ಬೆಳಗಾವಿ: ನಾನು ಯಾರ ಸ್ಥಾನವನ್ನು ಕಿತ್ತುಕೊಂಡಿಲ್ಲ, ಮಂಗಳಾ ಅಂಗಡಿಗೆ ರಾಜಕೀಯ ಅನುಭವ ಕಡಿಮೆ- ಲಕ್ಷ್ಮಿ ಹೆಬ್ಬಾಳ್ಕರ್

ಲಕ್ಷ್ಮಿ ಹೆಬ್ಬಾಳ್ಕರ್ ಜಿಲ್ಲೆಯ ಹಿರಿಯ ರಾಜಕಾರಣಿಗಳನ್ನು ಬದಿಗೊತ್ತಿ ಎರಡನೇ ಸಲ ಶಾಸಕಿ ಆಗುತ್ತಲೇ ಸಚಿವೆ ಆಗಿದ್ದೀರಿ. ಜಿಲ್ಲೆಯಲ್ಲಿ ನಿಮಗಿಂತ ಹಿರಿಯರಾದ ಮಹಾಂತೇಶ್ ಕೌಜಲಗಿ, ಅಶೋಕ ಪಟ್ಟಣ ಅವರಿಂದ ಸಚಿವ ಸ್ಥಾನವನ್ನು ನೀವು ಕಿತ್ತುಕೊಂಡಿದ್ದೀರಿ.
ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಮಂಗಳಾ ಅಂಗಡಿ
ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಮಂಗಳಾ ಅಂಗಡಿ

ಬೆಳಗಾವಿ: ಬೆಳಗಾವಿ ಲೋಕಸಭೆ ಕದನದಲ್ಲಿ ಏಟು-ಎದುರೇಟು ಜೋರಾಗಿದೆ. ಪತ್ರಿಕಾ ಪ್ರಕಟಣೆ ಮೂಲಕ ತಮಗೆ ಟಾಂಗ್ ಕೊಟ್ಟಿದ್ದ ಸಂಸದೆ ಮಂಗಳಾ ಅಂಗಡಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಕೂಡ ತಿರುಗೇಟು ಕೊಟ್ಟಿದ್ದಾರೆ.‌

ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಎರಡನೇ ಬಾರಿಗೆ ಆಯ್ಕೆಯಾದ ನಾನು ಮಹಿಳಾ ಕೋಟಾದಿಂದ ಸಚಿವೆಯಾಗಿರುವೆ ಹೊರತು, ಯಾರ ಸಚಿವ ಸ್ಥಾನವನ್ನೂ ಕಸಿದುಕೊಂಡಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ತಿಳಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ಹಿರಿಯರಿದ್ದರೂ ಲಕ್ಷ್ಮೀ ಹೆಬ್ಬಾಳ್ಕರ್‌ ಅವರಿಂದ ಸಚಿವ ಸ್ಥಾನ ಕಸಿದುಕೊಂಡಿದ್ದಾರೆ' ಎಂಬ ಸಂಸದೆ ಮಂಗಳಾ ಅಂಗಡಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.

ಇಷ್ಟು ದಿನ ಸೈಲೆಂಟ್ ಆಗಿಯೇ ಇದ್ದ ಸಂಸದೆ ಮಂಗಳಾ ಅಂಗಡಿ ಈಗ ಪಕ್ಷ ಹಾಗೂ ಸಿದ್ಧಾಂತ ಕುರಿತು ಮೌನ ಮುರಿದಿದ್ದಾರೆ. ನಿನ್ನೆ ಹೊರಡಿಸಿದ್ದ ಪತ್ರಿಕಾ ಪ್ರಕಟಣೆಯಲ್ಲಿ ''ನಮ್ಮ ಕುಟುಂಬ ಯಾವತ್ತೂ ಬಿಜೆಪಿ ಸಿದ್ಧಾಂತ ನಂಬಿ ರಾಜಕೀಯ ಮಾಡಿದೆ. ಸುರೇಶ್ ಅಂಗಡಿಯವರು ಸಹ ಬಿಜೆಪಿ ತತ್ವದಂತೆ ಬದುಕಿ ಧೀಮಂತ ರಾಜಕಾರಣಿ ಆಗಿದ್ದರು. ಅವರ ನಂತರ ಪಕ್ಷ ನನಗೆ ಅವಕಾಶ ಕೊಟ್ಟಿತ್ತು. ಈ ಬಾರಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ನೀಡುವುದಾಗಿ ವರಿಷ್ಠರು ಹೇಳಿದಾಗ, ತಕ್ಷಣ ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತಳಾಗಿ ಸಂತೋಷದಿಂದ ಒಪ್ಪಿಕೊಂಡೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಜನರ ಮನಸ್ಸಿನಲ್ಲಿ ಸಂಶಯ ಹುಟ್ಟಿಸುವ, ಕ್ಷುಲ್ಲಕ ಹೇಳಿಕೆ ಕೊಡುವ ಬದಲು ಸಚಿವ ಸ್ಥಾನಕ್ಕೆ ಗೌರವ ತರುವ ಮಾತು ಆಡಬೇಕು.

ಲಕ್ಷ್ಮಿ ಹೆಬ್ಬಾಳ್ಕರ್ ಜಿಲ್ಲೆಯ ಹಿರಿಯ ರಾಜಕಾರಣಿಗಳನ್ನು ಬದಿಗೊತ್ತಿ ಎರಡನೇ ಸಲ ಶಾಸಕಿ ಆಗುತ್ತಲೇ ಸಚಿವೆ ಆಗಿದ್ದೀರಿ. ಜಿಲ್ಲೆಯಲ್ಲಿ ನಿಮಗಿಂತ ಹಿರಿಯರಾದ ಮಹಾಂತೇಶ್ ಕೌಜಲಗಿ, ಅಶೋಕ ಪಟ್ಟಣ ಅವರಿಂದ ಸಚಿವ ಸ್ಥಾನವನ್ನು ನೀವು ಕಿತ್ತುಕೊಂಡಿದ್ದೀರಿ. ಈ ವಿಷಯವನ್ನು ಈವರೆಗೆ ನಾವು ಪ್ರಸ್ತಾಪ ಮಾಡಿರಲಿಲ್ಲ. ಅಲ್ಲದೇ ಜಿಲ್ಲೆಯ ಜನರಿಗೆ ಈ ವಿಷಯ ಚೆನ್ನಾಗಿದೆ ಗೊತ್ತಿದೆ. ಲಕ್ಷ್ಮಿ ಹೆಬ್ಬಾಳ್ಕರ್ ಅವರು ವೈಯಕ್ತಿಕ ವಿಚಾರ ಬಿಟ್ಟು ಸಮಷ್ಟಿ ಪ್ರಜ್ಞೆಯಿಂದ ರಾಜಕೀಯ ಮಾಡುವುದನ್ನು ರೂಡಿ ಮಾಡಿಕೊಳ್ಳುವುದು ಒಳಿತು'' ಎಂದು ಮಂಗಳಾ ಅಂಗಡಿ ವಾಗ್ದಾಳಿ ಮಾಡಿದ್ದರು.

ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಮಂಗಳಾ ಅಂಗಡಿ
ಹೊಸಬ V/s ಹಿರಿಯ: ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ವಿರುದ್ಧ ಮೃಣಾಲ್ ಹೆಬ್ಬಾಳ್ಕರ್ ಸೆಣಸಾಟ

ಮಂಗಳಾ ಅಂಗಡಿ ಹೇಳಿಕೆಗೆ ತಿರುಗೇಟು ನೀಡಿರುವ ಲಕ್ಷ್ಮಿ ಹೆಬ್ಬಾಳ್ಕರ್ , ಬಿಜೆಪಿಯಲ್ಲಿ ಇಷ್ಟೊಂದು ಜನ ಆಕಾಂಕ್ಷಿಗಳು ಇದ್ದರು. ಮಂಗಳಾ ಅಂಗಡಿ ಬೇರೆಯವರಿಗೆ ಬೆಂಬಲಿಸಬಹುದಾಗಿತ್ತು. ಕುಟುಂಬಕ್ಕಿಂತ ಪಕ್ಷ ಮೊದಲು ಎನ್ನುವ ಮಂಗಳಾ ಅಂಗಡಿ ಅವರು ಏಕೆ ಬೀಗರ ಪರ ನಿಂತಿದ್ದಾರೆ‌. ಪಕ್ಷ ಮೊದಲು ಎಂದು ಜನರ ದಿಕ್ಕು ತಪ್ಪಿಸಲು ಹೇಳುತ್ತಿದ್ದಾರೆ. ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ಕೊಡಬಹುದಿತ್ತು. ಇದೆಲ್ಲ ಸುಮ್ಮನೆ ನಾಟಕ. ಬೀಗರ ಪರ ಮಂಗಳಾ ಅಂಗಡಿ ಬ್ಯಾಟಿಂಗ್ ವಿಚಾರ ಇದು ಸತ್ಯ. ಇಡೀ ಕ್ಷೇತ್ರದ ಜನ ಇದನ್ನು ಹೇಳುತ್ತಿದ್ದಾರೆ ಎಂದರು.

ಮಂಗಳಾ ಅಂಗಡಿ ವಯಸ್ಸಿನಲ್ಲಿ ಹಿರಿಯರು. ಆದರೆ, ಅವರಿಗೆ ರಾಜಕೀಯ ಅನುಭವ ಕಡಿಮೆ. ಸುರೇಶ ಅಂಗಡಿ ದಿವಂಗತರಾದ ಬಳಿಕ ಉಪಚುನಾವಣೆಯಲ್ಲಿ ಗೆದ್ದರು. ಅವರ ಬಗ್ಗೆ ಯಾಕೆ ಸಿಂಪತಿ ಇದೆ ಎಂದರೆ, ಕೇಂದ್ರದಲ್ಲಿ ಮೋದಿಯವರು ಮಹಿಳಾ ಮೀಸಲಾತಿ ಬಗ್ಗೆ ‌ಮಾತನಾಡುತ್ತಾರೆ. ಇಂಥ ಸಂದರ್ಭದಲ್ಲಿ ಮಂಗಳಾ ಅಂಗಡಿ, ಸುಮಲತಾಗೆ ಟಿಕೆಟ್ ಕೊಡಲಿಲ್ಲ. ಹಾಗಾಗಿ, ಬೀಗರ ಟಿಕೆಟ್ ಶೆಟ್ಟರ್ ತಪ್ಪಿಸಿದ್ದಾರೆ ಎಂದು ಜನ ಮಾತನಾಡುತ್ತಿದ್ದಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com