ಏನಪ್ಪಾ? ಎಷ್ಟು ಕೋಟಿ ಹಣ ಖರ್ಚು ಮಾಡಿ ಮನೆ ಕಟ್ಟುತ್ತಿದ್ದೀಯಾ? ಬೆಂಗಳೂರು-ಮೈಸೂರು ಹೈವೇಯಲ್ಲಿ ಎಷ್ಟು ಬಂತು? ನಿನ್ನ ಮನೆ ಹೇಗಿದೆ?

ಏನಪ್ಪಾ? ಎಷ್ಟು ಕೋಟಿ ಹಣ ಖರ್ಚು ಮಾಡಿ ಮನೆ ಕಟ್ಟುತ್ತಿದ್ದೀಯಾ? ಬೆಂಗಳೂರು-ಮೈಸೂರು ಹೈವೇ ನಿರ್ಮಾಣದಲ್ಲಿ ಎಷ್ಟು ಕೋಟಿ ಬಂತು? ಬೆಕ್ಕು ಕಣ್ಮುಚ್ಚಿಕೊಂಡು ಹಾಲು ಕುಡಿದರೆ ಯಾರಿಗೂ ಗೊತ್ತಾಗುದಿಲ್ಲವಾ?
ಪ್ರತಾಪ್ ಸಿಂಹ
ಪ್ರತಾಪ್ ಸಿಂಹ
Updated on

ಮೈಸೂರು: ಏನಪ್ಪಾ? ಎಷ್ಟು ಕೋಟಿ ಹಣ ಖರ್ಚು ಮಾಡಿ ಮನೆ ಕಟ್ಟುತ್ತಿದ್ದೀಯಾ? ಬೆಂಗಳೂರು-ಮೈಸೂರು ಹೈವೇ ನಿರ್ಮಾಣದಲ್ಲಿ ಎಷ್ಟು ಕೋಟಿ ಬಂತು? ಬೆಕ್ಕು ಕಣ್ಮುಚ್ಚಿಕೊಂಡು ಹಾಲು ಕುಡಿದರೆ ಯಾರಿಗೂ ಗೊತ್ತಾಗುದಿಲ್ಲವಾ ಎಂದು ಪ್ರತಾಪ್ ಸಿಂಹ ವಿರುದ್ಧ ಬಿಜೆಪಿ ಎಂಎಲ್ ಸಿ ಎಚ್. ವಿಶ್ವನಾಥ್ ಪ್ರಶ್ನಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ನಾನು ರಾಜಕಾರಣಕ್ಕೆ ಬಂದು 50 ವರ್ಷ ಆಯ್ತು. ನನ್ನ ಮನೆ ಹೇಗಿದೆ? ನೀನು ನಿನ್ನೆ ಬಂದವನು, ನಿನ್ನ ಮನೆ ಹೇಗಿದೆ? ಎಷ್ಟು ಕೋಟಿ ಖರ್ಚು ಮಾಡಿ ಮನೆ ಕಟ್ಟುತ್ತಿದ್ದೀಯಾ ಬಹಿರಂಗಪಡಿಸು ಎಂದು ಸವಾಲು ಹಾಕಿದ್ದಾರೆ.

ಎಕ್ಸ್​ಪ್ರೆಸ್​ ಹೈವೇ ಕಾಮಗಾರಿಯಲ್ಲಿ ಪ್ರತಾಪ್ ಸಿಂಹ ಲಾಭವಾಗಿಲ್ಲವೇ ಎಂದು ಹೆಚ್.ವಿಶ್ವನಾಥ್​ ಪ್ರಶ್ನಿಸಿದ್ದಾರೆ. ಹೈವೇ ನಿರ್ಮಾಣಕ್ಕೆ ಜಲ್ಲಿಕಲ್ಲು, ಮರಳು ಸರಬರಾಜು ಮಾಡಿದವರು ನಿಮ್ಮ ಸ್ನೇಹಿತರಲ್ಲವೇ? ಬೆಕ್ಕು ಕಣ್ಣುಮುಚ್ಚಿಕೊಂಡು ಹಾಲು ಕುಡಿದರೆ ಗೊತ್ತಾಗಲ್ವಾ ಪ್ರತಾಪ್​ ಸಿಂಹ. ಪ್ರತಾಪ್ ಸಿಂಹಗೆ ನಾಚಿಕೆ ಮಾನ ಮರ್ಯಾದೆ ಯಾವುದೂ ಇಲ್ಲ. ಉರಿಗೌಡ, ನಂಜೇಗೌಡ ಹೆಸರು ಹೇಳಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ಎಲ್ಲದರಲ್ಲೂ ರಾಜಕೀಯ ಮಾಡುವ ಇಂಥವರಿಗೆ ಏನನ್ನಬೇಕು? ಇವರನ್ನು ಅಧಿಕಾರಕ್ಕೆ ತಂದಿದ್ದಕ್ಕೆ ನಾನು ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.

ಹೈವೇಯನ್ನು ಪ್ರಧಾನಿ ನರೇಂದ್ರ ಮೋದಿ ಅಥವಾ ಸಂಸದ ಪ್ರತಾಪ್ ಸಿಂಹ ಅವರಾಗಲಿ ಅವರ ಅಪ್ಪನ ಮನೆಯಿಂದ ಹಣ ತಂದು ಮಾಡಿಲ್ಲ, ಸಾರ್ವಜನಿಕರ ಹಣದಿಂದ ನಿರ್ಮಾಣ ಮಾಡಿರುವುದು ಎಂದು ವಾಗ್ದಾಳಿ ನಡೆಸಿದರು. ಬೆಂಗಳೂರು-ಮೈಸೂರು ಹೆದ್ದಾರಿಯನ್ನು ಮಾ.13 ರಂದು ಉದ್ಘಾಟನೆಗೊಂಡು ಇಂದಿನಿಂದ ಟೋಲ್​ ಸಂಗ್ರಹ ಪ್ರಾರಂಭವಾಗಿದೆ. ಇದಕ್ಕೆ ಭಾರೀ ವಿರೋಧವೂ ವ್ಯಕ್ತವಾಗುತ್ತಿದೆ.

ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ ಹೈವೇಯನ್ನು ಸಂಪೂರ್ಣ ಉದ್ಘಾಟನೆ ಮಾಡಿಲ್ಲ. ಕೇವಲ ಅರ್ಧ ಪೂರ್ಣಗೊಂಡಿರುವ ಹೈವೇ ಉದ್ಘಾಟನೆ ಮಾಡಿದ್ದಾರೆ. ಅರ್ಧ ಶೇವ್ ಮಾಡಿದ್ದಾರೆ, ಮತ್ತರ್ಧ ಶೇವ್ ಮಾಡಿಲ್ಲ ಎಂದು ವಿಶ್ವನಾಥ್ ವ್ಯಂಗ್ಯವಾಡಿದ್ದಾರೆ. ಅಲ್ಲದೆ, ಹೈವೇಯಲ್ಲಿ ಸಂಚರಿಸಲು ದುಬಾರಿ ಟೋಲ್​ ಹಾಕುತ್ತಿದ್ದಾರೆ. ಇದನ್ನು ವಿರೋಧಿಸಿ ಮಾರ್ಚ್ 17ರಂದು ಹೈವೇಯಲ್ಲಿ ಒಂದು ಗಂಟೆ ಶಾಂತಿಯುತ ಪ್ರತಿಭಟನೆ ಮಾಡುತ್ತೇನೆ. ನನ್ನೊಂದಿಗೆ ಯಾರು ಬರದಿದ್ದರೂ ಏಕಾಂಗಿಯಾಗಿ ಪ್ರತಿಭಟನೆ ಮಾಡುತ್ತೇನೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com