ಕೆ.ಆರ್. ಪೇಟೆ ಕ್ಷೇತ್ರ: ಚೊಚ್ಚಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿ 4ನೇ ಸ್ಥಾನ ಪಡೆದ ಯೂಟ್ಯೂಬರ್ ಚಂದನ್ ಗೌಡ!
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಹೆಚ್. ಟಿ. ಮಂಜು ಗೆಲುವಿನ ನಗೆ ಬೀರಿದ್ದಾರೆ. ತನ್ನ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷ ಬಿಎಲ್ ದೇವರಾಜ್ ಅವರಿಗಿಂತ ಭಾರೀ ಅಂತರದಿಂದ ಮತಗಳನ್ನು ಪಡೆದು ಜಯಶೀಲರಾಗಿದ್ದಾರೆ.
Published: 13th May 2023 04:40 PM | Last Updated: 13th May 2023 07:43 PM | A+A A-

ಚಂದನ್ ಗೌಡ
ಕೆ.ಆರ್. ಪೇಟೆ: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಹೆಚ್. ಟಿ. ಮಂಜು ಗೆಲುವಿನ ನಗೆ ಬೀರಿದ್ದಾರೆ. ತನ್ನ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷ ಬಿಎಲ್ ದೇವರಾಜ್ ಅವರಿಗಿಂತ ಭಾರೀ ಅಂತರದಿಂದ ಮತಗಳನ್ನು ಪಡೆದು ಜಯಶೀಲರಾಗಿದ್ದಾರೆ.
ಈ ಕ್ಷೇತ್ರದಲ್ಲಿ ಗಮನಿಸಬೇಕಾದ ಅಂಶವೆಂದರೆ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದೆ ಚೊಚ್ಚಲ ಬಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದ ಯೂಟ್ಯೂಬರ್ ಚಂದನ್ ಗೌಡ 37, 793 ಮತಗಳನ್ನು ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.
ಇನ್ನೂ ಬಿಜೆಪಿಯಿಂದ ಸ್ಪರ್ಧಿಸಿದ್ದ ನಾರಾಯಣಗೌಡ 57,939 ಮತಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.