ರಮೇಶ್ ಜಾರಕಿಹೊಳಿ- ಜಗದೀಶ್ ಶೆಟ್ಟರ್ ಭೇಟಿ: ವದಂತಿಗಳಿಗೆ ಮಾಜಿ ಸಿಎಂ ಸ್ಪಷ್ಟನೆ

ಈಗಾಗಲೇ ಉತ್ತರ ಕರ್ನಾಟಕ ಭಾಗದಲ್ಲಿ ಲೋಕಸಭಾ ಚುನಾವಣೆ ಭರ್ಜರಿ ಪಕ್ಷ ಸಂಘಟನೆ ನಡೆಸಿರುವ ಜಗದೀಶ್‌ ಶೆಟ್ಟರ್‌ ಅವರನ್ನ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಭೇಟಿ ಮಾಡಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. 
ಜಗದೀಶ್ ಶೆಟ್ಟರ್
ಜಗದೀಶ್ ಶೆಟ್ಟರ್

ಬೆಂಗಳೂರು: ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗ ಜಗದೀಶ್‌ ಶೆಟ್ಟರ್‌ ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಬಿಸಿತುಪ್ಪವಾಗಿ ಪರಿಣಮಿಸಿದ್ದಾರೆ.

ಈಗಾಗಲೇ ಉತ್ತರ ಕರ್ನಾಟಕ ಭಾಗದಲ್ಲಿ ಲೋಕಸಭಾ ಚುನಾವಣೆ ಭರ್ಜರಿ ಪಕ್ಷ ಸಂಘಟನೆ ನಡೆಸಿರುವ ಜಗದೀಶ್‌ ಶೆಟ್ಟರ್‌ ಅವರನ್ನ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಭೇಟಿ ಮಾಡಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ.

ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರು ತಮ್ಮನ್ನು ಭೇಟಿಯಾಗಿರುವ ಬಗ್ಗೆ ಕಾಂಗ್ರೆಸ್‌ ನಾಯಕ ಜಗದೀಶ್‌ ಶೆಟ್ಟರ್‌ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಶೆಟ್ಟರ್‌, ಇತ್ತೀಚೆಗೆ ಬಹಳ ಜನರು ಭೇಟಿಯಾಗಿದ್ದಾರೆ. ರಮೇಶ್ ಜಾರಕಿಹೊಳಿ ಸಹ ಭೇಟಿಯಾಗಿದ್ದಾರೆ. ಆದರೆ ಇವತ್ತು ಭೇಟಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಶೆಟ್ಟರ್ ಅವರನ್ನು ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಮಂಗಳವಾರ ಭೇಟಿಯಾಗಿದ್ದಾರೆ ಎಂಬ ವದಂತಿ ಹರಡಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ ಶೆಟ್ಟರ್, ‘ರಮೇಶ ಜಾರಕಿಹೊಳಿ ಭೇಟಿಯಾಗಿದ್ದಾರೆ ಎಂದು ಯಾರು ಹೇಳಿದ್ದು’ ಎಂದು ಮರುಪ್ರಶ್ನೆ ಹಾಕಿದರು. ‘ಈ ಹಿಂದೆ ಹಲವು ಬಾರಿ ರಮೇಶ ಜಾರಕಿಹೊಳಿ ಬಾರಿ ಭೇಟಿ ಆಗಿದ್ದಾರೆ. ಆದರೆ, ಇವತ್ತು (ಮಂಗಳವಾರ) ಭೇಟಿಯಾಗಿಲ್ಲ. ಅಲ್ಲದೆ, ರಮೇಶ ಜಾರಕಿಹೊಳಿ ಜತೆ ಎಂದೂ ರಾಜಕೀಯ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಎರಡು ತಿಂಗಳಲ್ಲಿ ಬೇರೆ ಬೇರೆ ಸಂದರ್ಭದಲ್ಲಿ ಭೇಟಿಯಾಗಿದ್ದಾರೆ. ಬಂದವರಿಗೆ ಬೇಡ ಅಂತ ಹೇಳಲು ಆಗಲ್ಲ, ಬೇರೆ ಕಡೆ ಹೋದಾಗ ಹಳೆ ಸಂಬಂಧ ಇರುವುದರಿಂದ ಭೇಟಿಯಾಗಿರುತ್ತೇನೆ. ಅವರ ಬಳಿ ರಾಜಕೀಯವಾಗಿ ನಾನು ಚರ್ಚೆ ಮಾಡಿಲ್ಲ, ಅವರು ಸಹ ಆ ಪ್ರಯತ್ನ ಮಾಡಿಲ್ಲ.ಇದು ಸಹಜ ಭೇಟಿ ಅಷ್ಟೇ ಎಂದು ತಿಳಿಸಿದರು.

ಕಾಂಗ್ರೆಸ್ ಗೆ ಬಂದಾಗ ಬಿಜೆಪಿಗೆ ವಾಪಸ್ ಹೋಗಬಾರದು ಎಂಬ ನಿರ್ಧಾದಿಂದಲೇ ಬಂದಿದ್ದೇನೆ. ನನ್ನನ್ನು ಯಾರು ಕಾಂಗ್ರೆಸ್ ನಿಂದ ಬಿಜೆಪಿ ಬನ್ನಿ ಅಂತ ಯಾರು ಹೇಳಿಲ್ಲ ಎಂದು ಜಗದೀಶ್‌ ಶೆಟ್ಟರ್‌ ಸ್ಪಷ್ಟಪಡಿಸಿದರು. ಬಿಜೆಪಿಯ ಹಲವು ನಾಯಕರು ಕಾಂಗ್ರೆಸ್​ಗೆ ಸೇರ್ಪಡೆ ಆಗಲಿದ್ದಾರೆ’ ಎಂಬ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ‘ನನ್ನನ್ನು ಭೇಟಿ ಮಾಡಿದವರ ಮಾಹಿತಿಯನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗೆ ನೀಡಿದ್ದೇನೆ’ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com