ಬೆಂಗಳೂರಿನ ಶಾಸಕರಿಗೆ ಸಚಿವ ಸ್ಥಾನ ಕೈತಪ್ಪುವ ಸಾಧ್ಯತೆ, ಹಿರಿಯ ನಾಯಕರಿಂದ ಭಾರಿ ಲಾಬಿ, ಹೈಕಮಾಂಡ್‌ಗೆ ಸಂಕಷ್ಟ!
ಹಿಂದಿನ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳಲ್ಲಿ, ಬೆಂಗಳೂರಿನಿಂದ ಆಯ್ಕೆಯಾದ ಕನಿಷ್ಠ ಆರರಿಂದ ಒಂಬತ್ತು ಸಚಿವರಿದ್ದರು. ಆದರೆ, ಈ ಬಾರಿ ಬೆಂಗಳೂರಿನ ಶಾಸಕರಿಗೆ ಮಂತ್ರಿ ಪಟ್ಟ ಸಿಗುವುದು ಅನುಮಾನಕ್ಕೆ ಎಡೆ ಮಾಡಿದ್ದು, ಇದೀಗ ಹಿರಿಯ ಶಾಸಕರು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ನ ಹೈಕಮಾಂಡ್ ಮೇಲೆ ಭಾರಿ ಒತ್ತಡ ಹೇರುತ್ತಿರುವುದರಿಂದ ಈಗ ಪರಿಸ್ಥಿತಿ ಬದಲಾಗಿದೆ.
Published: 22nd May 2023 08:57 AM | Last Updated: 22nd May 2023 03:29 PM | A+A A-

ವಿಧಾನಸೌಧ
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಂಪುಟದ ಇತರ ಸದಸ್ಯರನ್ನು ಆಯ್ಕೆ ಮಾಡುವ ಜಗಳ ಮುಂದುವರಿದಿದ್ದು, ಬೆಂಗಳೂರಿನ ಶಾಸಕರಿಗೆ ಈ ಬಾರಿ ಅವಕಾಶ ತಪ್ಪುವ ಸಾಧ್ಯತೆಯಿದೆ. ಹಿಂದಿನ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳಲ್ಲಿ, ಬೆಂಗಳೂರಿನಿಂದ ಆಯ್ಕೆಯಾದ ಕನಿಷ್ಠ ಆರರಿಂದ ಒಂಬತ್ತು ಸಚಿವರಿದ್ದರು. ಆದರೆ, ಈ ಬಾರಿ ಬೆಂಗಳೂರಿನ ಶಾಸಕರಿಗೆ ಮಂತ್ರಿ ಪಟ್ಟ ಸಿಗುವುದು ಅನುಮಾನಕ್ಕೆ ಎಡೆ ಮಾಡಿದ್ದು, ಇದೀಗ ಹಿರಿಯ ಶಾಸಕರು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ನ ಹೈಕಮಾಂಡ್ ಮೇಲೆ ಭಾರಿ ಒತ್ತಡ ಹೇರುತ್ತಿರುವುದರಿಂದ ಈಗ ಪರಿಸ್ಥಿತಿ ಬದಲಾಗಿದೆ.
ಬೆಂಗಳೂರಿನ ಹಿರಿಯ ಶಾಸಕರಾದ ರಾಮಲಿಂಗಾ ರೆಡ್ಡಿ, ಕೆಜೆ ಜಾರ್ಜ್ ಮತ್ತು ಜಮೀರ್ ಅಹಮದ್ ಖಾನ್ ಅವರು ಪ್ರಮಾಣವಚನ ಸ್ವೀಕರಿಸುವ ಮೊದಲ ಬ್ಯಾಚ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ, ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್, ಎಂ ಕೃಷ್ಣಪ್ಪ, ವಿ ಶಿವಣ್ಣ, ಬಿಕೆ ಹರಿಪ್ರಸಾದ್ ಸೇರಿದಂತೆ ಹಲವರು ವಿಧಾನ ಪರಿಷತ್ತಿನಿಂದಲೂ ಸ್ಪರ್ಧೆಯಲ್ಲಿದ್ದಾರೆ.
ಹಿಂದಿನ ಕಾಂಗ್ರೆಸ್ ಸರ್ಕಾರವು ಆರು ಸಚಿವರನ್ನು ಸಂಪುಟದಲ್ಲಿ ಹೊಂದಿದ್ದರೆ, ಬಿಎಸ್ ಯಡಿಯೂರಪ್ಪ ಸರ್ಕಾರವು ಏಳು ಮಂದಿಗೆ ಪ್ರಮುಖ ಹುದ್ದೆಗಳನ್ನು ನೀಡಿತ್ತು. ಈಗ ಕಾಂಗ್ರೆಸ್‌ನಲ್ಲಿರುವ 135 ಶಾಸಕರ ಪೈಕಿ 122 ಮಂದಿ ಬೆಂಗಳೂರಿನ ಹೊರಗಿನವರು. ಬೆಳಗಾವಿಯಲ್ಲಿ 11, ಮೈಸೂರಿನಲ್ಲಿ ಒಂಬತ್ತು, ಚಿತ್ರದುರ್ಗದಲ್ಲಿ 5 ಶಾಸಕರಿದ್ದು, ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕ ಕ್ಷೇತ್ರದಿಂದ ಹಲವರು ಗೆದ್ದಿದ್ದಾರೆ.
ಇದರಿಂದಾಗಿ ಹೈಕಮಾಂಡ್‌ಗೆ ಯಾರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವುದು ಸವಾಲಾಗಿ ಪರಿಣಮಿಸಿದೆ. ಸಚಿವ ಸಂಪುಟದಲ್ಲಿ ಲಿಂಗಾಯತ, ದಲಿತ, ಮುಸಲ್ಮಾನರಿಗೆ ಸಮಾನ ಪ್ರಾತಿನಿಧ್ಯ ನೀಡಬೇಕು ಎಂದು ಆಗ್ರಹಿಸಿ ಹಲವು ಶಾಸಕರು ಸಿದ್ದರಾಮಯ್ಯ ಮತ್ತು ಎಐಸಿಸಿ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಬೆಂಗಳೂರಿನ ಶಾಸಕರಿಗೆ ಆರು ಸ್ಥಾನಗಳನ್ನು ನೀಡದಂತೆ ಹೈಕಮಾಂಡ್ ಅನ್ನು ಒತ್ತಾಯಿಸಬಹುದು.
ಅರಸ್‌ನಿಂದ ಹೆಗ್ಡೆಗೆ ಬದಲಾದ ಟ್ರೆಂಡ್
ಅಂದಿನ ಮುಖ್ಯಮಂತ್ರಿ ದೇವರಾಜ್ ಅರಸು ಸಂಪುಟದಲ್ಲಿ ಬೆಂಗಳೂರಿನ ಯಾರೊಬ್ಬ ಶಾಸಕರಿಗೂ ಮಂತ್ರಿ ಸ್ಥಾನ ಸಿಕ್ಕಿರಲಿಲ್ಲ. ಏಕೆಂದರೆ, ಮುಖ್ಯಮಂತ್ರಿ ಮತ್ತು ಇತರ ಕ್ಯಾಬಿನೆಟ್ ಮಂತ್ರಿಗಳು ಬೆಂಗಳೂರಿನಲ್ಲಿಯೇ ನೆಲೆಸಿರುವ ಕಾರಣ, ಅವರು ಬೆಂಗಳೂರಿನ ಜನರಿಗೆ ಸುಲಭವಾಗಿ ಸಂಪರ್ಕಕ್ಕೆ ಸಿಗುತ್ತಾರೆ ಎಂದು ದೇವರಾಜ್ ಅರಸ್ ನಂಬಿದ್ದರು. ಆದರೆ, ತುರ್ತು ಪರಿಸ್ಥಿತಿ ಹೇರಿದ ನಂತರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜವಾಬ್ದಾರಿಗಳನ್ನು ಹಂಚಿಕೊಳ್ಳಲು ಅವರು ಬೆಂಗಳೂರಿನ ಒಬ್ಬರನ್ನು ಸಚಿವರನ್ನಾಗಿ ಆಯ್ಕೆ ಮಾಡಿದ್ದರು.
ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಪಕ್ಷ ಅಧಿಕಾರಕ್ಕೆ ಬಂದ ನಂತರ ಈ ಟ್ರೆಂಡ್ ಬದಲಾಯಿತು. 1985ರಲ್ಲಿ ಬಸವನಗುಡಿಯಿಂದ ಸ್ವತಃ ಹೆಗಡೆ ಸೇರಿದಂತೆ 1983ರಲ್ಲಿ ನಗರದಿಂದ ಚಂದ್ರಶೇಖರ್, ತಿಮ್ಮೇಗೌಡ, ಜೀವರಾಜ್ ಆಳ್ವ ಆಯ್ಕೆಯಾಗಿದ್ದರು.