'ಜೆಡಿಎಸ್‌ಗೆ ಮತ ಹಾಕಿದರೆ ಕನ್ನಡಿಗರಿಗೆ ಮತ ಹಾಕಿದಂತೆ': ಪ್ರಧಾನಿ ಮೋದಿಗೆ ದಳಪತಿಗಳ ಕೌಂಟರ್

ಜೆಡಿಎಸ್ ಪಕ್ಷ  ಕಾಂಗ್ರೆಸ್‌ನ ‘ಬಿ’ ಟೀಮ್ ಎಂದು ಪ್ರಧಾನಿ ನರೇಂದ್ರ ಮೋದಿಯವರ ಗೇಲಿ ಮಾಡಿದ ಬೆನ್ನಲ್ಲೇ ಜೆಡಿಎಸ್ ನಾಯಕರು ಹೊಸ ಅಭಿಯಾನ ಆರಂಭಿಸಿದ್ದಾರೆ.
ನರೇಂದ್ರ ಮೋದಿ
ನರೇಂದ್ರ ಮೋದಿ

ಬೆಂಗಳೂರು:  ಜೆಡಿಎಸ್ ಪಕ್ಷ  ಕಾಂಗ್ರೆಸ್‌ನ ‘ಬಿ’ ಟೀಮ್ ಎಂದು ಪ್ರಧಾನಿ ನರೇಂದ್ರ ಮೋದಿಯವರ ಗೇಲಿ ಮಾಡಿದ ಬೆನ್ನಲ್ಲೇ ಜೆಡಿಎಸ್ ನಾಯಕರು ಹೊಸ ಅಭಿಯಾನ ಆರಂಭಿಸಿದ್ದಾರೆ.

ಜೆಡಿಎಸ್‌ಗೆ ವೋಟ್ ಮಾಡಿದರೆ ಕನ್ನಡಿಗರಿಗೆ ಮತ ಹಾಕಿದಂತೆ ಎಂಬ ಅಭಿಯಾನವನ್ನು ಆರಂಭಿಸಿದೆ. ಜೆಡಿಎಸ್‌ನ ಭದ್ರಕೋಟೆಯಾಗಿರುವ ಚನ್ನಪಟ್ಟಣದಲ್ಲಿ ಭಾನುವಾರ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಜೆಡಿಎಸ್ ಪಕ್ಷವು ಕಾಂಗ್ರೆಸ್‌ನ 'ಬಿ' ಟೀಮ್ ಎಂದು ವಾಗ್ದಾಳಿ ನಡೆಸಿದ್ದರು.  ಜೆಡಿಎಸ್‌ಗೆ ಹಾಕುವ ಪ್ರತಿಯೊಂದು ಮತದಿಂದ ಕಾಂಗ್ರೆಸ್‌ಗೆ ಲಾಭವಾಗಲಿದೆ ಎಂದು ಹೇಳಿದ್ದರು.

ಈ ಹೇಳಿಕೆಗೆ ತಿರುಗೇಟು ನೀಡಿರುವ ಜೆಡಿಎಸ್, 'ಜನತಾದಳಕ್ಕೆ ಮತ ಹಾಕಿದರೆ, ಅದು ಕನ್ನಡಿಗರಿಗೆ ಮತ ಹಾಕಿದಂತೆ' (ಜೆಡಿಎಸ್‌ಗೆ ಮತ ಹಾಕುವುದು ಕನ್ನಡಿಗರಿಗೆ ಮತ ಹಾಕುವುದು) ಎಂಬ ಅಭಿಯಾನವನ್ನು ಆರಂಭಿಸಿದೆ. ಮತದಾನದ ದಿನವಾದ ಮೇ 10 ರವರೆಗೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ತಮ್ಮ ಪ್ರೊಫೈಲ್ ಮತ್ತು ಫೋಟೋಗಳನ್ನು ಪ್ರದರ್ಶಿಸಲು ಪಕ್ಷವು ತನ್ನ ಕಾರ್ಯಕರ್ತರಿಗೆ ಮನವಿ ಮಾಡಿದೆ.

ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಇದು ಕಷ್ಟದ ಸಮಯ, ಅಭಿವೃದ್ಧಿಯ ಬಗ್ಗೆ ಮಾತನಾಡಲು ಅವರ ಬಳಿ ಏನೂ ಇಲ್ಲ, ಹೀಗಾಗಿ ಅವರು ಜೆಡಿಎಸ್ ವಿರುದ್ಧ 'ಬಿ' ಟೀಮ್ ಆರೋಪ ಮಾಡುವ ಮೂಲಕ ಮತ ಕೇಳುತ್ತಿದ್ದಾರೆ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ  ಬಿಡುಗಡೆ ಮಾಡಿರುವ ಪ್ರಣಾಳಿಕೆ ಬಗ್ಗೆ ಜೆಡಿಎಸ್ ಟೀಕಿಸಿದೆ.  ಎಚ್.ಡಿ.ಕುಮಾರಸ್ವಾಮಿ ಸರ್ಕಾರದ ಸಾಲ ಮನ್ನಾವನ್ನು ನಾಟಕ ಎಂದಿದ್ದ ಬಿಜೆಪಿಯವರು ಮೆಗಾ ಡ್ರಾಮಾದ ಸ್ಕ್ರಿಪ್ಟ್ ಮಂಡಿಸಿದ್ದಾರೆ ಎಂದು ಲೇವಡಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com