ಕರ್ನಾಟಕವನ್ನು ಭಾರತದಿಂದ ಬೇರ್ಪಡಿಸಲು ಕಾಂಗ್ರೆಸ್ ಯತ್ನಿಸುತ್ತಿದೆ: ಪ್ರಧಾನಿ ನರೇಂದ್ರ ಮೋದಿ ಆರೋಪ

ಪ್ರಧಾನಿ ನರೇಂದ್ರ ಮೋದಿ ಅವರು ನಂಜನಗೂಡಿನಲ್ಲಿ ತಮ್ಮ ಅಂತಿಮ ಚುನಾವಣಾ ಭಾಷಣದಲ್ಲಿ ಜನರನ್ನು ಕಾಂಗ್ರೆಸ್ ವಿರುದ್ಧ ತಿರುಗಿಸಲು ‘ರಾಷ್ಟ್ರೀಯತೆ’ ಕಾರ್ಡ್ ಅನ್ನು ಬಳಸಿಕೊಂಡರು. ಕಾಂಗ್ರೆಸ್ ಭಾರತದಿಂದ ಕರ್ನಾಟಕದ ಭಾಗವನ್ನು ಬೇರ್ಪಡಿಸಲು ಪ್ರತಿಪಾದಿಸುತ್ತಿದೆ ಎಂದು ಆರೋಪಿಸಿ ತೀವ್ರ ವಾಗ್ದಾಳಿ ನಡೆಸಿದರು.
ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ತಾನಕ್ಕೆ ಭೇಟಿ ನೀಡಿದ ನರೇಂದ್ರ ಮೋದಿ
ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ತಾನಕ್ಕೆ ಭೇಟಿ ನೀಡಿದ ನರೇಂದ್ರ ಮೋದಿ
Updated on

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ನಂಜನಗೂಡಿನಲ್ಲಿ ತಮ್ಮ ಅಂತಿಮ ಚುನಾವಣಾ ಭಾಷಣದಲ್ಲಿ ಜನರನ್ನು ಕಾಂಗ್ರೆಸ್ ವಿರುದ್ಧ ತಿರುಗಿಸಲು ‘ರಾಷ್ಟ್ರೀಯತೆ’ ಕಾರ್ಡ್ ಅನ್ನು ಬಳಸಿಕೊಂಡರು. ಕಾಂಗ್ರೆಸ್ ಭಾರತದಿಂದ ಕರ್ನಾಟಕದ ಭಾಗವನ್ನು ಬೇರ್ಪಡಿಸಲು ಪ್ರತಿಪಾದಿಸುತ್ತಿದೆ ಎಂದು ಆರೋಪಿಸಿ ತೀವ್ರ ವಾಗ್ದಾಳಿ ನಡೆಸಿದರು.

ನಂಜನಗೂಡು ತಾಲೂಕಿನ ಎಲಚಗೆರೆ ಗ್ರಾಮದಲ್ಲಿ ಪಕ್ಷದ 17 ಅಭ್ಯರ್ಥಿಗಳ ಪರ ಮತ ಯಾಚಿಸಲು ಆಗಮಿಸಿದ್ದ ವೇಳೆ ನಡೆದ ಸಾರ್ವಜನಿಕ ಸಭೆಯಲ್ಲಿ ಸುತ್ತೂರು ಮಠ, ದೇವನೂರಿನ ಗುರು ಮಲ್ಲೇಶ್ವರ ಮಠ, ಆದಿಚುಂಚನಗಿರಿ ಮಠಕ್ಕೆ ಪುಷ್ಪ ನಮನ ಸಲ್ಲಿಸಿದರು.

ಕರ್ನಾಟಕದ ಪ್ರತಿಷ್ಠೆ, ಸಾರ್ವಭೌಮತೆ ಮತ್ತು ಸಮಗ್ರತೆಗೆ ಧಕ್ಕೆ ತರಲು ತಮ್ಮ ಪಕ್ಷ ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಹೆಸರನ್ನು ಹೇಳದೆ ಮೋದಿ, 'ಕರ್ನಾಟಕದ ಸಾರ್ವಭೌಮತ್ವವನ್ನು ರಕ್ಷಿಸುವುದಾಗಿ ಕಾಂಗ್ರೆಸ್ ಹೇಳುತ್ತದೆ. ಆದರೆ, ಕರ್ನಾಟಕವನ್ನು ಭಾರತದಿಂದ ದೂರ ಮಾಡಲು ಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಇಷ್ಟೊಂದು ಕೆಳಮಟ್ಟಕ್ಕೆ ಇಳಿಯುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ. ಇದು ದೇಶದ ಸ್ವಾತಂತ್ರ್ಯಕ್ಕಾಗಿ ಮತ್ತು ರಾಷ್ಟ್ರಾಭಿಮಾನದ ಪರವಾಗಿ ಹೋರಾಡಿದ ಲಕ್ಷಾಂತರ ಕನ್ನಡಿಗರಿಗೆ ಮಾಡಿದ ಅವಮಾನವಾಗಿದೆ' ಎಂದರು.

'ಕಾಂಗ್ರೆಸ್‌ನ ರಾಜಮನೆತನವು ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತದೆ ಮತ್ತು ಭಾರತದ ವಿರುದ್ಧವಾಗಿರುವ ದೇಶಗಳ ರಾಜತಾಂತ್ರಿಕರನ್ನು ರಹಸ್ಯವಾಗಿ ಭೇಟಿ ಮಾಡುತ್ತದೆ. ಕಾಂಗ್ರೆಸ್‌ಗೆ ರಾಜಕೀಯ ಆಮ್ಲಜನಕ ನೀಡಬೇಡಿ ಎಂದು ನಾನು ಕರ್ನಾಟಕದ ಜನತೆಗೆ ಮನವಿ ಮಾಡುತ್ತೇನೆ' ಎಂದರು.

ಚುನಾವಣೆಗೆ ಮುನ್ನ ಕಾಂಗ್ರೆಸ್ ಐದು ಭರವಸೆಗಳನ್ನು ಘೋಷಿಸಿದ ಕುರಿತು ಮಾತನಾಡಿದ ಅವರು, 'ಐದು ದಶಕಗಳ ಹಿಂದೆ ಅವರು ನೀಡಿದ ‘ಗರೀಬಿ ಹಟಾವೋ’ ಖಾತರಿ ಏನಾಯಿತು ಎಂದು ನಾನು ಪ್ರಶ್ನಿಸುತ್ತೇನೆ?. ಅವರ ಉನ್ನತ ನಾಯಕ ನೀಡಿದ ಅವರ ದೊಡ್ಡ ಭರವಸೆ ದೊಡ್ಡ ಸುಳ್ಳಾಗಿದೆ' ಎಂದು ದೂರಿದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್ ನಾಯಕರು ಲಿಂಗಾಯತರು ಮತ್ತು ಒಬಿಸಿಗಳ ವಿರುದ್ಧ ಮಾತನಾಡುತ್ತಾರೆ. ಕಾಂಗ್ರೆಸ್ ತನ್ನ ರಾಜಕೀಯ ಮೈಲೇಜ್ ಹೆಚ್ಚಿಸಲು ತುಷ್ಟೀಕರಣದ ರಾಜಕೀಯದಲ್ಲಿ ತೊಡಗಿದೆ ಎಂದು ಆರೋಪಿಸಿದರು.

'ಭಾರತವು ದುರ್ಬಲ ಆರ್ಥಿಕತೆಯಿಂದ ಹೊರಬಂದು ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಈ ಸಮಯದಲ್ಲಿ, ಭಾರತವು ರಫ್ತು ಮತ್ತು ಎಫ್‌ಡಿಐನಲ್ಲಿ ಹೊಸ ದಾಖಲೆಗಳನ್ನು ಮಾಡಿದೆ. ಆದರೆ, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಅಧಿಕಾರದಲ್ಲಿದ್ದಾಗ ಇದರ ಲಾಭ ಪಡೆಯಲು ಕರ್ನಾಟಕಕ್ಕೆ ಸಾಧ್ಯವಾಗಿರಲಿಲ್ಲ' ಎಂದರು.

ಆಗಾಗ್ಗೆ ಕನ್ನಡವನ್ನು ಬಳಸಿದ ಮೋದಿ, 'ಈ ಭಾರಿಯ ನಿರ್ಧಾರ, ಬಹುಮತದ ಬಿಜೆಪಿ ಸರ್ಕಾರ' ಎಂದು ಘೋಷಣೆ ಕೂಗಿದರು. ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರಿಸಿದ ಮೋದಿ, ಯೋಗವಾಗಲಿ, ಆಯುರ್ವೇದವಾಗಲಿ ಅಥವಾ ಭಾರತೀಯ ಮಸಾಲೆಗಳಾಗಲಿ, ಅವುಗಳನ್ನು ಜನಪ್ರಿಯಗೊಳಿಸಲು ಕಾಂಗ್ರೆಸ್ ಎಂದಿಗೂ ಏನನ್ನೂ ಮಾಡಲಿಲ್ಲ. ನಾವು ಇದನ್ನು ಬದಲಾಯಿಸಿದ್ದೇವೆ ಮತ್ತು ಫಲಿತಾಂಶಗಳು ಪ್ರತಿಯೊಬ್ಬರೂ ನೋಡುವಂತಾಗಬೇಕು ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com