ರಾಜಕೀಯ ಕ್ರಿಕೆಟ್‌ನಂತಲ್ಲ, ಫುಟ್‌ಬಾಲ್‌: ಕ್ರಿಕೆಟ್‌ನಲ್ಲಿ ಒಬ್ಬ ಆಡಿದರೆ ಸಾಕು, ಫುಟ್‌ಬಾಲ್‌ನಲ್ಲಿ ಎಲ್ಲರು ಆಡಬೇಕು: ಬೊಮ್ಮಾಯಿ (ಸಂದರ್ಶನ)

ರಾಜಕೀಯದಲ್ಲಿ ಸಜ್ಜನರಾಗಿರುವುದು ತಪ್ಪೇ? ಅಧಿಕಾರದಲ್ಲಿದ್ದು ಸಜ್ಜನರಾಗಿರುವುದು ಅಪರೂಪ. ನಾನು ದೀರ್ಘಕಾಲದ ಅಧಿಕಾರ ನೋಡಿದ್ದೇನೆ. ನಾನು ಐದು ಮುಖ್ಯಮಂತ್ರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದೇನೆ ಮತ್ತು ಉನ್ನತ ಮಟ್ಟದಲ್ಲಿ ಅಧಿಕಾರವನ್ನು ಅನುಭವಿಸಿದ್ದೇನೆ.
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ಆಘಾತದ ನಂತರ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದಾರೆ. ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿದ ಸಂದರ್ಶನದಲ್ಲಿ ಸೋಲಿನ ಕಾರಣಗಳನ್ನು ಬಿಚ್ಚಿಟ್ಟಿದ್ದರು.

ಪ್ರ. ನಿಮ್ಮ ವಿರುದ್ಧ ಏನಾಯಿತು?

ಮೊದಲನೆಯದಾಗಿ ಉಚಿತ ಘೋಷಣೆಗಳು ಜನರ ಗಮನ ಸೆಳೆದವು, ಎರಡನೆಯದಾಗಿ ಕಾಂಗ್ರೆಸ್ ಆರಂಭದಿಂದಲೂ ಪ್ರಚಾರವನ್ನು ಚೆನ್ನಾಗಿ ನಿರ್ವಹಿಸಿತು, ಮೂರನೆಯದಾಗಿ ಬಿಜೆಪಿ ಆಡಳಿತ ವಿರೋಧಿ ಅಲೆ  ಅನುಭವಿಸಿತು, ನಾಲ್ಕನೆಯದಾಗಿ ನಾವು ನಮ್ಮ ಕಾರ್ಯಕ್ರಮಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಲಾಗಲಿಲ್ಲ, ಐದನೆಯದಾಗಿ ಕಾಂಗ್ರೆಸ್ ಜಾತೀಯತೆ ಮತ್ತು ಜಾತಿ ಕಾರ್ಡ್  ಪ್ರಯೋಗಿಸಿತು. ಅಂತಿಮವಾಗಿ  ಜೆಡಿಎಸ್ ನ ಸುಮಾರು 5-6 ಪ್ರತಿಶತದಷ್ಟು ಮತಗಳು ಕಾಂಗ್ರೆಸ್‌ಗೆ ಹೋಯಿತು.

ಪ್ರ: ನೀವು ವಿರೋಧ ಪಕ್ಷದ ನಾಯಕರಾಗಲಿದ್ದೀರಾ?

ಅದು ಪಕ್ಷಕ್ಕೆ ಬಿಟ್ಟಿದ್ದು, ಶೀಘ್ರದಲ್ಲೇ ಪಕ್ಷವು ಅದನ್ನು ನಿರ್ಧರಿಸುತ್ತದೆ.

ಪ್ರ: ಮಾಜಿ ಸಚಿವ ವಿ.ಸೋಮಣ್ಣ ಅವರು ಪಕ್ಷದೊಳಗಿನ ಕೆಲವು ವ್ಯಕ್ತಿಗಳು ನನಗೆ ಬೆಂಬಲ ನೀಡಲಿಲ್ಲ ಎಂದು ಕೆಲವು ನಾಯಕರನ್ನು ದೂಷಿಸಿದ್ದಾರಲ್ಲ?

ಚಾಮರಾಜನಗರದಲ್ಲಿ ಪುಟ್ಟರಂಗಶೆಟ್ಟಿ ವಿರುದ್ಧ ಹಾಗೂ ವರುಣಾದಲ್ಲಿ ಕಾಂಗ್ರೆಸ್‌ನ ಪ್ರಮುಖ ನಾಯಕ ಸಿದ್ದರಾಮಯ್ಯನವರ ವಿರುದ್ಧ ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಧೈರ್ಯ ತೋರಿದ ಅವರು, ತಮ್ಮ ಕೈಲಾದಷ್ಟು ಪ್ರಯತ್ನ ಮಾಡಿ, ಸ್ಪರ್ಧೆಯ ಮಟ್ಟ ಹೆಚ್ಚಿಸಿದರು, ನಿರಾಸೆಯಾಗಿದೆ, ಅವರೊಂದಿಗೆ ಮಾತನಾಡುತ್ತೇನೆ.

ಪ್ರ: ಲೋಕಸಭೆ ಚುನಾವಣೆಗೆ ಕೇವಲ 11 ತಿಂಗಳು ಬಾಕಿ ಇದೆ?

2019 ರಲ್ಲಿ ನಾವು 25+1 ಸ್ಥಾನಗಳನ್ನು ಗೆದ್ದಿದ್ದೇವೆ, 2019 ರ ಸಂಸತ್ತಿನ ಚುನಾವಣೆಯ ಫಲಿತಾಂಶ ಪುನರಾವರ್ತನೆಗಾಗಿ ನಾವು ಕೆಲಸ ಮಾಡುತ್ತೇವೆ, ನಾವು ಪ್ರಯತ್ನಗಳನ್ನು ಮೊದಲೇ ಪ್ರಾರಂಭಿಸಬೇಕಾಗಿದೆ. ಈ ಸೋಲಿನ ನಂತರ ನಾವು ನಮ್ಮ ಎಲ್ಲಾ ಪ್ರಯತ್ನಗಳನ್ನು ಹಾಕುತ್ತೇವೆ. ಸಾಮಾನ್ಯವಾಗಿ ಬಿಜೆಪಿ ಬೇಗ ಚುನಾವಣೆ ಕೆಲಸ ಶುರು ಮಾಡುತ್ತದೆ, ಬೇಗ ಟಿಕೆಟ್ ಕೊಡುತ್ತದೆ ,ಆದರೆ ಈ ಬಾರಿ ಕಾಂಗ್ರೆಸ್ ನಮಗಿಂತ ಮೊದಲು ಈ ಕೆಲಸ ಮಾಡಿದೆ, ಅವರು ಬೇಗನೆ ಪ್ರಾರಂಭಿಸಿ ಬೇಗನೆ ಟಿಕೆಟ್ ನೀಡಿದರು. ನಾವು ಟಿಕೆಟ್ ಕೊಡಲು ತಡ ಮಾಡಿದೆವು, ಪ್ರಣಾಳಿಕೆಯನ್ನು ವಿಳಂಬ ಮಾಡಿದೆವು. ನಾವು ಅದನ್ನು ಮೊದಲೇ ಮಾಡಬೇಕಿತ್ತು.

ಪ್ರ: ನಾಯಕತ್ವದ ಸಮಸ್ಯೆಯನ್ನು ಪರಿಹರಿಸಲು ಐದು ದಿನಗಳನ್ನು ತೆಗೆದುಕೊಂಡಿದ್ದಾರೆ, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವಿನ ಭಿನ್ನಾಭಿಪ್ರಾಯವನ್ನು ಎತ್ತಿ ತೋರಿಸಲು RSS-BJP ನಾಯಕರು ಈಗಾಗಲೇ ಕಾರ್ಯತಂತ್ರ ರೂಪಿಸುತ್ತಿದ್ದಾರೆಯೇ?

ಅವರು ಭಿನ್ನಾಭಿಪ್ರಾಯ ಮುಚ್ಚಿಡಲು ಪ್ರಯತ್ನಿಸುತ್ತಿದ್ದಾರೆ. ಇಬ್ಬರು ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ಒಗ್ಗಟ್ಟು ಒಂದು ಪ್ರಹಸನ ಅಷ್ಟೆ, ಕಾಂಗ್ರೆಸ್ ಭ್ರಷ್ಟಾಚಾರಕ್ಕೆ ಹೆಸರುವಾಸಿಯಾಗಿದೆ, ಅವರು ಎಷ್ಟು ಮೋಸ ಮಾಡುತ್ತಾರೆ ಎಂಬುದನ್ನು ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಇದರ ವಿರುದ್ಧ ಜನ ಬಂಡಾಯವೇಳಲಿದ್ದಾರೆ.

ಪ್ರ: ನಿಮ್ಮ ಭವಿಷ್ಯದ ಯೋಜನೆಗಳು?

ರಾಜಕೀಯವು ಕ್ರಿಕೆಟ್‌ನಂತಲ್ಲ, ಅದು ಫುಟ್‌ಬಾಲ್‌ನಂತಿದೆ, ಕ್ರಿಕೆಟ್‌ನಲ್ಲಿ ಆಡಿದರೆ ಸಾಕು, ಫುಟ್‌ಬಾಲ್‌ನಲ್ಲಿ ಎಲ್ಲಾ ಆಟಗಾರರು ಆಡಬೇಕು. ಸಮಸ್ಯೆಗಳನ್ನು ಕೈಗೆತ್ತಿಕೊಂಡು ಜನರೊಂದಿಗೆ ಉಳಿಯಬೇಕು. ಆಟವಾಡುವುದು ಮುಖ್ಯ.

ಪ್ರ: ನಿಮಗೆ ಹೆಚ್ಚು ಸಮಯವಿದ್ದರೆ ನೀವು ಹೆಚ್ಚು ಕೆಲಸ ಮಾಡಬಹುದಿತ್ತು ಎಂದು ಅನ್ನಿಸಿತ್ತೆ? ಯಾವುದೇ ವಿಷಾದವಿದೆಯೇ?

ಹೌದು, ನಾವು ಶಿಕ್ಷಣ, ಆರೋಗ್ಯ, ಪ್ರಾದೇಶಿಕ ಅಸಮತೋಲನ, ಬಡವರನ್ನು ಮೇಲಕ್ಕೆತ್ತುವುದು ಮತ್ತು ಇತರ ನಿರ್ಣಾಯಕ ಸಮಸ್ಯೆಗಳ ಸಂಬಂಧ ಹೆಚ್ಚಿನ ಕೆಲಸ ಮಾಡಬಹುದಿತ್ತು. ಇದು ಬಹಳ ಸಮಯ ತೆಗೆದುಕೊಳ್ಳುತ್ತದೆ, ಅದಕ್ಕಾಗಿ ಪ್ರಚಂಡ ಪ್ರಯತ್ನಗಳು ಅಗತ್ಯ.

ಪ್ರ: ಎಸ್ಟಿಗಳು ನಿಮ್ಮ ವಿರುದ್ಧ ಮತ ಹಾಕಿದ್ದಾರೆಯೇ? 15 ಸ್ಥಾನಗಳಲ್ಲಿ 14 ಸ್ಥಾನ ಕಾಂಗ್ರೆಸ್‌ಗೆ ಮತ್ತು ಒಂದು ಸ್ಥಾನ ಜೆಡಿಎಸ್‌ಗೆ ಹೋಗಿದೆ?

ಬಿಜೆಪಿಯು ತಮಗಾಗಿ ಏನು ಮಾಡಿದೆ ಎಂಬುದನ್ನು ಸಮುದಾಯಕ್ಕೆ ತಿಳಿಸಲು ಎಸ್‌ಟಿ ನಾಯಕತ್ವ ವಿಫಲವಾಗಿದೆ. ಸಮುದಾಯದ ಕೆಲವು ಧಾರ್ಮಿಕ ವ್ಯಕ್ತಿಗಳು ನಮ್ಮ ವಿರುದ್ಧ ಕೆಲಸ ಮಾಡಿದ್ದಾರೆ.

ಪ್ರ: 75 ಹೊಸ ಮುಖಗಳನ್ನು ಕರೆತರುವ ಪ್ರಯೋಗವು ತಪ್ಪು ಕಲ್ಪನೆಯೇ?

ಹೊಸ ರಕ್ತ ತರುವ ಪ್ರಯೋಗವಾಗಿ ಇದು ಸ್ವಾಗತಾರ್ಹ, ಆದರೆ ಸನ್ನಿವೇಶದ ಸರಿಯಾದ ಹಿಡಿತವನ್ನು ಪಡೆಯಲು ಸಮಯ ತುಂಬಾ ಕಡಿಮೆಯಾಯಿತು.

ಪ್ರ: ಲಿಂಗಾಯತರು ಬಿಜೆಪಿ ವಿರುದ್ಧ ಹೋಗಿದ್ದಾರೆಯೇ?

ಬಹುಸಂಖ್ಯಾತರಾದ ಲಿಂಗಾಯತರು ನಮ್ಮನ್ನು ಬೆಂಬಲಿಸಿದ್ದಾರೆ. ಆದರೆ ಕೆಲವು ವಿಭಾಗಗಳು ನಮಗೆ ವಿರುದ್ಧವಾಗಿವೆ. ಕಾಂಗ್ರೆಸ್‌ ಗೊಂದಲದ ಬೀಜ ಬಿತ್ತುವ ಕೆಲಸ ಮಾಡಿದೆ.

ಪ್ರ: ನೀವು ಸಿಎಂ ಆಗಿದ್ದೀರಾ, ನಿಮ್ಮ ತಂದೆ  ಎಸ್‌ಆರ್ ಬೊಮ್ಮಾಯಿ ಸಿಎಂ ಆಗಿದ್ದರು? ನಿಮಗೆ ಸರ್ಕಾರದಲ್ಲಿ ಒಬ್ಬಂಟಿಯ ಅನುಭವವಾಯಿತೆ?

ಉತ್ತರ: ಒಂಟಿಯಲ್ಲ. ನನ್ನ ಮುಂದೆ ಬಹುದೊಡ್ಡ ಜವಾಬ್ದಾರಿ ಇದೆ, ದೊಡ್ಡ ಮಟ್ಟದ ಪ್ರಯತ್ನಗಳು ಅಗತ್ಯವಿದೆ.

ಪ್ರ: ನೀವು ಎಂದಿಗೂ ಅಹಂಕಾರವನ್ನು' ನಿಮ್ಮೊಳಗೆ ನುಸುಳಲು ಬಿಡಲಿಲ್ಲ ಮತ್ತು ಮುಖ್ಯಮಂತ್ರಿಯಾಗಿ ಸಂಭಾವಿತ ವ್ಯಕ್ತಿಯಾಗಿ ಉಳಿದಿದ್ದೀರಿ ಎಂದು ಅನೇಕ ನಾಯಕರು ಹೇಳುತ್ತಾರೆ?

ರಾಜಕೀಯದಲ್ಲಿ ಸಜ್ಜನರಾಗಿರುವುದು ತಪ್ಪೇ? ಅಧಿಕಾರದಲ್ಲಿದ್ದು ಸಜ್ಜನರಾಗಿರುವುದು ಅಪರೂಪ. ನಾನು ದೀರ್ಘಕಾಲದ ಅಧಿಕಾರ ನೋಡಿದ್ದೇನೆ. ನಾನು ಐದು ಮುಖ್ಯಮಂತ್ರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದೇನೆ ಮತ್ತು ಉನ್ನತ ಮಟ್ಟದಲ್ಲಿ ಅಧಿಕಾರವನ್ನು ಅನುಭವಿಸಿದ್ದೇನೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com