ಸಕ್ರಿಯ ರಾಜಕಾರಣಕ್ಕೆ ಗೀತಾ ಶಿವರಾಜ್ ಕುಮಾರ್; ಲೋಕಸಭೆ ಟಿಕೆಟ್ ವರಿಷ್ಠರ ನಿರ್ಧಾರಕ್ಕೆ ಬಿಟ್ಟದ್ದು: ಮಧು ಬಂಗಾರಪ್ಪ
ಸಕ್ರಿಯ ರಾಜಕಾರಣಕ್ಕೆ ಗೀತಾ ಶಿವರಾಜ್ ಕುಮಾರ್ ಬಂದಿದ್ದಾರೆ. ಲೋಕಸಭೆಗೆ ಸ್ಪರ್ಧಿಸಲು ಅವರಿಗೆ ಟಿಕೆಟ್ ನೀಡುವ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಮಾಡಲಿದ್ದಾರೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
Published: 28th June 2023 08:39 AM | Last Updated: 28th June 2023 03:20 PM | A+A A-

ಗೀತಾ ಶಿವರಾಜ್ ಕುಮಾರ್
ತೀರ್ಥಹಳ್ಳಿ: ಸಕ್ರಿಯ ರಾಜಕಾರಣಕ್ಕೆ ಗೀತಾ ಶಿವರಾಜ್ ಕುಮಾರ್ ಬಂದಿದ್ದಾರೆ. ಲೋಕಸಭೆಗೆ ಸ್ಪರ್ಧಿಸಲು ಅವರಿಗೆ ಟಿಕೆಟ್ ನೀಡುವ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಮಾಡಲಿದ್ದಾರೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಮಾತನಾಡಿದ ಅವರು, ರಾಜ್ಯ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಲು ಗೀತಾ ಅವರಿಗೆ ಪಕ್ಷದ ಹಿರಿಯರು ಸೂಚನೆ ನೀಡಿದ್ದಾರೆ. ಗೀತಕ್ಕ ಪಕ್ಷಕ್ಕೆ ಸೇರಿದ್ದಾರೆ. ಚುನಾವಣೆ ಸ್ಫರ್ಧೆ ಬಗ್ಗೆ ಪಕ್ಷದ ನಾಯಕರು ತೀರ್ಮಾನ ಮಾಡ್ತಾರೆ. ಅದನ್ನೆಲ್ಲಾ ನಾನು ಮಾತಾಡಲ್ಲ, ತಪ್ಪಾಗುತ್ತೇ ಎಂದರು.
ಇದನ್ನೂ ಓದಿ: ಪಠ್ಯಪುಸ್ತಕ ಪರಿಷ್ಕರಣೆ: 10 ದಿನಗಳೊಳಗೆ ಕಿರುಪುಸ್ತಕಗಳ ವಿತರಣೆ- ಸಚಿವ ಮಧು ಬಂಗಾರಪ್ಪ
ನನಗೆ ಸಿಕ್ಕಿರುವ ಶಿಕ್ಷಣ ಇಲಾಖೆ ದೊಡ್ಡದು, ಸಾಕಷ್ಟು ಸಮಸ್ಯೆಗಳು ಕೂಡ ಇವೆ. ರಾಜ್ಯದಲ್ಲಿ ಸುಮಾರು 45 ಸಾವಿರಕ್ಕೂ ಅಧಿಕ ಶಾಲೆಗಳಿವೆ. ಮೂಲಭೂತ ಸೌಕರ್ಯಗಳ ಕೊರತೆಯಿದೆ. ಎಲ್ಲವನ್ನು ಬಗೆಹರಿಸುತ್ತವೆ. ಇಲಾಖೆಗೆ ಸಂಬಂಧಿಸಿದ ಅನುದಾನಕ್ಕೆ ಬಜೆಟ್ ಅಲ್ಲಿ ಸೇರಿಸಲು ಪ್ರಯತ್ನ ಮಾಡುತ್ತಿದ್ದೇನೆ. ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಕೂಡ ನಡೆಯುತ್ತಿದ್ದು, ಪ್ರಕರಣ ಕೋರ್ಟ್ ನಲ್ಲಿದೆ. ಎಲ್ಲಾ ಸಮಸ್ಯೆಗಳ ಇತ್ಯರ್ಥಕ್ಕೆ ಒಂದು ಕಮಿಟಿ ಮಾಡಿ, ಕ್ರಮ ಕೈಗೊಳ್ಳುತ್ತೇವೆ ಎಂದರು.
ಇದನ್ನೂ ಓದಿ: ಪಠ್ಯಪುಸ್ತಕಗಳ ಪರಿಷ್ಕರಣೆಗೆ ಶೀಘ್ರದಲ್ಲೇ ಸಮಿತಿ ರಚನೆ: ಶಿಕ್ಷಣ ಸಚಿವ ಮಧು ಬಂಗಾರಪ್ಪ
ಮಕ್ಕಳ ಶೂ ಸಾಕ್ಸ್ ಗೆ ಅನುದಾನ ಕಡಿಮೆ ಮಾಡಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅನುದಾನ ಮೊದಲೇ ಬಿಡುಗಡೆ ಮಾಡಲಾಗಿತ್ತು. ಇದೀಗ ಹೆಚ್ಚುವರಿ ಅನುದಾನ ಕೊಡಲಿದ್ದೇವೆ. ಗಂಡುಮಕ್ಕಳಿಗೂ ಸೈಕಲ್ ಕೊಡಲು ಪ್ರಸ್ತಾವ ಬಜೆಟ್‌ನಲ್ಲಿ ಸೇರಿಸಲು ಚರ್ಚಿಸಿದ್ದೇವೆ. ಎಷ್ಟು ಆಗುತ್ತೊ ಅಷ್ಟು ಮಾಡಲು ಕ್ರಮ ಕೈಗೊಳ್ಳಲಿದ್ದೇವೆ ಎಂದರು.