ಬಿಎಸ್ ವೈ ಕಡೆಗಣಿಸಿದ್ದೇ ಪಕ್ಷದ ಸೋಲಿಗೆ ಕಾರಣ, ಈಗ ಮತ್ತೆ ಅವರ ಮೊರೆ ಹೋಗಿದ್ದಾರೆ: ಬಿಜೆಪಿ ವಿರುದ್ಧ ರೇಣುಕಾಚಾರ್ಯ ಮತ್ತೆ ಕಿಡಿ

ಬಿಎಸ್ ವೈ ಕಡೆಗಣಿಸಿದ್ದೇ ಪಕ್ಷದ ಸೋಲಿಗೆ ಕಾರಣ, ಈಗ ಮತ್ತೆ ಅವರ ಮೊರೆ ಹೋಗಿದ್ದಾರೆ ಎಂದು ಬಿಜೆಪಿ ವಿರುದ್ಧ ಮಾಜಿ ಸಚಿವ ರೇಣುಕಾಚಾರ್ಯ ಮತ್ತೆ ಕಿಡಿಕಾರಿದ್ದಾರೆ.
ಎಂಪಿ ರೇಣುಕಾಚಾರ್ಯ
ಎಂಪಿ ರೇಣುಕಾಚಾರ್ಯ

ದಾವಣಗೆರೆ: ಬಿಎಸ್ ವೈ ಕಡೆಗಣಿಸಿದ್ದೇ ಪಕ್ಷದ ಸೋಲಿಗೆ ಕಾರಣ, ಈಗ ಮತ್ತೆ ಅವರ ಮೊರೆ ಹೋಗಿದ್ದಾರೆ ಎಂದು ಬಿಜೆಪಿ ವಿರುದ್ಧ ಮಾಜಿ ಸಚಿವ ರೇಣುಕಾಚಾರ್ಯ ಮತ್ತೆ ಕಿಡಿಕಾರಿದ್ದಾರೆ.

ಬಿಎಸ್ ಯಡಿಯೂರಪ್ಪರನ್ನು ಕಡೆಗಣಿಸಿದ್ದೆ ಪಕ್ಷದ ಸೋಲಿಗೆ ಕಾರಣ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದು, ದಾವಣಗೆರೆಯ ಸಿದ್ದವೀರಪ್ಪ ಬಡಾವಣೆಯಲ್ಲಿರುವ ಮಾಜಿ ಶಾಸಕ ಟಿ.ಗುರುಸಿದ್ದನಗೌಡ ಉಚ್ಚಾಟನೆ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷಕ್ಕೆ ಸಾಕಷ್ಟು ಹಿನ್ನೆಡೆಯಾದ ಮೇಲೆ ಬಿಎಸ್ ಯಡಿಯೂರಪ್ಪ ಅವರನ್ನು ಈಗ ಮುಂದೆ ತಂದಿದ್ದಾರೆ ಎಂದು ಹೇಳಿದ್ದಾರೆ.

ಆಡು ಮುಟ್ಟದ ಸೊಪ್ಪಿಲ್ಲ, ಬಿಎಸ್ ಯಡಿಯೂರಪ್ಪ ನೋಡದ ಹಳ್ಳಿ ಇಲ್ಲ. ಗ್ರಾಮ ಪಂಚಾಯತ್ ಅನ್ನೂ ಕೂಡ ಗೆಲ್ಲೋಕೆ ಆಗದೇ ಇರೋರು ಪಕ್ಷದ ಜವಾಬ್ದಾರಿ ವಹಿಸಿಕೊಂಡಿದ್ದರು ಎಂದು ಸ್ವ ಪಕ್ಷ ನಾಯಕರ ಮೇಲೆ ಹರಿಹಾಯ್ದ ಅವರು ಈಗ ವೋಟ್ ಬೇಕು ಅಂತ ಬಿಎಸ್ ವೈ ನಾಯಕತ್ವ ಎನ್ನುತ್ತಿದ್ದಾರೆ ಎಂದರು. ನಾನು ಕೂಡ ಎಂಪಿ ಚುನಾವಣೆ ಆಕಾಂಕ್ಷಿ. ಟಿಕೆಟ್ ಬಗ್ಗೆ ಕಾದು ನೋಡುತ್ತೇನೆ. ಟಿಕೆಟ್ ಸಿಗದೇ ಇದ್ದರೆ ಕಾರ್ಯಕರ್ತರ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ. ನನ್ನ ಹೋರಾಟ ಯಾರ ವಿರುದ್ದವೂ ಕತ್ತಿ ಮಸಿಯೋಕೆ ಅಲ್ಲ ಎಂದು ಸ್ಪಷ್ಟಪಡಿಸಿದರು.

ಸಂಘಟನೆ ಉಳಿಯೋಕೆ ಕೆಲಸ ಮಾಡುತ್ತೇನೆ. ನಾಳೆ ಮಾಡಾಳು ವಿರುಪಾಕ್ಷಪ್ಪರನ್ನ ಭೇಟಿ ಮಾಡುತ್ತೇನೆ, ನನ್ನ ಬಗ್ಗೆ ರೆಬೆಲ್ ರೇಣುಕಾಚಾರ್ಯ ಎಂದು ಕರೆದುಕೊಳ್ಳಲಿ ನಾನು ಹೆದರುವುದಿಲ್ಲ. ನನ್ನ ಮೇಲೆ ತೂಗುಗತ್ತಿ ತೂಗುತ್ತಾ ಇದೆ. ನಾನು ಯಾವುದಕ್ಕೂ ಹೆದರಲ್ಲ ನೋಟೀಸ್ ಗೆ ಉತ್ತರ ಕೋಡೋದಿಲ್ಲ ಎಂದು ಗುಡುಗಿದರು.

ಇದೇ ವೇಳೆ ಬಿಎಸ್ ವೈ ವಿರುದ್ದ ಮಾತನಾಡಿದವರ ಮೇಲೆ ಮೊದಲು ಕ್ರಮಕ್ಕೆ ಒತ್ತಾಯಿಸಿದ ಅವರು, ಮಾಜಿ ಶಾಸಕ ಗುರುಸಿದ್ದನಗೌಡ ಉಚ್ಚಾಟನೆ ಕುರಿತು ಮಾತನಾಡಿದ ಅವರು ನೋಟೀಸ್ ನೀಡದೇ ಉಚ್ಚಾಟನೆ ಮಾಡಿದ್ದು ಖಂಡನೀಯ ಚುನಾವಣೆಯ ಸಂದರ್ಭದಲ್ಲಿ ಓಡಾಟ ಮಾಡಿ ಪಕ್ಷ ಕಟ್ಟಿದವರು ಗುರುಸಿದ್ದನಗೌಡ್ರು. ಚುನಾವಣೆಯಲ್ಲಿ ಅಭ್ಯರ್ಥಿ ವಿರುದ್ದ ಕೆಲಸ ಮಾಡಿದರೆ ನೋಟೀಸ್ ನೀಡಬೇಕು. ಆದರೆ ಯಾವುದೇ ನೋಟೀಸ್ ನೀಡದೆ ಪಕ್ಷದಿಂದ ಗುರುಸಿದ್ದನಗೌಡ್ರನ್ನು ಕುಟುಂಬಸ್ಥರನ್ನು ಉಚ್ಚಾಟನೆ ಮಾಡಿದ್ದಾರೆ. ಡಾ.ರವಿಕುಮಾರ್ ಕೂಡ ಲೋಕಾಸಭಾ ಚುನಾವಣೆ ಟಿಕೇಟ್ ಅಕಾಂಕ್ಷಿ ಅವರು ಬೆಳೆಯಬಾರದು ಎಂದು ಉಚ್ಚಾಟನೆ ಮಾಡಿದ್ದು ಖಂಡನೀಯ. ಮಾಜಿ ಸಚಿವ ರವೀಂದ್ರನಾಥ,ಮಾಜಿ ಶಾಸಕ ಗುರುಸಿದ್ದನಗೌಡ್ರು ಅಂತವರನ್ನು ಮೂಲೆಗುಂಪು ಮಾಡುತ್ತಾರೆ.ಜಿಲ್ಲೆಯ ಐದು ಶಾಸಕರು ಒಟ್ಟಾಗಿ ಸಚಿವ ಸ್ಥಾನ ಕೇಳಿದರೂ ಕೊಡಲು ಬಿಡಲಿಲ್ಲ.ಸಚಿವ ಸ್ಥಾನ ತಪ್ಪಿಸಿದರು ಎಂದು ಕಿಡಿಕಾರಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com