ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ದರೋಡೆಕೋರರು ಒಟ್ಟಿಗೆ; ಫೋಟೋ ಶೂಟ್ ಗಾಗಿ ಬೆಂಗಳೂರಿಗೆ ವಿಪಕ್ಷ ನಾಯಕರು: ಬಿಜೆಪಿ ಟೀಕೆ

ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ದರೋಡೆಕೋರರು ಒಟ್ಟಿಗೆ ಸೇರುತ್ತಿದ್ದಾರೆ ಎಂದು  ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಲೇವಡಿ ಮಾಡಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಆರ್.ಅಶೋಕ್
ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಆರ್.ಅಶೋಕ್

ಬೆಂಗಳೂರು: ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ದರೋಡೆಕೋರರು ಒಟ್ಟಿಗೆ ಸೇರುತ್ತಿದ್ದಾರೆ ಎಂದು  ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಲೇವಡಿ ಮಾಡಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ನಡೆಯಲಿರುವ ವಿಪಕ್ಷಗಳ ನಾಯಕರ ಸಭೆಯ ಬಗ್ಗೆ ಪ್ರತಿಕ್ರಿಯಿಸಿದ ಯತ್ನಾಳ್, ಕಾಶ್ಮೀರ-ಕನ್ಯಾಕುಮಾರಿವರೆಗಿನ ದರೋಡೆಕೋರರು ಒಟ್ಟಿಗೆ ಸೇರುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಮೋದಿಯವರನ್ನು ಸೋಲಿಸಲು ಒಗ್ಗೂಡುತ್ತಿದ್ದಾರೆ. ರಾಜ್ಯದಲ್ಲಿ ಜಾಮೀನು ಮೇಲೆ ಇರುವ ಎಲ್ಲಾ ಕುಟುಂಬಗಳು ಒಟ್ಟಿಗೆ ಸೇರಿವೆ.  ಪ್ರಧಾನಿ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಅವರು ಜೈಲು ಸೇರುವುದು ಖಚಿತ ಎಂದು ಅವರಿಗೆ ಚೆನ್ನಾಗಿ ತಿಳಿದಿದೆ, ಅದಕ್ಕಾಗಿಯೇ ಎಲ್ಲಾ ದರೋಡೆಕೋರರು ಒಟ್ಟಿಗೆ ಸೇರುತ್ತಿದ್ದಾರೆ ಎಂದು ಅವರು ಹೇಳಿದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡು ತಿಂಗಳಾಗಿದೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಬರಗಾಲ ಬಂದಿದೆ, ರೈತರ ಆತ್ಮಹತ್ಯೆಗಳು ಹೆಚ್ಚುತ್ತಿವೆ, ಆತಂಕದ ಛಾಯೆ ಮತ್ತು ಹಿಂದೂ ಕಾರ್ಯಕರ್ತರ ಹತ್ಯೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಪಕ್ಷಗಳ ಸಭೆಯ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, "ಅವರು (ವಿರೋಧ ಪಕ್ಷಗಳು) ಇದನ್ನು 'ಮಹಾಘಟಬಂಧನ್' ಎಂದು ಕರೆಯುತ್ತಿದ್ದಾರೆ ಆದರೆ ವಾಸ್ತವವಾಗಿ ಇದರಲ್ಲಿ ಯಾವುದೇ 'ಬಂಧನ್' ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ವಿಪಕ್ಷ ನಾಯಕರು ಫೋಟೋ ಶೂಟ್ ಮಾಡಲು ಬೆಂಗಳೂರಿಗೆ ಆಗಮಿಸಿದ್ದಾರೆ ಎಂದು ಮಾಜಿ ಸಚಿವ ಆರ್ ಅಶೋಕ್ ವ್ಯಂಗ್ಯವಾಡಿದ್ದಾರೆ.  ಇದೊಂದು ಫೋಟೊ ಶೂಟ್ ಅಷ್ಟೇ ಎಂದರು. ಸರ್ಕಾರ ನಡೆಸೋರು ಹೇಗೆ ಅಧಿಕಾರ ದುರುಪಯೋಗ ಮಾಡ್ತಾರೆ ಅನ್ನೋದು ನೋಡ್ತಿದ್ದೀವಿ. ದಾರಿಯುದಕ್ಕೂ ಫ್ಲೆಕ್ಸ್ ಗಳನ್ನು ನೋಡಿದ್ದೇನೆ. ಯುಪಿಎ ನಾಯಕರು ಬೆಂಗಳೂರಿಗೆ ಬಂದಿದ್ದಾರೆ.‌ ಇದು‌ ಫೋಟೋ ಶೋ ಅಷ್ಟೇ, ಎಲ್ಲರೂ ಕೈ ಎತ್ತಿ ಪೋಟೋ ಶೂಟ್ ಮಾಡ್ತಾರೆ ಹಾಗೂ ಹೋಗ್ತಾರೆ ಎಂದರು.

ಈ ರಾಜಕೀಯ ಪಕ್ಷಗಳಿಗೆ ಸಿದ್ದಾಂತ ಇಲ್ಲ. ಆ ರಾಜ್ಯಗಳಲ್ಲಿ ಒಬ್ಬೊರಿಗೊಬ್ಬರು ಕಚ್ಚಾಡ್ತಾರೆ. ತಮಿಳು ನಾಡು, ಕೇರಳ ಹಾಗೂ ಪಶ್ಚಿಮ ಬಂಗಾಳದಲ್ಲಿ ಪರಸ್ಪರ ಒಬ್ಬರಿಗೊಬ್ಬರು ಜಗಳ ಆಡ್ತಾರೆ. ಅವರಿಗೆ ಟಾರ್ಗೆಟ್ ಇಲ್ಲ ,ಅದೊಂದೇ ಅಜೆಂಡಾ ಇರೋದು ಎಂದಿದ್ದಾರೆ.

ವಿಪಕ್ಷನಾಯಕರಿಗೆ ಪ್ರಧಾನಿ ಮೋದಿ ಅವರೇ ಟಾರ್ಗೆಟ್, ದೇಶದ ಅಭಿವೃದ್ಧಿ ವಿಪಕ್ಷ ನಾಯಕರಿಗೆ ಬೇಕಾಗಿಲ್ಲ. ಪ್ರಧಾನಿ ಮೋದಿ ಈ ದೇಶದ ಅಭಿವೃದ್ಧಿ ಪರವಾಗಿದೆ, ದೇಶದ ಜನರು ಮೋದಿ ಅವರ ಜೊತೆಗಿದ್ದಾರೆ ಎಂಬುದಷ್ಟೇ ಅವರ ನಿಲುವು ಎಂದಿದ್ದಾರೆ.

ಆದರೆ ಪ್ರಧಾನಿ ಮೋದಿಗೆ ದೇಶದ ಜನರ ಆಶೀರ್ವಾದ ಇದೆ. ಅವರು ಅಭಿವೃದ್ಧಿ ಕಾರ್ಯಗಳು ಅವರಿಗೆ ರಕ್ಷಣೆ ನೀಡುತ್ತದೆ. ದೇಶ ಮಾತ್ರವಲ್ಲದೆ ವಿಶ್ವ ನಾಯಕರು ಮೋದಿ ನಾಯಕತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com