ಬೆಂಗಳೂರು: ಕರ್ನಾಟಕದಲ್ಲಿ ಚುನಾವಣಾ ಆಯೋಗವು ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸುವುದರೊಂದಿಗೆ ಆಡಳಿತಾರೂಢ ಬಿಜೆಪಿ ನಾಲ್ಕು ದಶಕಗಳ ಹಳೆಯ ಇತಿಹಾಸವನ್ನು ಪುನರ್ ಸೃಷ್ಟಿಸಲಿದೆಯೇ ಅಥವಾ 2024ರ ಲೋಕಸಭಾ ಚುನಾವಣೆ ಸವಾಲು ಇರುವಂತೆಯೇ ಕಾಂಗ್ರೆಸ್ ಬಿಜೆಪಿಯಿಂದ ಅಧಿಕಾರವನ್ನು ಕಸಿದುಕೊಳ್ಳಲಿದೆಯೇ ಎಂಬುದುನ್ನು ಕಾದು ನೋಡಬೇಕಾಗಿದೆ.
1985 ರಿಂದ ರಾಜ್ಯದಲ್ಲಿ ಯಾವುದೇ ರಾಜಕೀಯ ಪಕ್ಷವು ಸತತವಾಗಿ ಜನಾದೇಶವನ್ನು ಗೆದಿಲ್ಲ. ಬಿಜೆಪಿ ಈ ಇತಿಹಾಸವನ್ನು ಪುನಃ ಬರೆಯಲು ಮತ್ತು ತನ್ನ ದಕ್ಷಿಣ ಕೋಟೆಯನ್ನು ಉಳಿಸಿಕೊಳ್ಳಲು ಉತ್ಸುಕವಾಗಿದೆ. ಬಿಜೆಪಿಯಿಂದ ಅಧಿಕಾರ ಕಸಿದುಕೊಂಡು 2024 ರ ಲೋಕಸಭೆ ಚುನಾವಣೆಯಲ್ಲಿ ತನ್ನನ್ನು ಪ್ರಮುಖ ಪ್ರತಿಪಕ್ಷ ಎಂದು ಹೇಳಿಕೊಳ್ಳಲು ಕಾಂಗ್ರೆಸ್ ಹವಣಿಸುತ್ತಿದೆ. ಅಲ್ಲದೆ ಹಿಂದೆ ಮಾಡಿದಂತೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ನೇತೃತ್ವದ ಜೆಡಿಎಸ್ ಸರ್ಕಾರ ರಚನೆಯ ಕೀಲಿಕೈ ಹಿಡಿದುಕೊಂಡು "ಕಿಂಗ್ ಮೇಕರ್" ಆಗಿ ಹೊರಹೊಮ್ಮುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಅನುಕ್ರಮವಾಗಿ 124 ಮತ್ತು 93 ಸ್ಥಾನಗಳಿಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿವೆ. ಕಳೆದ ಎರಡು ದಶಕಗಳಂತೆ, ಮೇ 10 ರ ಚುನಾವಣೆಯಲ್ಲಿ ಕರ್ನಾಟಕವು ತ್ರಿಕೋನ ಸ್ಪರ್ಧೆಯನ್ನು ಎದುರಿಸಲಿದೆ, ಹೆಚ್ಚಿನ ಕ್ಷೇತ್ರಗಳಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಡುವೆ ನೇರ ಹೋರಾಟವಿದೆ.
ಆಮ್ ಆದ್ಮಿ ಪಕ್ಷವು (ಎಎಪಿ) ಸ್ಪರ್ಧಿಸಲು ಪ್ರಯತ್ನ ಮಾಡುತ್ತಿದ್ದರೆ, ಗಣಿ ಉದ್ಯಮಿ ಜನಾರ್ದನ ರೆಡ್ಡಿ ಅವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ), ಎಡಪಕ್ಷಗಳು, ಬಿಎಸ್‌ಪಿ, ಎಸ್‌ಡಿಪಿಐ (ನಿಷೇಧಿತ ಪಿಎಫ್‌ಐನ ರಾಜಕೀಯ ವಿಭಾಗ) ಮತ್ತು ಅಸಾದುದ್ದೀನ್ ಓವೈಸಿ- ನೇತೃತ್ವದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಆಯ್ದ ಕೆಲವು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ. ಮತದಾರರು ಯಾವುದೇ ಪಕ್ಷಕ್ಕೆ ಸತತ ಜನಾದೇಶವನ್ನು ನೀಡದ ಕಾರಣ, ಕರ್ನಾಟಕ ಚುನಾವಣೆಯಲ್ಲಿ ಆಡಳಿತ ವಿರೋಧಿತ್ವವು ಪ್ರಮುಖ ಅಂಶವಾಗಿದೆ ಎಂದು ರಾಜಕೀಯ ವೀಕ್ಷಕರು ಭಾವಿಸುತ್ತಾರೆ.
1985 ರಲ್ಲಿ ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಪಕ್ಷವು ಮತ್ತೆ ಅಧಿಕಾರಕ್ಕೆ ಬಂದಾಗ ಇದು ಕೊನೆಯದಾಗಿ ಸಂಭವಿಸಿತು. ಕಾಂಗ್ರೆಸ್‌ನ ವೋಟ್ ಬೇಸ್ ರಾಜ್ಯದಾದ್ಯಂತ ಸಮನಾಗಿ ಹರಡಿಕೊಂಡಿದ್ದರೂ, ವೀರಶೈವ ಮತ್ತು ಲಿಂಗಾಯಿತರು ಹೆಚ್ಚಿನ ಸಂಖ್ಯೆಯಲ್ಲಿರುವ ಉತ್ತರ ಮತ್ತು ಮಧ್ಯ ಕರ್ನಾಟಕದಲ್ಲಿ ಹೆಚ್ಚಿನ ಬಿಜೆಪಿ ಮತದಾರರಿದ್ದಾರೆ. ಹಳೆ ಮೈಸೂರು ಪ್ರದೇಶದ ಒಕ್ಕಲಿಗ ಭದ್ರಕೋಟೆಯಲ್ಲಿ ಜೆಡಿ(ಎಸ್) ಪ್ರಾಬಲ್ಯ ಹೊಂದಿದೆ. ಕರ್ನಾಟಕದ ಜನಸಂಖ್ಯೆಯಲ್ಲಿ ಶೇ. 17 ರಷ್ಟು ಲಿಂಗಾಯಿತರು, ಶೇ.15 ರಷ್ಟು ಒಕ್ಕಲಿಗರು, ಶೇ.35 ರಷ್ಟು ಒಬಿಸಿಗಳು, ಶೇ.18 ರಷ್ಟು ಎಸ್ ಸಿ, ಎಸ್ ಟಿಗಳು ಮತ್ತು ಶೇ. 12.92 ರಷ್ಟು ಮುಸ್ಲಿಂರು ಮತ್ತು ಶೇ, 3 ರಷ್ಟು ಬ್ರಾಹ್ಮಣರಿದ್ದಾರೆ. ಬಿಜೆಪಿ ಸಂಪೂರ್ಣ ಬಹುಮತವನ್ನು ಖಚಿತಪಡಿಸಿಕೊಳ್ಳಲು ಕನಿಷ್ಠ 150 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹೊಂದಿದೆ. ಸಾಂಪ್ರದಾಯಿಕವಾಗಿ ದುರ್ಬಲವಾಗಿರುವ ಹಳೆ ಮೈಸೂರು ಭಾಗದಲ್ಲಿ ಕಾಲಿಡಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ.
ನಾಯಕರ ಪ್ರಕಾರ ಬೆಂಗಳೂರಿನಲ್ಲಿ 28 ಸೇರಿದಂತೆ ಈ ಭಾಗದಲ್ಲಿ 89 ಸ್ಥಾನಗಳನ್ನು ಹೊಂದಿದೆ. ಇಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗದ ಕಾರಣ ಬಿಜೆಪಿಗೆ ಪಕ್ಷವು ಬಹುಮತ ಪಡೆಯಲು ಸಾಧ್ಯವಾಗುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಪುನರಾವರ್ತಿತ ಭೇಟಿಗಳು ಮತ್ತು ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ನಡ್ಡಾಅವರ ರಾಜ್ಯ ಭೇಟಿ ಪ್ರಚಾರದ ಉದ್ದೇಶವಿತ್ತು ಎಂಬುದುರಲ್ಲಿ ಯಾವುದೇ ಅನುಮಾನವಿಲ್ಲ. ಟಿಕೆಟ್ ಹಂಚಿಕೆಯ ನಂತರದ ಅಸಮಾಧಾನವನ್ನು ಪಕ್ಷ ಹೇಗೆ ನಿರ್ವಹಿಸುತ್ತದೆ ಎಂಬುದು ಪ್ರಮುಖವಾಗಿದೆ. ಆಡಳಿತಾ ವಿರೋಧಿ ಅಲೆಯ ನಡುವೆ ಮೋದಿ ಅವರ ಅಭಿವೃದ್ಧಿ ಪರ ಅಜೆಂಡಾ, ಡಬಲ್ ಇಂಜಿನ್ ಸರ್ಕಾರದ ಕೆಲಸಗಳು, ಜನಪ್ರಿಯ ಯೋಜನೆಗಳು, ಹಿಂದುತ್ವ ಕಾರ್ಡ್ ನೊಂದಿಗೆ ಪಕ್ಷ ಗೆಲುವಿನ ವಿಶ್ವಾಸದಲ್ಲಿದೆ.
Advertisement