ಮಗು ಅತ್ತರೆ ಮಾತ್ರ ತಾಯಿ ಹಾಲು ಕೊಡೋದು, ನಮ್ಮ ನೋವನ್ನು ಹೈಕಮಾಂಡ್ ಮುಂದೆ ಹೇಳುತ್ತೇವೆ: ವಿ ಸೋಮಣ್ಣ

ಪ್ರೈಮ್ ಮಿನಿಸ್ಟರ್ ದೆಹಲಿಗೆ ಕರೆಸಿಕೊಂಡು ನಾಲ್ಕು ದಿನ ಇರಿಸಿಕೊಂಡು ನೀನು ನಿಂತ್ಕೊಬೇಕು ಅಂದ್ರು, ಏನ್ಮಾಡ್ಲಿ ಎಂದು ನಿನ್ನೆ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದ ವೇಳೆ ಸಿದ್ಧಲಿಂಗ ಸ್ವಾಮಿಗಳ ಮುಂದೆ ಅಸಮಾಧಾನ, ನೋವು ತೋಡಿಕೊಂಡಿದ್ದ ಮಾಜಿ ಸಚಿವ ವಿ ಸೋಮಣ್ಣ ನಂತರ ಮಾಧ್ಯಮ ಪ್ರತಿನಿಧಿಗಳ ಮುಂದೆ ಮಾತನಾಡಿದ್ದಾರೆ.
ಲಿಂಗೈಕ್ಯ  ಡಾ|| ಶಿವಕುಮಾರ ಮಹಾಸ್ವಾಮೀಜಿಗಳವರ ಗದ್ದುಗೆಗೆ ನಮನ ಸಲ್ಲಿಸಿದ ಮಾಜಿ ಸಚಿವ ವಿ ಸೋಮಣ್ಣ
ಲಿಂಗೈಕ್ಯ ಡಾ|| ಶಿವಕುಮಾರ ಮಹಾಸ್ವಾಮೀಜಿಗಳವರ ಗದ್ದುಗೆಗೆ ನಮನ ಸಲ್ಲಿಸಿದ ಮಾಜಿ ಸಚಿವ ವಿ ಸೋಮಣ್ಣ

ತುಮಕೂರು: ಇಲ್ಲಿ ಬಿಟ್ಟು ಅಲ್ಲಿಗೆ ಹೋಗಿ ಸ್ಪರ್ಧೆ ಮಾಡಿದ್ದೇ ನನ್ನ ದೊಡ್ಡ ಮಹಾ ಅಪರಾಧ. ಅಮಿತ್ ಶಾ ಬಂದು ಮನೆಯಲ್ಲಿ 2 ಗಂಟೆ ಕುಂತುಕೊಂಡು ಜೀವ ತೆಗೆದರು. ಏನ್ಮಾಡ್ಲಿ. ಆಗೋಲ್ಲ ಅಂತ ಹೇಳಿದೆ. ಪ್ರೈಮ್ ಮಿನಿಸ್ಟರ್ ದೆಹಲಿಗೆ ಕರೆಸಿಕೊಂಡು ನಾಲ್ಕು ದಿನ ಇರಿಸಿಕೊಂಡು ನೀನು ನಿಂತ್ಕೊಬೇಕು ಅಂದ್ರು, ಏನ್ಮಾಡ್ಲಿ ಎಂದು ನಿನ್ನೆ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದ ವೇಳೆ ಸಿದ್ಧಲಿಂಗ ಸ್ವಾಮಿಗಳ ಮುಂದೆ ಅಸಮಾಧಾನ, ನೋವು ತೋಡಿಕೊಂಡಿದ್ದ ಮಾಜಿ ಸಚಿವ ವಿ ಸೋಮಣ್ಣ ನಂತರ ಮಾಧ್ಯಮ ಪ್ರತಿನಿಧಿಗಳ ಮುಂದೆ ಮಾತನಾಡಿದ್ದಾರೆ.

ಡಿಸೆಂಬರ್ 6ರಂದು ತುಮಕೂರಿನಲ್ಲಿ ಗುರುಭವನ ಲೋಕಾರ್ಪಣೆ ಕಾರ್ಯಕ್ರಮವಿದೆ. ಅದಕ್ಕೆ ಸಿದ್ಧಲಿಂಗ ಸ್ವಾಮಿಗಳನ್ನು ಆಹ್ವಾನಿಸಲು ಭೇಟಿ ನೀಡಿದ್ದರು. ಈ ವೇಳೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಸೋಲಿನ ಬಗ್ಗೆ ನೋವು, ಹತಾಶೆಯನ್ನು ತೋಡಿಕೊಂಡರು.

ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವಿ ಸೋಮಣ್ಣ, ಡಿಸೆಂಬರ್ 6 ರಂದು ನಡೆಯುವ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಈ ಭಾಗದ ಜನ ಪ್ರತಿನಿಧಿಗಳನ್ನು ಆಹ್ವಾನಿಸಿದ್ದೇನೆ. ಇಬ್ಬರು ಸಚಿವರು ಇರುತ್ತಾರೆ, ರಾಜಣ್ಣ, ಪರಮೇಶ್ವರ್ ಇರುತ್ತಾರೆ. ಅದರಲ್ಲಿ ರಾಜಕೀಯ ಮಾಡೋವಷ್ಟು ಕೀಳು ಮಟ್ಟ ನಾನು ಮಾಡಲ್ಲ, ಈ ಕಾರ್ಯಕ್ರಮಕ್ಕೆ ರಾಜಕೀಯ ಲೇಪನ ಬೇಡ. ನಾನು 6ನೇ ತಾರೀಖಿನ ಬಳಿಕ ನಾಲ್ಕು ದಿನಗಳ ಕಾಲ ದೆಹಲಿಗೆ ಹೋಗಿ ನಮ್ಮ ಭಾವನೆ ವ್ಯಕ್ತಪಡಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಅಲ್ಲದೇ ಯತ್ನಾಳ್, ಅರವಿಂದ ಲಿಂಬಾವಳಿ, ಬೆಲ್ಲದ, ರಮೇಶ್ ಜಾರಕಿಹೊಳಿ ಸೇರಿದಂತೆ ಹಲವು ನಾಯಕರು ಸೇರಿ ಹೈ ಕಮಾಂಡ್ ಗೆ ನಮ್ಮ ನೋವು ಹೇಳುತ್ತೇವೆ. ನಾವು ಹಿರಿಯರು ನಮ್ಮದೇ ಆದ ಅನುಭವ, ಸೇವೆ ಇದೆ, ಆಲೋಚನೆ ಇದೆ. ಅದನ್ನೆಲ್ಲ ಹೈ ಕಮಾಂಡ್ ಮುಂದೆ ಹೇಳುತ್ತೇವೆ ಎಂದು ಸ್ಪಷ್ಟಪಡಿಸಿದರು.

ಮಗು ಅತ್ತರೆ ಮಾತ್ರ ತಾಯಿ ಹಾಲು ಕೊಡೋದು, ಇಲ್ಲದೇ ಇದ್ದರೆ ಏನೂ ಆಗಿಲ್ಲ ಅಂತಾ ಸುಮ್ಮನಿರ್ತಾಳೆ. ಹಾಗಾಗಿ ನಮ್ಮ ನೋವನ್ನ ಹೈ ಕಮಾಂಡ್ ಗೆ ಹೇಳುತ್ತೇವೆ ಎಂದು ಪರೋಕ್ಷವಾಗಿ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಿರುವುದಕ್ಕೆ ಸೋಮಣ್ಣ ಅಸಮಾಧಾನ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com