'ಆರ್ ಎಸ್ಎಸ್ ಚಡ್ಡಿ ಹಾಕಿಕೊಂಡು ಸಿಎಂ ಆಗಿದ್ದ ಶೆಟ್ಟರ್ ಕಾಂಗ್ರೆಸ್ ಸೇರಿದಾಕ್ಷಣ ಜಾತ್ಯಾತೀತವಾದಿಯಾದ್ರಾ?'
ಜಗದೀಶ ಶೆಟ್ಟರ್ ಆರ್‌ಎಸ್‌ಎಸ್ ತತ್ವ ಸಿದ್ಧಾಂತದಲ್ಲಿ ಬೆಳೆದು, ಬಿಜೆಪಿ ಪ್ರಗತಿಗೆ ಕಾರಣರಾದವರು. ಏಕಾಏಕಿ ಅವರನ್ನು ಕಾಂಗ್ರೆಸ್ ಮುಖಂಡರು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು, ಜಾತ್ಯತೀತ ಎಂದು ಪ್ರಮಾಣ ಪತ್ರ ನೀಡುತ್ತಾರೆ.
Published: 03rd May 2023 09:04 AM | Last Updated: 03rd May 2023 02:32 PM | A+A A-

ಜಗದೀಶ್ ಶೆಟ್ಟರ್
ಹುಬ್ಬಳ್ಳಿ: ಎಐಎಂಐಎಂ ಬಿಜೆಪಿಯ 'ಬಿ' ಟೀಮ್ ಎಂಬ ಆರೋಪಗಳ ಬಗ್ಗೆ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಕಿಡಿ ಕಾರಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮುಂಬರುವ ಚುನಾವಣೆಯಲ್ಲಿ ಕರ್ನಾಟಕದಲ್ಲಿ ತಮ್ಮ ಪಕ್ಷ ಕೇವಲ ಎರಡು ಸ್ಥಾನಗಳಲ್ಲಿ ಮಾತ್ರ ಸ್ಪರ್ಧಿಸಲಿದೆ. ಎಐಎಂಐಎಂ ಹುಬ್ಬಳ್ಳಿ ಧಾರವಾಡ ಪೂರ್ವ ಮತ್ತು ಬಸವನಬಾಗೇವಾಡಿಯಿಂದ ಸ್ಪರ್ಧಿಸುವುದರ ಜೊತೆಗೆ ಜಮಖಂಡಿಯಲ್ಲಿ ಅಭ್ಯರ್ಥಿಯನ್ನು ಬೆಂಬಲಿಸುತ್ತದೆ ಎಂದು ಹೇಳಿದರು. ತಮ್ಮ ಪಕ್ಷ ಸ್ಪರ್ಧಿಸುತ್ತಿರುವುದು ಬೇರೆ ಪಕ್ಷಗಳ ಅಭ್ಯರ್ಥಿಗಳ ಸೋಲು-ಗೆಲುವಿಗಾಗಿ ಅಲ್ಲ, ಸೀಟು ಗೆಲ್ಲುವುದಕ್ಕಾಗಿ ಎಂದು ಸ್ಪಷ್ಟಪಡಿಸಿದರು.
ಜಗದೀಶ ಶೆಟ್ಟರ್ ಆರ್‌ಎಸ್‌ಎಸ್ ತತ್ವ ಸಿದ್ಧಾಂತದಲ್ಲಿ ಬೆಳೆದು, ಬಿಜೆಪಿ ಪ್ರಗತಿಗೆ ಕಾರಣರಾದವರು. ಏಕಾಏಕಿ ಅವರನ್ನು ಕಾಂಗ್ರೆಸ್ ಮುಖಂಡರು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು, ಜಾತ್ಯತೀತ ಎಂದು ಪ್ರಮಾಣ ಪತ್ರ ನೀಡುತ್ತಾರೆ. ಜಾತ್ಯತೀತ ಪ್ರಮಾಣ ಪತ್ರ ನೀಡಲು ಅವರೇನು ನೋಟರಿ ಅಂಗಡಿ ಇಟ್ಟಿದ್ದಾರೆಯೇ? ಇಂತವರಿಂದ ರಾಜ್ಯದ ಜನತೆ ಏನುನ್ನು ನಿರೀಕ್ಷಿಸಲು ಸಾಧ್ಯ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ನಾನು ರಾಜ್ಯಸಭೆಗೆ ಹೋಗಲ್ಲ, ಕಾಂಗ್ರೆಸ್ ಸಿದ್ಧಾಂತಕ್ಕೆ ಹೊಂದಿಕೊಳ್ಳುತ್ತೇನೆ, ಆದರೆ...: ಜಗದೀಶ್ ಶೆಟ್ಟರ್ (ಸಂದರ್ಶನ)
ಮುಸ್ಲಿಂ ಮತಗಳನ್ನು ವಿಭಜಿಸಲು ಬಿಜೆಪಿ ಜೊತೆಗಿನ ರಹಸ್ಯ ಒಪ್ಪಂದದ ಬಗ್ಗೆ ವರದಿಗಳನ್ನು ತರಾಟೆಗೆ ತೆಗೆದುಕೊಂಡ ಓವೈಸಿ “ರಾಹುಲ್ ಗಾಂಧಿ ಚುನಾವಣೆಯಲ್ಲಿ ಸೋಲಲು ನನ್ನ ಪಕ್ಷವೇ ಕಾರಣವೇ? ಕಾಂಗ್ರೆಸ್ 50 ಸ್ಥಾನಗಳನ್ನು ಗೆದ್ದುಕೊಂಡಿತು ಕಾಂಗ್ರೆಸ್ ಪಕ್ಷದ ಶಾಸಕರು ಸರ್ಕಾರ ರಚನೆಗೆ ಸಹಾಯ ಮಾಡಲು ಬಿಜೆಪಿಗೆ ಸೇರಿದರು ಎಂದು ವಾಗ್ದಾಳಿ ನಡೆಸಿದರು.
ಯಾವ ಪಕ್ಷವೂ ಸೋಲಲೆಂದು ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ. ನಾವು ಕೆಲವು ಯೋಜನೆ, ತಂತ್ರಗಳನ್ನು ರೂಪಿಸಿ ರಾಜ್ಯದ ಎರಡು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ. ಸೋಲಿನ ಭಯವಿದ್ದವರು ನಮ್ಮ ಪಕ್ಷವನ್ನು ಬಿಜೆಪಿ ಬಿ ಟೀಂ ಎಂದು ಆರೋಪಿಸುತ್ತಿದ್ದಾರೆ. ಅದರಲ್ಲಿ ಹುರುಳಿಲ್ಲ’ ಎಂದರು.
ಮುಸ್ಲಿಮ್ ಮೀಸಲಾತಿ ರದ್ದುಪಡಿಸಿರುವ ಕುರಿತು ಪ್ರತಿಕ್ರಿಯಿಸಿದ ಓವೈಸಿ, ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶದ ಪ್ರಕಾರ ಮುಸ್ಲಿಮ್ ಮೀಸಲಾತಿ ರದ್ದುಪಡಿಸಿದ್ದು ಕಾನೂನು ಬಾಹಿರ. ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದವರಿಗೆ ನೀಡುವಂಥ ಮೀಸಲಾತಿ ಅದಾಗಿದೆ’ ಎಂದು ಹೇಳಿದರು.
ಇದನ್ನೂ ಓದಿ: ತಾವೇ ಕಟ್ಟಿದ ಬಿಜೆಪಿ ಕೋಟೆ ಕೆಡವುವ ಉಮೇದಿನಲ್ಲಿ ಶೆಟ್ಟರ್: ವ್ಯಕ್ತಿಯೋ, ಪಕ್ಷವೋ? ಜಿಜ್ಞಾಸೆಯಲ್ಲಿ ಕ್ಷೇತ್ರದ ಮತದಾರ!
ಏಕರೂಪ ನಾಗರಿಕ ಸಂಹಿತೆ ಕುರಿತು ಪ್ರತಿಕ್ರಿಯಿಸಿದ ಓವೈಸಿ, ಸರ್ಕಾರ ಮೊದಲು ಸಂವಿಧಾನ ನೀಡಿದ ಹಕ್ಕುಗಳನ್ನು ಅನುಭವಿಸಲು ಜನರಿಗೆ ಬಿಡಲಿ. ನಮ್ಮ ಪರಂಪರೆ ಮುಂದುವರಿಸಿಕೊಂಡು ಹೋಗುವ ಹಕ್ಕು ನಮಗಿದೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಹೇಳಿದರು.
ಹಿಂದೂ ದಂಪತಿಗಳು ನಿರ್ದಿಷ್ಟ ವಯಸ್ಸಿನಲ್ಲಿ ಮಗನನ್ನು ಪಡೆಯಲು ವಿಫಲವಾದರೆ ಅವರಿಗೆ ಎರಡನೇ ವಿವಾಹ ನಿಗದಿಪಡಿಸುವ ಕಾನೂನನ್ನು ಗೋವಾದ ಬಿಜೆಪಿ ಸರ್ಕಾರ ಬದಲಾಯಿಸಲಿ ನಂತರ. UCC ಬಗ್ಗೆ ಮಾತನಾಡಲಿ ಎಂದು ಆಗ್ರಹಿಸಿದ್ದಾರೆ.