ಬೆಂಗಳೂರು: ಆಡಳಿತ ವಿರೋಧಿ ಅಲೆಯನ್ನು ಸೋಲಿಸಿ ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೇರುವ ಮೂಲಕ ಇತಿಹಾಸ ಸೃಷ್ಟಿಸಲು ಯತ್ನಿಸುತ್ತಿರುವ ಬಿಜೆಪಿ, ಕೊನೆಯ ಹಂತದ ಚುನಾವಣಾ ಪ್ರಚಾರದವರೆಗೂ ಸರ್ವ ಪ್ರಯತ್ನ ನಡೆಸಿದೆ.
ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಉನ್ನತ ನಾಯಕರ ಪ್ರಯತ್ನ ಮತ್ತು ಪ್ರಭಾವದಿಂದ ಕೇಸರಿ ಪಕ್ಷವು ರಾಜ್ಯದಲ್ಲಿ ಹೋರಾಟವನ್ನು ತೀವ್ರಗೊಳಿಸಿದೆ.
ಕರ್ನಾಟಕ ಬಿಜೆಪಿ ಪ್ರಕಾರ, ಪಕ್ಷವು ರಾಜ್ಯದಲ್ಲಿ 9,125 ರ‍್ಯಾಲಿಗಳು ಮತ್ತು 1,377 ರೋಡ್‌ಶೋಗಳನ್ನು ನಡೆಸಿದೆ.
ಬಿಜೆಪಿ ನಾಯಕರು ಪ್ರಚಾರದ ವೇಳೆ 311 ದೇವಸ್ಥಾನಗಳು ಮತ್ತು ಮಠಗಳಿಗೆ ಭೇಟಿ ನೀಡಿದ್ದಾರೆ. ಪಕ್ಷವು 3,166 ಸಾರ್ವಜನಿಕ ಪ್ರಚಾರಗಳನ್ನು ಮತ್ತು 9,077 ಸಾರ್ವಜನಿಕ ಸಭೆಗಳನ್ನು ಆಯೋಜಿಸಿದೆ.
ರಾಜ್ಯದಲ್ಲಿ ಸಾರ್ವಜನಿಕ ರ‍್ಯಾಲಿಗಳು ಮತ್ತು ಸಮಾವೇಶಗಳಲ್ಲಿ 9.87 ಲಕ್ಷ ಜನರು ಭಾಗವಹಿಸಿದ್ದರೆ, ರಾಜ್ಯದಾದ್ಯಂತ ವಿವಿಧ ನಗರಗಳಲ್ಲಿ ಆಯೋಜಿಸಲಾದ ರೋಡ್‌ಶೋಗಳಲ್ಲಿ 19.81 ಲಕ್ಷ ಜನರು ಭಾಗವಹಿಸಿದ್ದಾರೆ ಎಂದು ಕೇಸರಿ ಪಕ್ಷ ಹೇಳಿಕೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರು 19 ಸಾರ್ವಜನಿಕ ರ‍್ಯಾಲಿಗಳು ಮತ್ತು ಒಂಬತ್ತು ರೋಡ್‌ಶೋಗಳಲ್ಲಿ ಭಾಗವಹಿಸಿದ್ದರೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 16 ರ‍್ಯಾಲಿಗಳಲ್ಲಿ ಭಾಗವಹಿಸಿದ್ದಾರೆ ಮತ್ತು ರಾಜ್ಯದಲ್ಲಿ 15 ರೋಡ್‌ಶೋಗಳನ್ನು ನಡೆಸಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯದಲ್ಲಿ ಒಂಬತ್ತು ಸಾರ್ವಜನಿಕ ರ‍್ಯಾಲಿಗಳನ್ನು ಮತ್ತು ಮೂರು ರೋಡ್‌ಶೋಗಳನ್ನು ನಡೆಸಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 40 ರೋಡ್‌ಶೋಗಳಲ್ಲಿ ಪಾಲ್ಗೊಂಡಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 44 ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ್ದರು.
ಅದೇ ರೀತಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು 41 ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಿದ್ದರೆ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಕಳೆದ ಒಂದು ತಿಂಗಳಲ್ಲಿ 16 ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ್ದರು.
ಮತ್ತೊಂದೆಡೆ, ಕಾಂಗ್ರೆಸ್ ಪಕ್ಷವು ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗಾಗಿ 173 ಸಾರ್ವಜನಿಕ ರ‍್ಯಾಲಿಗಳು ಮತ್ತು 55 ರೋಡ್‌ಶೋಗಳನ್ನು ಆಯೋಜಿಸಿತ್ತು.
Advertisement