರತದ ರಾಜಕೀಯ ಸನ್ನಿವೇಶದಲ್ಲಿ ‘ಗೇಮ್ ಚೇಂಜರ್’ ಆಗಲಿದೆ ಎಂದು ಕಾಂಗ್ರೆಸ್ ಬಣ್ಣಿಸಿದೆ. ಇದೇ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಏಕಾಂಗಿಯಾಗಿ ವಿರೋಧ ಪಕ್ಷಗಳನ್ನು ಸೋಲಿಸುವ ಮಾತುಗಳನ್ನಾಡುತ್ತಿದ್ದ ಬಿಜೆಪಿಯವರು ಈಗ ‘ಭೂತ’ ಎನಿಸಿಕೊಂಡಿದ್ದ ಎನ್‌ಡಿಎಗೆ ಹೊಸ ಜೀವ ತುಂಬುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದೆ. 
ಕೆ ಸಿ ವೇಣುಗೋಪಾಲ್
ಕೆ ಸಿ ವೇಣುಗೋಪಾಲ್
Updated on

ಬೆಂಗಳೂರು: ಪ್ರತಿಪಕ್ಷಗಳ ಒಗ್ಗಟ್ಟು ಭಾರತದ ರಾಜಕೀಯ ಸನ್ನಿವೇಶದಲ್ಲಿ ‘ಗೇಮ್ ಚೇಂಜರ್’ ಆಗಲಿದೆ ಎಂದು ಕಾಂಗ್ರೆಸ್ ಬಣ್ಣಿಸಿದೆ. ಇದೇ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಏಕಾಂಗಿಯಾಗಿ ವಿರೋಧ ಪಕ್ಷಗಳನ್ನು ಸೋಲಿಸುವ ಮಾತುಗಳನ್ನಾಡುತ್ತಿದ್ದ ಬಿಜೆಪಿಯವರು ಈಗ ‘ಭೂತ’ ಎನಿಸಿಕೊಂಡಿದ್ದ ಎನ್‌ಡಿಎಗೆ ಹೊಸ ಜೀವ ತುಂಬುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದೆ. 

ಇಂದು ಸಂಜೆಯಿಂದ ಆರಂಭವಾಗಲಿರುವ ವಿರೋಧ ಪಕ್ಷಗಳ ಎರಡು ದಿನಗಳ ಮಹತ್ವದ ಸಭೆಯ ಕುರಿತು ಇಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇದ್ದಕ್ಕಿದ್ದಂತೆ ಎನ್‌ಡಿಎ ನೆನಪಾಗಿದೆ. ಎನ್‌ಡಿಎಗೆ ಹೊಸ ಜೀವ ತುಂಬುವ ಪ್ರಯತ್ನಗಳು ನಡೆಯುತ್ತಿವೆ. ಇದರ ಪರಿಣಾಮ ನಾಳೆ ದೆಹಲಿಯಲ್ಲಿ ಎನ್ ಡಿಎ ಮೈತ್ರಿಕೂಟಗಳ ಸಭೆ ಕರೆದಿದ್ದಾರೆ ಎಂದರು. 

ಎನ್‌ಡಿಎ ಬಗ್ಗೆ ಇದುವರೆಗೆ ಯಾವುದೇ ಚರ್ಚೆಗಳು ನಡೆಯುತ್ತಿರಲಿಲ್ಲ, ಆದರೆ ಕೆಲ ದಿನಗಳಿಂದ ಇದ್ದಕ್ಕಿದ್ದಂತೆ  ಎನ್ ಡಿಎ ಮೈತ್ರಿಕೂಟ ಅದರ ಸಭೆಯ ಬಗ್ಗೆ ಕೇಳುತ್ತಿದ್ದೇವೆ. ಭೂತವಾಗಿ ಮಾರ್ಪಟ್ಟಿದ್ದ ಎನ್‌ಡಿಎಗೆ ಈಗ ಹೊಸ ಜೀವ ತುಂಬುವ ಪ್ರಯತ್ನ ನಡೆಯುತ್ತಿದೆ, ಇದು ಪಾಟ್ನಾದಲ್ಲಿ ನಡೆದ ವಿಪಕ್ಷಗಳ ಸಭೆಯ ಫಲಿತಾಂಶವಾಗಿದೆ ಎಂದರು.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿರುವ ಮತ್ತು ಸುಳ್ಳು ಭರವಸೆ ನೀಡಿ ವಂಚಿಸಿದವರಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

26 ವಿರೋಧ ಪಕ್ಷಗಳು ಒಗ್ಗಟ್ಟಿನಿಂದ ಮುನ್ನಡೆಯಲು ಮತ್ತು ಜನರ ಸಮಸ್ಯೆಗಳಿಗೆ ಪರಿಹಾರವನ್ನು ನೀಡಲು ಮತ್ತು ಈ ಸರ್ವಾಧಿಕಾರಿ ಸರ್ಕಾರದ ಕ್ರಮಗಳಿಗೆ ಮುಕ್ತಿ ಹಾಡಿ ಜನರ ಸಮಸ್ಯೆಗಳಿಗೆ ಪರಿಹಾರ ನೀಡಲು ನಾವು ಇಲ್ಲಿ ಸಭೆ ಸೇರುತ್ತಿದ್ದೇವೆ ಎಂದರು. 

ಇದು ವಿಪಕ್ಷಗಳ ಎರಡನೇ ಸಭೆ. ಮುಂದಿನ ಕ್ರಮ ಏನು ಎಂಬುದನ್ನು ಈ ಸಭೆಯಲ್ಲಿ ನಿರ್ಧರಿಸುತ್ತೇವೆ ಎಂದು ವೇಣುಗೋಪಾಲ್ ಹೇಳಿದರು.ಜುಲೈ 20 ರಂದು ಸಂಸತ್ತಿನ ಅಧಿವೇಶನವೂ ಪ್ರಾರಂಭವಾಗುತ್ತಿದ್ದು, ವಿರೋಧ ಪಕ್ಷಗಳು ಅದಕ್ಕಾಗಿ ತಂತ್ರವನ್ನು ರೂಪಿಸಲಿವೆ ಎಂದು ಅವರು ಹೇಳಿದರು.

ಭಾರತೀಯ ರಾಜಕೀಯ ಸನ್ನಿವೇಶದಲ್ಲಿ ಇದು ಬದಲಾವಣೆಯ ಸಮಯವಾಗಿದೆ. ಪಾಟ್ನಾ ಸಭೆಯ ನಂತರ ಪ್ರತಿಪಕ್ಷಗಳನ್ನು ಸುಲಭವಾಗಿ ಸೋಲಿಸುತ್ತೇವೆ ಎಂದು ಈಗ ಸಭೆಗಳನ್ನು ಮಾಡುತ್ತಿದ್ದಾರೆ. ಅದು ಪ್ರತಿಪಕ್ಷಗಳ ಒಗ್ಗಟ್ಟಿನ ನಿಜವಾದ ಯಶಸ್ಸು ಎಂದು ವೇಣುಗೋಪಾಲ್ ಹೇಳಿದರು.

2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಒಗ್ಗಟ್ಟಿನಿಂದ ಹೋರಾಡುವ ಕಾರ್ಯತಂತ್ರ ರೂಪಿಸಲು ಇಲ್ಲಿ ನಡೆಯುತ್ತಿರುವ ಎರಡು ದಿನಗಳ ಚಿಂತನ ಮಂಥನ ಸಮಾವೇಶದಲ್ಲಿ 24 ವಿಪಕ್ಷಗಳ ನಾಯಕರು ಪಾಲ್ಗೊಳ್ಳಲಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com