ಅರಕಲಗೂಡು ಹಾಲಿ ಶಾಸಕ ಎಟಿ ರಾಮಸ್ವಾಮಿ ವಿರುದ್ಧ ಗುಡುಗಿದ ಪ್ರಜ್ವಲ್ ರೇವಣ್ಣ

ಅರಕಲಗೂಡು ಹಾಲಿ ಶಾಸಕ ಎಟಿ ರಾಮಸ್ವಾಮಿ ವಿರುದ್ಧ ಶುಕ್ರವಾರ ಸಂಸದ ಪ್ರಜ್ವಲ್‌ ರೇವಣ್ಣ ಅವರು ತೀವ್ರವಾಗಿ ವಾಗ್ದಾಳಿ ನಡೆಸಿದರು.
ಪ್ರಜ್ವಲ್ ರೇವಣ್ಣ
ಪ್ರಜ್ವಲ್ ರೇವಣ್ಣ

ಹಾಸನ: ಅರಕಲಗೂಡು ಹಾಲಿ ಶಾಸಕ ಎಟಿ ರಾಮಸ್ವಾಮಿ ವಿರುದ್ಧ ಶುಕ್ರವಾರ ಸಂಸದ ಪ್ರಜ್ವಲ್‌ ರೇವಣ್ಣ ಅವರು ತೀವ್ರವಾಗಿ ವಾಗ್ದಾಳಿ ನಡೆಸಿದರು.

ಶುಕ್ರವಾರ ಅರಕಲಗೂಡಿನಲ್ಲಿ ನಡೆದ ಪಂಚರತ್ನ ಯಾತ್ರೆಯಲ್ಲಿ ಜೆಡಿಎಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಜ್ವಲ್ ರೇವಣ್ಣ, ಕಳೆದ 2 ವರ್ಷಗಳಿಂದ ರಾಮಸ್ವಾಮಿಯವರು ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆಂದುವಾಗ್ದಾಳಿ ನಡೆಸಿದರು.

ರಾಮಸ್ವಾಮಿ ಅವರು ಜೆಡಿಎಸ್ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ ಮತ್ತು ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರನ್ನು ನಾಶಪಡಿಸಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಪಡೆದು ಸ್ಪರ್ಧಿಸಲು ಎಟಿ ರಾಮಸ್ವಾಮಿಯವರು ನಿರಾಕರಿಸಿದ್ದು, ಹೀಗಾಗಿಯೇ ಎ.ಮಂಜು ಅವರಿಗೆ ಪಕ್ಷ ಸೇರಲು ಗ್ರೀನ್ ಸಿಗ್ನಲ್ ನೀಡಲಾಗಿದೆ ಎಂದರು. ಇದಲ್ಲದೆ ಶಾಸಕರು ಹೆಚ್.ಡಿ.ರೇವಣ್ಣ ಅವರು ಅವಮಾನಿಸಿದ್ದಾರೆಂದು ಆರೋಪಿಸಿದರು.

ಈ ಬಾರಿಯ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು, ಸಂಪೂರ್ಣ ಬಹುಮತದೊಂದಿಗೆ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ. ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿನ ಆಂತರಿಕ ಬಿಕ್ಕಟ್ಟುಗಳು ಮತ್ತು ನಕಲಿ ಭರವಸೆಗಳಿಂದ ಜನರು ಹತಾಶರಾಗಿದ್ದು, ಪಕ್ಷದ ಪಂಚರತ್ನ ರಥ ಯಾತ್ರೆಗೆ ಸಮಾಜದ ಎಲ್ಲಾ ವರ್ಗಗಳಿಂದ ಭಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com