ಕೋಲಾರದಿಂದ ಅಳಿಯನಿಗೆ ಟಿಕೆಟ್ ನಿರಾಕರಣೆ; ಕಾಂಗ್ರೆಸ್ 'ರಾಜಿ ಸೂತ್ರ' ಕಂಡುಕೊಳ್ಳಬೇಕಿತ್ತು: ಕೆಎಚ್ ಮುನಿಯಪ್ಪ

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕೋಲಾರದಿಂದ ಅಭ್ಯರ್ಥಿ ವಿಚಾರವಾಗಿ ಪಕ್ಷವು ರಾಜಿ ಸೂತ್ರವನ್ನು ಕಂಡುಕೊಳ್ಳಬೇಕಿತ್ತು ಮತ್ತು ಸ್ಥಳೀಯರನ್ನೇ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಬೇಕಿತ್ತು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಕೆಎಚ್ ಮುನಿಯಪ್ಪ ಭಾನುವಾರ ಹೇಳಿದ್ದಾರೆ.
 ಕೆಎಚ್ ಮುನಿಯಪ್ಪ
ಕೆಎಚ್ ಮುನಿಯಪ್ಪ
Updated on

ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕೋಲಾರದಿಂದ ಅಭ್ಯರ್ಥಿ ವಿಚಾರವಾಗಿ ಪಕ್ಷವು ರಾಜಿ ಸೂತ್ರವನ್ನು ಕಂಡುಕೊಳ್ಳಬೇಕಿತ್ತು ಮತ್ತು ಸ್ಥಳೀಯರನ್ನೇ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಬೇಕಿತ್ತು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಕೆಎಚ್ ಮುನಿಯಪ್ಪ ಭಾನುವಾರ ಹೇಳಿದ್ದಾರೆ.

ಕೋಲಾರದಿಂದ ಅಳಿಯನಿಗೆ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಮುನಿಯಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಎರಡು ಬಣಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಸಾಧ್ಯವಾಗದೆ ಮೂರನೇ ವ್ಯಕ್ತಿಯನ್ನು ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಲು ಆಯ್ಕೆ ಮಾಡಿದ್ದಾರೆ ಎಂದರು.

'ಕೋಲಾರ ಕ್ಷೇತ್ರದಿಂದ ಚಿಕ್ಕ ಪೆದ್ದಣ್ಣ (ಅವರ ಅಳಿಯ) ಅವರಿಗೆ ಟಿಕೆಟ್ ನೀಡಲು ಹೈಕಮಾಂಡ್ ತೀರ್ಮಾನಿಸಿತ್ತು. ನಮ್ಮ (ಕೋಲಾರ ಘಟಕ) ನಡುವೆ ಕೆಲವು ಭಿನ್ನಾಭಿಪ್ರಾಯಗಳಿರುವುದರಿಂದ ಆ ನಿರ್ಧಾರವನ್ನು ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರಿಗೆ ಬಿಡಲಾಯಿತು. ಆದರೆ, ಸಮಸ್ಯೆ ಬಗೆಹರಿಸಲು ಸಾಧ್ಯವಾಗದೆ ಮೂರನೇ ವ್ಯಕ್ತಿಯನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಾರೆ' ಎಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಮುನಿಯಪ್ಪ ತಿಳಿಸಿದ್ದಾರೆ.

 ಕೆಎಚ್ ಮುನಿಯಪ್ಪ
ಕೋಲಾರ ಲೋಕಸಭಾ ಕ್ಷೇತ್ರ: ಮುನಿಯಪ್ಪ ಪ್ರಯತ್ನ ವ್ಯರ್ಥ, ಕಾಂಗ್ರೆಸ್ ನಿಂದ ಗೌತಮ್ ಗೆ ಟಿಕೆಟ್ ಸಿಕ್ಕಿದ್ದೇಗೆ?

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವು ಕ್ಷೇತ್ರಗಳಲ್ಲಿ ಇಂತಹ ಭಿನ್ನಾಭಿಪ್ರಾಯಗಳಿದ್ದು, ಅದನ್ನು ಬಗೆಹರಿಸಲು ಉನ್ನತ ನಾಯಕತ್ವದಿಂದ ಪ್ರಯತ್ನ ನಡೆದಿದ್ದು, ಕೋಲಾರದಲ್ಲಿ ಮಾತ್ರ ಸಾಧ್ಯವಾಗಿಲ್ಲ. ಚಿಕ್ಕ ಪೆದ್ದಣ್ಣ ಅವರಿಗೆ ಅವಕಾಶ ನೀಡಿ, ಗೆಲ್ಲಿಸುತ್ತೇನೆ ಎಂದು ಮನವರಿಕೆ ಮಾಡಿಕೊಟ್ಟರೂ ಸಾಧ್ಯವಾಗಲಿಲ್ಲ. ಕೆಸಿ ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ (ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು) ನನ್ನನ್ನು ಸಂಪರ್ಕಿಸಿದ್ದರು. ಆದರೆ, ಯಾರಿಂದಲೂ ಭಿನ್ನಾಭಿಪ್ರಾಯ ಬಗೆಹರಿಸಲು ಸಾಧ್ಯವಾಗಲಿಲ್ಲ. ನಾನು ಈಗ ಯಾರನ್ನೂ ದೂಷಿಸಿ ಪ್ರಯೋಜನವಿಲ್ಲ, ಚುನಾವಣೆ ಹತ್ತಿರದಲ್ಲಿದೆ ಎಂದರು.

ಕೋಲಾರ ಕಾಂಗ್ರೆಸ್‌ನ ಎರಡು ಬಣಗಳಾದ ಮುನಿಯಪ್ಪ ನೇತೃತ್ವದ ಒಂದು ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಇನ್ನೊಂದು ಬಣಕ್ಕೆ ಸಂದೇಶ ರವಾನಿಸುವ ಮೂಲಕ ಈ ಕ್ಷೇತ್ರಕ್ಕೆ 'ತಟಸ್ಥ' ಅಭ್ಯರ್ಥಿ ಕೆವಿ ಗೌತಮ್ ಅವರನ್ನು ಕಾಂಗ್ರೆಸ್ ಘೋಷಿಸಿದೆ. ಎಸ್‌ಸಿ (ಎಡ) ಸಮುದಾಯಕ್ಕೆ ಸೇರಿದ ಗೌತಮ್ ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮತ್ತು ಮಾಜಿ ಮೇಯರ್ ಕೆಸಿ ವಿಜಯಕುಮಾರ್ ಅವರ ಪುತ್ರ.

 ಕೆಎಚ್ ಮುನಿಯಪ್ಪ
Lok Sabha election 2024: ಕೆ.ವಿ. ಗೌತಮ್ ಕೋಲಾರ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ

ಅಳಿಯನಿಗೆ ಟಿಕೆಟ್ ಸಿಗದಿರುವ ಬಗ್ಗೆ ಅಸಮಾಧಾನವನ್ನು ತಳ್ಳಿಹಾಕಿದ ಮುನಿಯಪ್ಪ, ಕಾಂಗ್ರೆಸ್ ನಾಯಕತ್ವವು ಕೆಲವು 'ರಾಜಿ ಸೂತ್ರ'ವನ್ನು ಖಚಿತಪಡಿಸಿಕೊಳ್ಳಬಹುದಿತ್ತು. ಅವರು ಸ್ಥಳೀಯ ವ್ಯಕ್ತಿಯನ್ನು ಅಭ್ಯರ್ಥಿಯಾಗಿ ಗುರುತಿಸಬೇಕಿತ್ತು ಮತ್ತು ಪಕ್ಷದ ನಿರ್ಧಾರವನ್ನು ಪಾಲಿಸುವಂತೆ ಎರಡೂ ಕಡೆಯವರಿಗೆ ಹೇಳಬೇಕಿತ್ತು ಎಂದು ಹೇಳಿದರು.

 ಕೆಎಚ್ ಮುನಿಯಪ್ಪ
ಕೋಲಾರ: ಮುನಿಯಪ್ಪ ಅಳಿಯನಿಗೆ ಕಾಂಗ್ರೆಸ್ ಟಿಕೆಟ್? ಸಚಿವ ಸುಧಾಕರ್ ಸೇರಿ ಆರು ಶಾಸಕರ ವಿರೋಧ, ರಾಜೀನಾಮೆ ಬೆದರಿಕೆ!

ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಮುನಿಯಪ್ಪ ಅವರ ಅಳಿಯ ಚಿಕ್ಕ ಪೆದ್ದಣ್ಣ ಅವರಿಗೆ ಟಿಕೆಟ್ ನೀಡಿದರೆ, ಎಸ್‌ಸಿ (ಬಲ) ಪಂಗಡದ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು. ಇಲ್ಲದಿದ್ದರೆ ರಾಜೀನಾಮೆ ನೀಡುವುದಾಗಿ ಸಚಿವರು ಸೇರಿದಂತೆ ಐವರು ಕಾಂಗ್ರೆಸ್ ಶಾಸಕರು ನಾಲ್ಕು ದಿನಗಳ ಹಿಂದೆ ಬೆದರಿಕೆ ಹಾಕಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com