40 ಪರ್ಸೆಂಟ್ ಕಮಿಷನ್ ಸರ್ಕಾರದಲ್ಲಿ ಅತಿ ಹೆಚ್ಚು 'ಫಲ' ಉಂಡಿರುವ ಫಲಾನುಭವಿ ಇವರು: ಕಾಂಗ್ರೆಸ್ ಟ್ವೀಟ್
ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧದ ವಾಗ್ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿರುವ ಪ್ರತಿಪಕ್ಷ ಕಾಂಗ್ರೆಸ್, ಆರೋಗ್ಯ ಸಚಿವ ಡಾ. ಕೆ. ಸುಧಾಕರ್ 40 ಪರ್ಸೆಂಟ್ ಕಮಿಷನ್ ಸರ್ಕಾರದಲ್ಲಿ....
Published: 04th March 2023 05:20 PM | Last Updated: 04th March 2023 08:05 PM | A+A A-

ಕಾಂಗ್ರೆಸ್ ಟ್ವೀಟ್ ಮಾಡಿರುವ ಚಿತ್ರ
ಬೆಂಗಳೂರು: ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧದ ವಾಗ್ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿರುವ ಪ್ರತಿಪಕ್ಷ ಕಾಂಗ್ರೆಸ್, ಆರೋಗ್ಯ ಸಚಿವ ಡಾ. ಕೆ. ಸುಧಾಕರ್ 40 ಪರ್ಸೆಂಟ್ ಕಮಿಷನ್ ಸರ್ಕಾರದಲ್ಲಿ ಅತಿ ಹೆಚ್ಚು "ಫಲ" ಉಂಡಿರುವ ಫಲಾನುಭವಿ ಎಂದು ಟೀಕಿಸಿದೆ.
ಕೊರೋನಾದಿಂದ ಜನರೆಲ್ಲರೂ ಸಂತ್ರಸ್ತರು. ಆದರೆ ಫಲಾನುಭವಿ ಮಾತ್ರ ಸಚಿವ ಸುಧಾಕರ್ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಕೋವಿಡ್ ಪರಿಕರಗಳ ಖರೀದಿ ಹಗರಣದಲ್ಲಿ ಭರ್ಜರಿ ಲೂಟಿ ಮಾಡಿದ ಆರೋಗ್ಯ ಸಚಿವರು ಬಳಕೆಯನ್ನೇ ಮಾಡದ ಕೋವಿಡ್ ಸೆಂಟರ್ ಹೆಸರಲ್ಲಿ ಮಾಡಿದ ಲೂಟಿ ಲೆಕ್ಕಕ್ಕೆ ಸಿಕ್ಕಿಲ್ಲ!
ಇದನ್ನು ಓದಿ: ಅಮಿತ್ ಶಾ ಅವರೇ, ನಿಮಗೆ ದಮ್ಮು, ತಾಕತ್ತು ಇದ್ದರೆ ಪತ್ರಿಕಾಗೋಷ್ಠಿ ನಡೆಸಿ ಭ್ರಷ್ಟಾಚಾರದ ಪ್ರಶ್ನೆಗಳಿಗೆ ಉತ್ತರಿಸುವಿರಾ?
40 ಪರ್ಸೆಂಟ್ ಸರ್ಕಾರದಲ್ಲಿ ಅತಿ ಹೆಚ್ಚು "ಫಲ" ಉಂಡಿರುವ ಫಲಾನುಭವಿ ಇವರು!! ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಕರೋನಾದಿಂದ ಜನರೆಲ್ಲರೂ ಸಂತ್ರಸ್ತರು.
— Karnataka Congress (@INCKarnataka) March 4, 2023
ಆದರೆ ಫಲಾನುಭವಿ ಮಾತ್ರ - @mla_sudhakar!
ಕೋವಿಡ್ ಪರಿಕರಗಳ ಖರೀದಿ ಹಗರಣದಲ್ಲಿ ಭರ್ಜರಿ ಲೂಟಿ ಮಾಡಿದ ಆರೋಗ್ಯ ಸಚಿವರು ಬಳಕೆಯನ್ನೇ ಮಾಡದ ಕೋವಿಡ್ ಸೆಂಟರ್ ಹೆಸರಲ್ಲಿ ಮಾಡಿದ ಲೂಟಿ ಲೆಕ್ಕಕ್ಕೆ ಸಿಕ್ಕಿಲ್ಲ!#40PercentSarkara ದಲ್ಲಿ ಅತಿ ಹೆಚ್ಚು "ಫಲ" ಉಂಡಿರುವ ಫಲಾನುಭವಿ ಇವರು!! pic.twitter.com/hU6EG4oOJY