'ಆಪರೇಷನ್ ಹಸ್ತ'ಕ್ಕೆ ಕೌಂಟರ್: ಇಂದು ಹಾಸನಾಂಬೆ ದೇಗುಲ ಮುಂದೆ ಜೆಡಿಎಸ್ ಶಾಸಕರ ಒಗ್ಗಟ್ಟು ಪ್ರದರ್ಶನ!

ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿ ಜೊತೆ ಮೈತ್ರಿಯಿಂದ ಪಕ್ಷದೊಳಗೆ ಕೆಲವರಲ್ಲಿ ಉಂಟಾಗಿರುವ ಅಸಮಾಧಾನ ಮತ್ತು ಕಾಂಗ್ರೆಸ್ ನಿಂದ ಆಪರೇಷನ್ ಹಸ್ತದ ಭೀತಿ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹಾಸನದಲ್ಲಿ ಇಂದು ಬುಧವಾರ ಹಾಸನಾಂಬೆ ದೇಗುಲ ಮುಂದೆ ಒಗ್ಗಟ್ಟು ಪ್ರದರ್ಶಿಸಿ ಪರೋಕ್ಷವಾಗಿ ತಮ್ಮ ಶಾಸಕರನ್ನು ಸೆಳೆಯಲ
ನಿನ್ನೆ ಪತ್ನಿ ಅನಿತಾ ಕುಮಾರಸ್ವಾಮಿ ಜೊತೆ ಹಾಸನಾಂಬೆ ದೇಗುಲ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದ ಹೆಚ್ ಡಿ ಕುಮಾರಸ್ವಾಮಿ
ನಿನ್ನೆ ಪತ್ನಿ ಅನಿತಾ ಕುಮಾರಸ್ವಾಮಿ ಜೊತೆ ಹಾಸನಾಂಬೆ ದೇಗುಲ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದ ಹೆಚ್ ಡಿ ಕುಮಾರಸ್ವಾಮಿ
Updated on

ಹಾಸನ: ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿ ಜೊತೆ ಮೈತ್ರಿಯಿಂದ ಪಕ್ಷದೊಳಗೆ ಕೆಲವರಲ್ಲಿ ಉಂಟಾಗಿರುವ ಅಸಮಾಧಾನ ಮತ್ತು ಕಾಂಗ್ರೆಸ್ ನಿಂದ ಆಪರೇಷನ್ ಹಸ್ತದ ಭೀತಿ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹಾಸನದಲ್ಲಿ ಇಂದು ಬುಧವಾರ ಹಾಸನಾಂಬೆ ದೇಗುಲ ಮುಂದೆ ಒಗ್ಗಟ್ಟು ಪ್ರದರ್ಶಿಸಿ ಪರೋಕ್ಷವಾಗಿ ತಮ್ಮ ಶಾಸಕರನ್ನು ಸೆಳೆಯಲು ನೋಡುತ್ತಿರುವ ನಾಯಕರಿಗೆ ಸಂದೇಶ ನೀಡುವ ಪ್ರಯತ್ನ ಮಾಡಿದ್ದಾರೆ.

ಇಂದು ಬೆಳಗ್ಗೆಯೇ ಹೆಚ್ ಡಿ ಕುಮಾರಸ್ವಾಮಿಯವರು ಜೆಡಿಎಸ್ ನ ಶಾಸಕರನ್ನು ಕರೆದುಕೊಂಡು ಹಾಸನಾಂಬೆ ದೇಗುಲಕ್ಕೆ ಬಂದು ದೇವಿಯ ದರ್ಶನ ಮಾಡಿ ಪೂಜೆ ಸಲ್ಲಿಸಿದರು. ಇಂದು ಜೆಡಿಎಸ್‍ ಶಾಸಕರು ಹಾಸನಾಂಬೆಯ ದರ್ಶನ ಪಡೆಯಲು ಹೋಗಿದ್ದು, ಹಾಸನಾಂಬೆಯ ದರ್ಶನದ ಜೊತೆಗೆ ಒಗ್ಗಟ್ಟಿನ ಸಂದೇಶ ನೀಡಲು ಹೆಚ್​​ಡಿ.ಕುಮಾರಸ್ವಾಮಿ ಮುಂದಾಗಿದ್ದಾರೆ. ಒಟ್ಟು 19 ಜೆಡಿಎಸ್ ಶಾಸಕರ ಪೈಕಿ ಶರಣಗೌಡ ಕಂದಕೂರು ಒಬ್ಬರನ್ನು ಬಿಟ್ಟು ಇನ್ನುಳಿದ ಎಲ್ಲಾ ಶಾಸಕರು ಹಾಸನಾಂಬೆ ದರ್ಶನ ಪಡೆದಿದ್ದಾರೆ. 

ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ, ನಮ್ಮ ಶಾಸಕರನ್ನು ಸೆಳೆದುಕೊಳ್ಳಲು ಕಾಂಗ್ರೆಸ್ ನಾಯಕರಿಗೆ ಸಾಧ್ಯವಿಲ್ಲ. ನಮ್ಮೆಲ್ಲಾ ಶಾಸಕರು ಒಗ್ಗಟ್ಟಾಗಿ ಇದ್ದೇವೆ, ಜೆಡಿಎಸ್ ಪಕ್ಷವನ್ನು ಸಂಪೂರ್ಣ ನಾಶಪಡಿಸುವ ಉದ್ದೇಶಕ್ಕೆ ನಮ್ಮ ನಾಯಕರು ಇಂದು ಕೊಟ್ಟಿದ್ದಾರೆ. ನಾಡಿಗೆ ಬಂದಿರುವ ಸಂಕಷ್ಟಗಳು ಸಂಪೂರ್ಣವಾಗಿ ತಾಯಿಯ ಆಶೀರ್ವಾದದಿಂದ ಬಗೆಹರಿಯಲಿ ಎಂದು ನಾವು ಇಂದು ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದರು. 

ಹಾಸನದಲ್ಲಿ ರೆಸಾರ್ಟ್ ನಲ್ಲಿ 3 ದಿನ ಸಭೆ: ಡಿಕೆ ಬ್ರದರ್ಸ್ ಆಪರೇಷನ್ ಹಸ್ತಕ್ಕೆ ಕೌಂಟರ್ ನೀಡಲು ನಿನ್ನೆಯಿಂದ ಹಾಸನದ ರೆಸಾರ್ಟ್ ವೊಂದರಲ್ಲಿ ತಮ್ಮ ಶಾಸಕರಿಗೆ ತಿಳುವಳಿಕೆ ನೀಡಲು ಹೆಚ್ ಡಿ ಕುಮಾರಸ್ವಾಮಿ ಸಭೆ ಕರೆದಿದ್ದಾರೆ. ಡಿಕೆ ಬ್ರದರ್ಸ್ ನಾಗಲೋಟಕ್ಕೆ ಬ್ರೇಕ್ ಹಾಕಲು ಕುಮಾರಸ್ವಾಮಿ ಪ್ಲ್ಯಾನ್ ಮಾಡಿದ್ದು, ರೆಸಾರ್ಟ್ ರಾಜಕೀಯ (resort politics) ಆರಂಭಿಸಿದ್ದಾರೆ. 

ಇಂದು ಕೂಡ ಸಭೆ ಮುಂದುವರಿಕೆ: ಇಂದು ಮತ್ತೆ ಶಾಸಕರ ಜೊತೆ ಕುಮಾರಸ್ವಾಮಿ ಮುಕ್ತವಾಗಿ ಒನ್ ಟು ಒನ್ ಮಾತುಕತೆ ನಡೆಸುತ್ತಿದ್ದು, ಶಾಸಕರಿಗೆ ಕಾಂಗ್ರೆಸ್ ನಾಯಕರಿಂದ ಒತ್ತಡ ಹಾಕುತ್ತಿರುವ ಬಗ್ಗೆ ಚರ್ಚಿಸಲಿದ್ದಾರೆ. ಕೈ ನಾಯಕರ ಆಮಿಷಕ್ಕೆ ಒಳಗಾಗಬೇಡಿ, ಕಾಂಗ್ರೆಸ್ ನೊಳಗೆಯೇ ಭಿನ್ನಾಭಿಪ್ರಾಯ ತಾರಕಕ್ಕೇರಿದೆ. ಈ ಡ್ಯಾಮೇಜ್ ಕಂಟ್ರೋಲ್ ಗೆ ಆಪರೇಷನ್ ಹಸ್ತದ ಹೇಳಿಕೆ ನೀಡುತ್ತಿದೆ ಎಂದುಕುಮಾರಸ್ವಾಮಿ ನಿನ್ನೆಯ ಸಭೆಯಲ್ಲಿ ತಮ್ಮ ಶಾಸಕರಿಗೆ ಪಾಠ ಮಾಡಿದ್ದಾರೆ. 

ಲೋಕಸಭೆ ಚುನಾವಣೆಗೆ ಮುನ್ನ ಆಪರೇಷನ್ ಹಸ್ತ ರಾಜ್ಯದಲ್ಲಿ ನಡೆಯುತ್ತದೆಯೇ, ಡಿಕೆ ಬ್ರದರ್ಸ್ ನ ಆಟಕ್ಕೆ ಜೆಡಿಎಸ್-ಬಿಜೆಪಿ ನಾಯಕರು ಬ್ರೇಕ್ ಹಾಕುತ್ತಾರೆಯೇ ಎಂದು ಕಾದುನೋಡಬೇಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com