ಮೋದಿ ರೋಡ್ ಶೋ ತಂತ್ರಕ್ಕೆ ದೇವೇಗೌಡರಿಂದ ಪ್ರತಿತಂತ್ರ: ರಣರಂಗವಾಗಿ ಬದಲಾಗಲಿದೆ ಹಳೇ ಮೈಸೂರು ಭಾಗ!
ಹಳೇ ಮೈಸೂರ ಭಾಗದ ಮೇಲೆ ಬಿಜೆಪಿ ಕಣ್ಣಿದ್ದು, ಮಾ.12ರಂದು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರೋಡ್ ಶೋಗೆ ನಡೆಸುತ್ತಿರುವ ತಂತ್ರಕ್ಕೆ ಮಾಜಿ ಪ್ರಧಾನಮಂತ್ರಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ಪ್ರತಿತಂತ್ರ ರೂಪಿಸಿ, ಕೌಂಟರ್ ನೀಡಿದ್ದಾರೆ.
Published: 06th March 2023 01:43 PM | Last Updated: 06th March 2023 01:43 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಹಳೇ ಮೈಸೂರ ಭಾಗದ ಮೇಲೆ ಬಿಜೆಪಿ ಕಣ್ಣಿದ್ದು, ಮಾ.12ರಂದು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರೋಡ್ ಶೋಗೆ ನಡೆಸುತ್ತಿರುವ ತಂತ್ರಕ್ಕೆ ಮಾಜಿ ಪ್ರಧಾನಮಂತ್ರಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ಪ್ರತಿತಂತ್ರ ರೂಪಿಸಿ, ಕೌಂಟರ್ ನೀಡಿದ್ದಾರೆ.
ವಿಧಾನಸಭಾ ಚುನಾವಣೆಗೆ ಮುನ್ನ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಮಂತ್ರಿ ಎಚ್‌ಡಿ ದೇವೇಗೌಡರು ತಮ್ಮ ನೆಲೆಯನ್ನು ಬಲಪಡಿಸಲು ವಿವಿಧ ದಿನಗಳಲ್ಲಿ ಹಳೇ ಮೈಸೂರು ಭಾಗದಲ್ಲಿ ಮೆಗಾ ರೋಡ್‌ಶೋಗಳಲ್ಲಿ ಭಾಗವಹಿಸಲಿದ್ದಾರೆ. ಹೀಗಾಗಿ ಹಳೇ ಮೈಸೂರು ಭಾಗ ಮಾಜಿ ಹಾಗೂ ಹಾಲಿ ಪ್ರಧಾನಮಂತ್ರಿಗಳ ನಡುವಿನ ರಣರಂಗವಾಗಿ ಬದಲಾಗುವುದರಲ್ಲಿ ಯಾವುದೇ ಸಂಶಯಗಳಿಲ್ಲ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಮಾರ್ಚ್ 12 ರಂದು ಮೋದಿ ಅವರಿಂದ ಉದ್ಘಾಟನೆಗೊಳ್ಳಲಿದೆ. ಬೆಂಗಳೂರು ಮತ್ತು ಮೈಸೂರು ನಡುವಿನ ಪ್ರಯಾಣದ ಸಮಯವನ್ನು ಅರ್ಧದಷ್ಟು ಈ ಎಕ್ಸ್‌ಪ್ರೆಸ್‌ವೇ ಕಡಿಮೆ ಮಾಡಲಿದೆ. ಕಾರ್ಯಕ್ರಮದ ನಂತರ ಮೋದಿ ಅವರು ಬೃಹತ್ ರೋಡ್ ಶೋನಲ್ಲಿ ಭಾಗವಹಿಸಲಿದ್ದಾರೆ.
ಇದನ್ನೂ ಓದಿ: ಮಾರ್ಚ್ 12 ರಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ: ಪ್ರಲ್ಹಾದ್ ಜೋಶಿ
ಹಳೆ ಮೈಸೂರು ಭಾಗದಲ್ಲಿ ಗೆಲುವು ಸಾಧಿಸಲು ಬಿಜೆಪಿ ಹರಸಾಹಸ ಪಡುತ್ತಿದ್ದು, ಮೈಸೂರು, ಮಂಡ್ಯ, ರಾಮನಗರ ಜಿಲ್ಲೆಗಳ ಮೇಲೆ ಕಣ್ಣಿಟ್ಟಿದೆ. ಉಪಚುನಾವಣೆಯಲ್ಲಿ ನಾರಾಯಣಗೌಡ ಅವರು ಕೆಆರ್ ಪೇಟೆಯಲ್ಲಿ ಗೆಲವು ಸಾಧಿಸಿದ್ದರು.
ಮಂಡ್ಯದ ಬೂಕನಕೆರೆ, ಕೆಆರ್ ಪೇಟೆಯಿಂದ ಲಿಂಗಾಯತ ಪ್ರಬಲ ನಾಯಕ ಯಡಿಯೂರಪ್ಪ ಅವರ ಇದ್ದರೂ ಕೂಡ ಮಂಡ್ಯ ಭಾಗದಲ್ಲಿ ಬಿಜೆಪಿ ಇನ್ನೂ ತನ್ನ ಖಾತೆಯನನು ತೆರೆದಿಲ್ಲ. ಇದೀಗ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಬಗ್ಗೆ ಹೆಚ್ಚಿನ ನಿರೀಕ್ಷೆಗಳಿದ್ದು, ಜನರ ಮನಗೆಲ್ಲುವ ವಿಶ್ವಾವಿದೆ. ಎಕ್ಸ್‌ಪ್ರೆಸ್‌ವೇ ಹೆಚ್ಚಿನ ಸಂಖ್ಯೆಯ ಜನರ ಪ್ರಯಾಣವನ್ನು ಸುಗಮಗೊಳಿಸುತ್ತದೆ. ಮಂಡ್ಯದಲ್ಲಿ ರೋಡ್‌ಶೋ ಜೆಡಿಎಸ್ ಭದ್ರಕೋಟೆಯನ್ನು ಛಿದ್ರಗೊಳಿಸುವ ಗುರಿಯನ್ನು ಹೊಂದಿದೆ, ಅಲ್ಲಿ ಕಾಂಗ್ರೆಸ್ ಕೂಡ ಗಮನಾರ್ಹ ಅಸ್ತಿತ್ವವನ್ನು ಹೊಂದಿದೆ. ನಾವು ಮತದಾರರನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದ್ದೇವೆಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
ಈ ಮಧ್ಯೆ, ಮಾರ್ಚ್ 26 ರಂದು ಮೈಸೂರಿನಲ್ಲಿ ಜೆಡಿಎಸ್ ಪಂಚರತ್ನ ರಥ ಯಾತ್ರೆಯ ಸಮಾರೋಪವನ್ನು ನಡೆಸಲಿದ್ದು, ಪಕ್ಷದ ವರಿಷ್ಠ ಮತ್ತು ಮಾಜಿ ಪ್ರಧಾನಿ ದೇವೇಗೌಡರನ್ನು ರಾಮನಗರದಿಂದ ಮೈಸೂರಿಗೆ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಲು ಮುಂದಾಗಿದ್ದಾರೆ.
ಇದನ್ನೂ ಓದಿ: ಕುಂಬಳಗೋಡಿನಿಂದ ಮೈಸೂರಿನವರೆಗೆ ಎಚ್.ಡಿ. ದೇವೇಗೌಡ 100 ಕಿ.ಮೀ ರೋಡ್ ಶೋ ನಡೆಸಲು ಜೆಡಿಎಸ್ ಚಿಂತನೆ
ರೋಡ್ ಶೋನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವಂತೆ ಮಾಡಿ, ಪಕ್ಷವು ತನ್ನ ಶಕ್ತಿ ಪ್ರದರ್ಶನ ಮಾಡುವ ನಿರೀಕ್ಷೆಗಳಿವೆ. ಮಂಡ್ಯ ಜನರ ಮನಗೆದ್ದಿರುವ ಜೆಡಿಎಸ್, ಇತರೆ ಪಕ್ಷಗಳಿಗೆ ಈ ಭಾಗವನ್ನು ಬಿಟ್ಟುಕೊಡಲು ಸಿದ್ಧವಿಲ್ಲ. ಮಂಡ್ಯ ಮತ್ತು ಮೈಸೂರಿನಲ್ಲಿ ಅಧಿಕಾರ ಮುಂದುವರಿಸಲು ಸಕಲ ಪ್ರಯತ್ನಗಳನ್ನು ನಡೆಸಲಿದೆ.
ದೇವೇಗೌಡರ ಆರೋಗ್ಯದ ಬಗ್ಗೆ ನಮಗೆ ಅರಿವಿದ್ದು, ಅಷ್ಟರೊಳಗೆ ಅವರು ಗುಣಮುಖರಾಗುತ್ತಾರೆಂಬ ವಿಶ್ವಾಸವಿದೆ ಎಂದು ಜೆಡಿಎಸ್ ಶಾಸಕರೊಬ್ಬರು ಹೇಳಿದ್ಜಾರೆ.