ಜೆಡಿಎಸ್ ಗೆ ಇಪ್ಪತ್ತು, ಕಾಂಗ್ರೆಸ್ ಗೆ ಎಪ್ಪತ್ತು, ಈಗ ಕುಸ್ತಿ ಮಾಡುತ್ತಿವೆ ಜೋಡೆತ್ತು: ಆರ್.ಅಶೋಕ್ ವ್ಯಂಗ್ಯ
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ 20 ಸ್ಥಾನ ಮತ್ತು ಕಾಂಗ್ರೆಸ್ 70 ಸ್ಥಾನವನ್ನಷ್ಟೇ ಗೆಲ್ಲಲಿವೆ ಎಂದು ಕಂದಾಯ ಸಚಿವ ಆರ್. ಅಶೋಕ್ ಲೇವಡಿ ಮಾಡಿದರು.
Published: 16th March 2023 12:42 PM | Last Updated: 16th March 2023 02:04 PM | A+A A-

ಆರ್.ಅಶೋಕ್
ಚಿಕ್ಕಬಳ್ಳಾಪುರ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ 20 ಸ್ಥಾನ ಮತ್ತು ಕಾಂಗ್ರೆಸ್ 70 ಸ್ಥಾನವನ್ನಷ್ಟೇ ಗೆಲ್ಲಲಿವೆ ಎಂದು ಕಂದಾಯ ಸಚಿವ ಆರ್. ಅಶೋಕ್ ಲೇವಡಿ ಮಾಡಿದರು.
ಚಿಕ್ಕಬಳ್ಳಾಪುರದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಮತ್ತು ಕಾಂಗ್ರೆಸ್‌ನವರು ಯಾವಾಗ ಒಂದಾಗುತ್ತಾರೊ, ಕಿತ್ತಾಡುತ್ತಾರೊ ಗೊತ್ತಾಗುವುದಿಲ್ಲ. 14 ತಿಂಗಳ ಕಾಲ ಡಿ.ಕೆ.ಶಿವಕುಮಾರ್ ಮತ್ತು ಎಚ್.ಡಿ.ಕುಮಾರಸ್ವಾಮಿ ನಾವು ಜೋಡೆತ್ತು ಎಂದು ಕೈ ಎತ್ತಿದರು. ಆದರೆ ಈಗ ಕುಸ್ತಿ ಮಾಡುತ್ತಿದ್ದಾರೆ. 14 ತಿಂಗಳು ಜನರಿಗೆ ಟೋಪಿ ಹಾಕಿದರು ಎಂದರು ವ್ಯಂಗ್ಯ ಮಾಡಿದ್ದಾರೆ.
ಜೆಡಿಎಸ್‌ನವರು ಗೆಲ್ಲುವುದಿಲ್ಲ. ಅವರನ್ನು ನಂಬಿಕೊಂಡರೆ ಕಷ್ಟ. ಅವರು ಗೆಲ್ಲುವುದೇ 20 ಸ್ಥಾನ. ಶಿವಲಿಂಗೇಗೌಡರು, ಗುಬ್ಬಿ ಶ್ರೀನಿವಾಸ್ ಜೆಡಿಎಸ್ ತೊರೆಯುತ್ತಿದ್ದಾರೆ. ಎಲ್ಲರೂ ಆ ಪಕ್ಷದಿಂದ ಓಡು ಮಗಾ ಓಡು ಮಗಾ ಎನ್ನುತ್ತಿದ್ದಾರೆ ಎಂದು ಹೇಳಿದರು.