ನಿಮ್ಮ ಅಪ್ಪ, ಅಜ್ಜಿ, ಮುತ್ತಾತನ ಕೈಯ್ಯಲ್ಲೇ ಆಗಲಿಲ್ಲ; ತಾಕತ್ ಇದ್ರೆ, ಧಮ್ ಇದ್ರೆ ಒಂದು ಆರ್ ಎಸ್ ಎಸ್ ಶಾಖೆ ಮುಚ್ಚಿ: ಆರ್.ಅಶೋಕ್ ಕೆಂಡಾಮಂಡಲ

ಆರ್​​​ಎಸ್​ಎಸ್​ ನಿಷೇಧವಲ್ಲ, ಸಂಘದ ಒಂದು ಶಾಖೆಯನ್ನು ಕಾಂಗ್ರೆಸ್​ಗೆ ತಾಕತ್ತಿದ್ದರೆ ಮುಟ್ಟಲಿ ನೋಡೋಣ. ಹಿಂದುಗಳ ಧ್ವನಿಯಾಗಿರುವ ಆರ್​​​ಎಸ್​ಎಸ್​, ಭಜರಂಗದಳ ತಂಟೆಗೆ ಹೋದರೆ ಮೂರು ತಿಂಗಳಲ್ಲಿ ಪತನವಾಗಲಿದೆ ಎಂದು ಆರ್.ಅಶೋಕ್ ಎಚ್ಚರಿಸಿದರು.
ಆರ್.ಅಶೋಕ್
ಆರ್.ಅಶೋಕ್
Updated on

ಬೆಂಗಳೂರು: ಆರ್​​​ಎಸ್​ಎಸ್​ ನಿಷೇಧವಲ್ಲ, ಸಂಘದ ಒಂದು ಶಾಖೆಯನ್ನು ಕಾಂಗ್ರೆಸ್​ಗೆ ತಾಕತ್ತಿದ್ದರೆ ಮುಟ್ಟಲಿ ನೋಡೋಣ. ಹಿಂದುಗಳ ಧ್ವನಿಯಾಗಿರುವ ಆರ್​​​ಎಸ್​ಎಸ್​, ಭಜರಂಗದಳ ತಂಟೆಗೆ ಹೋದರೆ ಮೂರು ತಿಂಗಳಲ್ಲಿ ಪತನವಾಗಲಿದೆ ಎಂದು ಆರ್.ಅಶೋಕ್ ಎಚ್ಚರಿಸಿದರು.

ಬೆಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಿಮ್ಮ ಅಪ್ಪ, ಅಜ್ಜಿ, ಮುತ್ತಾತ್ತನ ಕೈಯಲ್ಲೇ ಆಗಿಲ್ಲ. ಇವಾಗ ದೇಶದಲ್ಲಿ ನಿಮ್ಮ ಸರ್ಕಾರ ನೆಗೆದು ಬಿದ್ದಿದೆ. ಇವಾಗ ತಾಕತ್ ಧಮ್ ಇದ್ರೆ, ಬಜರಂಗ ದಳ ಆಗಲಿ ಆಥವಾ ಒಂದು ಆರ್​ಎಸ್​ಎಸ್​ ಶಾಖೆಯನ್ನು ಬ್ಯಾನ್ ಮಾಡಿ ಎಂದು ಆರ್ ಅಶೋಕ್ ಗುಡುಗಿದರು.

ನಿಮ್ಮ ಗೂಟದ ಕಾರುಗಳೆಲ್ಲ ಎಲ್ಲವೂ ವಾಪಸ್ಸು ಹೋಗಬೇಕು. ಈ ದೇಶದ ಪ್ರಧಾನಿಗಳು ಆರ್​​ಎಸ್​ಎಸ್​​ನವರು. ಆರ್​​ಎಸ್​​ಎಸ್ ಒಂದು ಹಿಂದೂಗಳ ಧ್ವನಿ ಎಂದು ಆರ್ ಅಶೋಕ್ ಹೇಳಿದರು.

ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯಲಿದೆ. ಐದು ಉಚಿತ ಗ್ಯಾರಂಟಿಗಳನ್ನು ಕೊಡಮಾಡಲಿದೆ. ದಯವಿಟ್ಟು ಕಾಂಗ್ರೆಸ್​​​ನವರು ಹೇಳಿದ್ದನ್ನು ಜನರು ಫಾಲೋ ಮಾಡಬೇಕು.ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೊದಲ ಸಚಿವ ಸಂಪುಟ ಸಭೆಯೂ ಆಗಿರುವ ಕಾರಣ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸ್ವತಃ ಹೇಳಿದಂತೆಯೇ ಯಾರೊಬ್ಬರೂ ಕರೆಂಟ್ ಬಿಲ್ ಕಟ್ಟಬೇಡಿ.

ಅತ್ತೆ, ತಾಯಿ, ಮಾವನ ಮನೆಗೆ, ದೇವಸ್ಥಾನಕ್ಕೆ ಹೋಗಲು ಬಸ್ ಫ್ರೀ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಆದ್ರೆ  ಈವರೆಗೆ ಯಾವುದೇ ನಿರ್ಧಾರವನ್ನು ಪ್ರಕಟಿಸಿಲ್ಲ. ಗ್ಯಾರಂಟಿ ಘೋಷಣೆ ಮಾಡುವಾಗ ಯೋಚನೆ ಮಾಡಿರಲಿಲ್ಲವಾ ಎಂದು ಆರ್ ಅಶೋಕ್ ಪ್ರಶ್ನೆ ಮಾಡಿದರು.

ಮಹಿಳೆಯರು ಬಸ್​​​ನಲ್ಲಿ ಉಚಿತವಾಗಿ ಪ್ರಯಾಣಿಸಲಿ. ನಾನು ಕಟ್ಟಲ್ಲ, ನೀವೂ ಕಟ್ಟಬೇಡಿ ಎಂದು ಅವರಿಬ್ಬರು ಹೇಳಿದ್ದಾರೆ. ಹೀಗಾಗಿ ಕರೆಂಟ್ ಬಿಲ್ ಕಟ್ಟಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರಿಗೆ ಅವಮಾನಿಸಬಾರದು ಎಂದು ರಾಜ್ಯದ ಜನರಿಗೆ ಆರ್.ಅಶೋಕ್ ಉಚಿತ ಸಲಹೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com