'5 ವರ್ಷವೂ ಸಿದ್ದು ಸಿಎಂ': ಎಂಬಿ ಪಾಟೀಲ್ ಹೇಳಿಕೆಗೆ ಕಾಂಗ್ರೆಸ್ ನಲ್ಲೇ ಅಪಸ್ವರ; ಅಪ್ರಸ್ತುತ ಎಂದ ಪ್ರಿಯಾಂಕ್ ಖರ್ಗೆ, ಸಚಿವರಿಂದ ಮತ್ತೆ ಸಮರ್ಥನೆ

5 ವರ್ಷವೂ ಸಿದ್ದರಾಮಯ್ಯ ಸಿಎಂ ಆಗಿರಲಿದ್ದಾರೆ ಎಂಬ ಸಚಿವ ಎಂಬಿ ಪಾಟೀಲ್ ಹೇಳಿಕೆಗೆ ಸ್ವಪಕ್ಷದಲ್ಲಿಯೇ ಅಪಸ್ವರ ಕೇಳಿಬಂದಿದ್ದು, ಹಲವು ನಾಯಕರು ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಎಂಬಿ ಪಾಟೀಲ್ ಹೇಳಿಕೆಗೆ ಕಾಂಗ್ರೆಸ್ ನಲ್ಲೇ ಅಪಸ್ವರ
ಎಂಬಿ ಪಾಟೀಲ್ ಹೇಳಿಕೆಗೆ ಕಾಂಗ್ರೆಸ್ ನಲ್ಲೇ ಅಪಸ್ವರ

ಬೆಂಗಳೂರು: 5 ವರ್ಷವೂ ಸಿದ್ದರಾಮಯ್ಯ ಸಿಎಂ ಆಗಿರಲಿದ್ದಾರೆ ಎಂಬ ಸಚಿವ ಎಂಬಿ ಪಾಟೀಲ್ ಹೇಳಿಕೆಗೆ ಸ್ವಪಕ್ಷದಲ್ಲಿಯೇ ಅಪಸ್ವರ ಕೇಳಿಬಂದಿದ್ದು, ಹಲವು ನಾಯಕರು ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯರವರು ಪೂರ್ಣಾವಧಿ ಸಿಎಂ ಎಂಬ ಸಚಿವ ಎಂ.ಬಿ ಪಾಟೀಲ್ ಹೇಳಿಕೆಗೆ ಕಾಂಗ್ರೆಸ್‌ನ ಹಲವು ನಾಯಕರು ಪ್ರತಿಕ್ರಿಯೆ ನೀಡಿದ್ದು, 'ಈ ಸಮಯದಲ್ಲಿ ಅಧಿಕಾರ ಹಂಚಿಕೆಯ ಬಗ್ಗೆ ಚರ್ಚೆ ಮಾಡುವುದು ಅಪ್ರಸ್ತುತ, ಸಚಿವ ಎಂ.ಬಿ ಪಾಟೀಲ್ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಅಧಿಕಾರ ಹಂಚಿಕೆಯ ಬಗ್ಗೆ ಹೈಕಮಾಂಡ್ ಮತ್ತು ಮುಖ್ಯಮಂತ್ರಿಗಳು ನಿರ್ಧಾರ ಮಾಡುತ್ತಾರೆ. ಈ ಬಗ್ಗೆ ಬೇರೆ ಯಾರೂ ನಿರ್ಧಾರ ಮಾಡಲ್ಲ' ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಅಂತೆಯೇ ಎಂಬಿ ಪಾಟೀಲ್ ಹೇಳಿಕೆಗೆ ತಿರುಗೇಟು ನೀಡಿರುವ ಡಿಕೆ ಶಿವಕುಮಾರ್ ಸಹೋದರ ಸಂಸದ ಡಿಕೆ ಸುರೇಶ್, 'ಇದೆಲ್ಲ ಬೇಡ, ಅವರಿಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಅವರ ಬಳಿ ಮಾತನಾಡಲಿ ಎಂದು ಗರಂ ಆಗಿ ಹೇಳಿದ್ದಾರೆ. ಅಂತೆಯೇ ಎಂ.ಬಿ ಪಾಟೀಲ್ ಹೇಳಿಕೆಗೆ ತೀಕ್ಷ್ಣ ಉತ್ತರ ನೀಡಲು ನನಗೂ ಬರುತ್ತೆ. ಆದರೆ, ಈಗಲೇ ಅದೆಲ್ಲ ಬೇಡ ಎಂದು ಅವರು ಹೇಳಿದರು.

ಸಚಿವರಿಂದ ಮತ್ತೆ ಸಮರ್ಥನೆ
ಇನ್ನು ತಮ್ಮ ಹೇಳಿಕೆಗೆ ಪಕ್ಷದಲ್ಲೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಲೇ ಈ ಬಗ್ಗೆ ಮತ್ತೆ ಸಮರ್ಥನೆ ನೀಡಿರುವ ಸಚಿವ ಎಂಬಿ ಪಾಟೀಲ್ ಅವರು, 'ಪಕ್ಷದ ವರಿಷ್ಠರು ಹೇಳಿದ್ದನ್ನಷ್ಟೇ ನಾನು ಹೇಳಿದ್ದೇನೆ. ನಾನು ಪದೇ ಪದೇ ಮಾತನಾಡಲ್ಲ. ನಿನ್ನೆ ಮಾಧ್ಯಮದವರು ಸಿದ್ದರಾಮಯ್ಯನವರು ಬದಲಾಗುತ್ತಾರ ಎಂದು ಕೇಳಿದರು. ಅದಕ್ಕೆ ಉತ್ತರ ನೀಡಿದೆ ಅಷ್ಟೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com