ನನ್ನ ಅಪ್ಪನನ್ನು ಮರೆಯುತ್ತಿರುವ ಬಿಜೆಪಿ ಗಂಭೀರವಾಗಿ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು: ಅನಂತ್ ಕುಮಾರ್ ಪುತ್ರಿ ಅಸಮಾಧಾನ

ಬಿಜೆಪಿ ಪಕ್ಷಕ್ಕಾಗಿ ಹಲವು ವರ್ಷಗಳ ಕಾಲ ದುಡಿದು ಕೇಂದ್ರ ಸಚಿವರಾಗಿ ಬೆಂಗಳೂರಿಗೆ ಕರ್ನಾಟಕಕ್ಕೆ ಸಾಕಷ್ಟು ಕೆಲಸ ಮಾಡಿದ್ದ, ಕೊಡುಗೆ ನೀಡಿದ್ದ  ಮಾಜಿ ಸಚಿವ, ದಿವಂಗತ ಅನಂತ್ ಕುಮಾರ್ ರವರ ಹೆಸರನ್ನು ಏಕೆ ಪ್ರಮುಖ ರಸ್ತೆಗಳಿಗೆ ಇಡುತ್ತಿಲ್ಲ ಎಂಬ ಮಾತುಗಳು, ಆಕ್ಷೇಪಗಳು ಇತ್ತೀಚೆಗೆ ಕೇಳಿಬರುತ್ತಿವೆ. 
ಅನಂತ್ ಕುಮಾರ್-ವಿಜೇತ(ಸಂಗ್ರಹ ಚಿತ್ರ)
ಅನಂತ್ ಕುಮಾರ್-ವಿಜೇತ(ಸಂಗ್ರಹ ಚಿತ್ರ)

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ರಸ್ತೆಗಳಿಗೆ ಇತ್ತೀಚೆಗೆ ನಟರ ಹೆಸರಿಡುವುದು ಸಾಮಾನ್ಯವಾಗಿದೆ. ಆ ಮಧ್ಯೆ ಬಿಜೆಪಿ ಪಕ್ಷಕ್ಕಾಗಿ ಹಲವು ವರ್ಷಗಳ ಕಾಲ ದುಡಿದು ಕೇಂದ್ರ ಸಚಿವರಾಗಿ ಬೆಂಗಳೂರಿಗೆ ಕರ್ನಾಟಕಕ್ಕೆ ಸಾಕಷ್ಟು ಕೆಲಸ ಮಾಡಿದ್ದ, ಕೊಡುಗೆ ನೀಡಿದ್ದ  ಮಾಜಿ ಸಚಿವ, ದಿವಂಗತ ಅನಂತ್ ಕುಮಾರ್ ರವರ ಹೆಸರನ್ನು ಏಕೆ ಪ್ರಮುಖ ರಸ್ತೆಗಳಿಗೆ ಇಡುತ್ತಿಲ್ಲ ಎಂಬ ಮಾತುಗಳು, ಆಕ್ಷೇಪಗಳು ಇತ್ತೀಚೆಗೆ ಕೇಳಿಬರುತ್ತಿವೆ. 

ಈ ಬಗ್ಗೆ ಪತ್ರಿಕೆಯೊಂದರಲ್ಲಿ ಬಂದಿರುವ ವರದಿಯನ್ನು ಹಂಚಿಕೊಂಡು ಅನಂತ್ ಕುಮಾರ್ ಅವರ ಪುತ್ರಿ ವಿಜೇತಾ ಅನಂತ್ ಕುಮಾರ್ ಮಾಡಿರುವ ಟ್ವೀಟ್ ಸುದ್ದಿಯಾಗಿದೆ. ನನ್ನ ಅಪ್ಪನನ್ನು ಮರೆತಿರಾ ಎಂದು ನೋವಿನಿಂದ ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, “ನನ್ನ ಅಪ್ಪ ದಿವಂಗತ ಅನಂತ್ ಕುಮಾರ್ 1987ರಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಅಲ್ಲಿಂದ ತಮ್ಮ ಕೊನೆಯ ಉಸಿರಿನವರೆಗೆ ಅವರು ಬಿಜೆಪಿಗಾಗಿಯೇ ದುಡಿದರು. ಅನೇಕ ರಸ್ತೆಗಳಿಗೆ, ರೈಲು ಮಾರ್ಗಗಳಿಗೆ ಹಲವಾರು ಸಾಧಕರ ಹೆಸರಿಡುತ್ತಿದ್ದೀರಿ. ಹಲವಾರು ಯೋಜನೆಗಳ ಉದ್ಘಾಟನಾ ಭಾಷಣಗಳಲ್ಲಿ ಬಿಜೆಪಿಗಾಗಿ ದುಡಿದವರನ್ನು ಸ್ಮರಿಸುತ್ತಿದ್ದೀರಿ. ಆದರೆ, ಬಿಜೆಪಿಗಾಗಿ ಜೀವನಪೂರ್ತಿ ದುಡಿದ, ಪಕ್ಷಕ್ಕೆ ಅನೇಕ ಸೇವೆಗಳನ್ನು ಮಾಡಿದ ನನ್ನ ಅಪ್ಪನ ಹೆಸರು ಮಾತ್ರ ನಿಮಗೆ ನೆನಪಿಗೆ ಬರುವುದಿಲ್ಲವೇ?’’ ಎಂದು ಅವರು ಪ್ರಶ್ನಿಸಿದ್ದಾರೆ.

ವಿವಿಧ ಕಾರ್ಯಕ್ರಮಗಳಲ್ಲಿ ನನ್ನ ಅಪ್ಪನ ಹೆಸರನ್ನು ನೆಪಮಾತ್ರಕ್ಕೂ ಸ್ಮರಿಸದೇ ಇರುವುದು ಸರಿಯೇ ಅಥವಾ ನನ್ನ ಅಪ್ಪನ ಸೇವೆಯು ಕ್ಷುಲ್ಲಕವಾದದ್ದು ಎಂದು ತಿಳಿಯಲಾಗಿದೆಯೇ ಅವರು ಇಂದಿಗೂ ಲಕ್ಷಾಂತರ ಜನರ ಹೃದಯದಲ್ಲಿ ಜೀವಂತವಾಗಿದ್ದಾರೆ. ಅವರನ್ನು ಮರೆತ ಪಕ್ಷವು ಒಮ್ಮೆ ಆತ್ಮವಿಮರ್ಶೆ ಮಾಡಿಕೊಳ್ಳಲಿ, ಈ ಬಗ್ಗೆ ಗಂಭೀರವಾಗಿ ಯೋಚಿಸುವ ಅಗತ್ಯವಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com