ಗ್ಯಾರಂಟಿಗಳನ್ನು ಘೋಷಿಸುವಾಗ ತಲೆಯಲ್ಲಿ ಸಗಣಿ ತುಂಬಿತ್ತಾ? ಕಾಂಗ್ರೆಸ್ ವಿರುದ್ಧ ಶೋಭಾ ಕರಂದ್ಲಾಜೆ ವಾಗ್ದಾಳಿ

ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿದಾಗ ನಿಮ್ಮ ತಲೆಯಲ್ಲಿ ಮೆದುಳು ಇರಲಿಲ್ವಾ? ಸಗಣಿ ತುಂಬಿತ್ತಾ? ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಾಂಗ್ರೆಸ್‌ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ

ಚಿಕ್ಕಮಗಳೂರು: ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿದಾಗ ನಿಮ್ಮ ತಲೆಯಲ್ಲಿ ಮೆದುಳು ಇರಲಿಲ್ವಾ? ಸಗಣಿ ತುಂಬಿತ್ತಾ? ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಾಂಗ್ರೆಸ್‌ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ಬಗ್ಗೆ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಬೇಜವಾಬ್ದಾರಿ ಸರ್ಕಾರ. ಚುನಾವಣೆಯಲ್ಲಿ ಗೆಲ್ಲಲು ಸುಳ್ಳು ಆಶ್ವಾಸನೆ ನೀಡಿದ್ದಾರೆ. ಐದು ಭರವಸೆ ಈಡೇರಿಸಲು ಸಮಸ್ಯೆ ಎದುರಿಸುತ್ತಿದ್ದಾರೆ. ಬಸ್‌ನಲ್ಲಿ ಪ್ರಯಾಣಿಸಲು ಪಾಸ್ ಕೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದಲ್ಲಿ‌ ಸಾಕಷ್ಟು ದಾಸ್ತಾನು ಇರುವುದು ತುರ್ತು ಸಂದರ್ಭದಲ್ಲಿ ಜನರಿಗೆ ನೀಡಲು. ಅದು ಬಿಟ್ಟು ಆಡಳಿತ ನೀಡಲು ಯೋಗ್ಯತೆಯಿಲ್ಲದೇ ಪ್ರತಿ ವಿಚಾರಕ್ಕೂ ಮೋದಿ, ಕೇಂದ್ರದ ಕಡೆ ಬೊಟ್ಟು ತೋರಿಸಬೇಡಿ. ಕೇಂದ್ರ ಕೊಡುತ್ತಿರುವ ಐದು ಕೆಜಿ ಸೇರಿಸಿ ಹತ್ತು ಕೆಜಿ ಹೇಳಬೇಡಿ, ನಿಮ್ಮದಷ್ಟೇ ಹತ್ತು ಕೆಜಿ ಹೇಳಿ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಆರಾಜಕತೆ ತುಂಬಿದೆ. ವಿದ್ಯುತ್ ‌ಬಿಲ್ ಹೆಚ್ಚಾಗಿದೆ, ಒಬ್ಬ ಮರ್ಯಾದೆ ಇಲ್ಲದ, ಬೇಜವಾಬ್ದಾರಿ ಮುಖ್ಯಮಂತ್ರಿಗಳಂತೆ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಅಕ್ಕಿ ಕೊಡ್ತಿಲ್ಲ ಎಂದು ಹೇಳುತ್ತಿದ್ದಾರೆ. ಕೇಂದ್ರದಲ್ಲಿ ಬಫರ್ ಸ್ಟಾಕ್ ಇರುವುದು ದೇಶಕ್ಕೆ ಆಪತ್ತು ಬಂದಾಗ ಉಪಯೋಗಿಸಲು ಅಲ್ಲ ಎಂದು ಹೇಳಿದರು.

ಚುನಾವಣೆ ಗೆಲ್ಲಲು ಸುಳ್ಳು ಗ್ಯಾರಂಟಿ ಘೋಷಣೆ ಮಾಡಿದೀರಿ, ಮಹಿಳೆಯರು ಬಸ್ ಪಾಸ್ ಪಡೆಯಲು ಸರ್ಟಿಫಿಕೇಟ್ ಕೇಳುತ್ತಿದ್ದಾರೆ. ಕೇಂದ್ರ ಸರ್ಕಾರದ ಐದು ಕೆಜಿ ಅಕ್ಕಿ ಸೇರಿ ರಾಜ್ಯದ ಜನತೆಗೆ 15 ಕೆಜಿ ಅಕ್ಕಿ ನೀಡಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com