ಪ್ರಹ್ಲಾದ್ ಜೋಶಿ ಸ್ಪರ್ಧೆಗೆ ದಿಂಗಾಲೇಶ್ವರ ಶ್ರೀ ವಿರೋಧ: ಸ್ವಾಮೀಜಿ ಹಿಂದೆ ಕಾಂಗ್ರೆಸ್ ಕೈವಾಡ?

ಧಾರವಾಡ ಲೋಕಸಭಾ ಕ್ಷೇತ್ರದಿಂದ ಪ್ರಹ್ಲಾದ ಜೋಶಿ ವಿರುದ್ಧ ದಿಂಗಾಲೇಶ್ವರ ಶ್ರೀಗಳು ಸ್ಪರ್ಧಿಸಲು ಕಾಂಗ್ರೆಸ್ ಬೆಂಬಲಿಸುತ್ತಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ದಿಂಗಾಲೇಶ್ವರ ಸ್ವಾಮೀಜಿ-ಪ್ರಹ್ಲಾದ್ ಜೋಶಿ
ದಿಂಗಾಲೇಶ್ವರ ಸ್ವಾಮೀಜಿ-ಪ್ರಹ್ಲಾದ್ ಜೋಶಿ
Updated on

ಧಾರವಾಡ: ಧಾರವಾಡ ಲೋಕಸಭಾ ಕ್ಷೇತ್ರದಿಂದ ಪ್ರಹ್ಲಾದ ಜೋಶಿ ವಿರುದ್ಧ ದಿಂಗಾಲೇಶ್ವರ ಶ್ರೀಗಳು ಸ್ಪರ್ಧಿಸಲು ಕಾಂಗ್ರೆಸ್ ಬೆಂಬಲಿಸುತ್ತಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ, ಜೋಶಿ ಅವರು ಇತರ ಸಮುದಾಯಗಳನ್ನು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿ ಅವರ ಧಾರವಾಡದಿಂದ ಜೋಶಿ ಸ್ಪರ್ಧಿಸದಂತೆ ವಿರೋಧಿಸುತ್ತಿದ್ದಾರೆ. ಕೆಲವು ಸ್ವಾಮೀಜಿಗಳು ದಿಂಗಾಲೇಶ್ವರ ಶ್ರೀಗಳೊಂದಿಗೆ ಕೈಜೋಡಿಸಿದ್ದರು, ನಂತರ ತಮ್ಮ ಬೆಂಬಲ ಹಿಂತೆಗೆದುಕೊಂಡರು.

ಇಡೀ ಲಿಂಗಾಯತ ಸಮುದಾಯ ಜೋಶಿ ಅವರ ಜೊತೆಗಿದೆ ಎಂದು ಬಿಜೆಪಿ ನಾಯಕರು ಹೇಳಿಕೊಳ್ಳುತ್ತಿದ್ದು, ಈ ದಿಢೀರ್ ವಿರೋಧದ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡವಿದೆ, ಪಕ್ಷವು ಚುನಾವಣೆಯಲ್ಲಿ ಸೋಲುವ ಭಯದಲ್ಲಿದೆ. ಹೀಗಾಗಿ ದಿಂಗಾಲೇಶ್ವರ ಶ್ರೀಗಳನ್ನು ಬಿಜೆಪಿ ವಿರುದ್ಧ ಎತ್ತಿ ಕಟ್ಟುವ ಕೆಲಸ ನಡೆಯುತ್ತಿದೆ ಎಂದು ದೂರಿದ್ದಾರೆ.

ಜೋಶಿ ಸ್ಪರ್ಧೆಗೆ ಮೊದಲು ಯಾವ ಅಭ್ಯಂತರಲಿಲ್ಲ, ಆದರೆ ಇದ್ದಕ್ಕಿದ್ದಂತೆ ಕೆಲವು ಬೆಳವಣಿಗೆಗಳು ನಡೆದಿವೆ. ಲಿಂಗಾಯತ ಮುಖಂಡ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೂಡ ಗೊಂದಲ ಸೃಷ್ಟಿಸಬೇಡಿ ಎಂದು ಶ್ರೀಗಳಿಗೆ ಮನವಿ ಮಾಡಿದ್ದಾರೆ ಎಂದು ಎಂದು ಬಿಜೆಪಿ ಮುಖಂಡ ಮೋಹನ್ ರಾಮದುರ್ಗ ತಿಳಿಸಿದ್ದಾರೆ.

ದಿಂಗಾಲೇಶ್ವರ ಸ್ವಾಮೀಜಿ-ಪ್ರಹ್ಲಾದ್ ಜೋಶಿ
ಧಾರವಾಡ ಕ್ಷೇತ್ರಕ್ಕೆ ಪ್ರಹ್ಲಾದ್ ಜೋಶಿ ಉಮೇದುವಾರಿಕೆ ಬದಲಾವಣೆ ವಿಚಾರ: ಗುಂಪುಗಾರಿಕೆಯಿಂದ ಲಿಂಗಾಯತ ಶ್ರೀಗಳು ದೂರ!

ನಾವು ರಾಜ್ಯದ ಇತರ ಭಾಗಗಳಲ್ಲಿ ಇದೇ ಸಮಸ್ಯೆಗಳನ್ನು ಅನುಭವಿಸಿದ್ದೇವೆ. ಆರೋಪ ನಿಜವೇ ಆಗಿದ್ದರೆ, ಇತರ ಶ್ರೀಗಳು ತಮ್ಮ ವಿರೋಧವನ್ನು ಹಿಂಪಡೆದುಕೊಂಡು ಪ್ರಹ್ಲಾದ್ ಜೋಶಿ ಅವರನ್ನು ಅಭ್ಯರ್ಥಿಯನ್ನಾಗಿ ಏಕೆ ಒಪ್ಪಿಕೊಂಡಿದ್ದಾರೆ? ಅಭ್ಯರ್ಥಿ ಅಥವಾ ರಾಜಕೀಯ ಪಕ್ಷವನ್ನು ನಿರ್ಣಯಿಸುವುದು ಮಠಾಧೀಶರ ಕೆಲಸವಲ್ಲ, ಆದರೆ ಮತದಾರರ ಕರ್ತವ್ಯ ಎಂದು ಕೆಲವು ಸ್ವಾಮೀಜಿಗಳು ಸ್ಪಷ್ಟಪಡಿಸಿದ್ದಾರೆ ಎಂದು ರಾಮದುರ್ಗ ಹೇಳಿದರು.

ಅನೇಕ ಸ್ವಾಮೀಜಿಗಳು ಒಂದೇ ಅಭಿಪ್ರಾಯವನ್ನು ಹೊಂದಿದ್ದಾರೆ ಆದರೆ ಮುಕ್ತವಾಗಿ ಹೊರಬರಲು ಚಿಂತಿತರಾಗಿದ್ದಾರೆ. ಈಗಲ್ಲದಿದ್ದರೆ ಭವಿಷ್ಯದಲ್ಲಿ ಸತ್ಯ ಹೊರಬೀಳುತ್ತದೆ ಮತ್ತು ಜನರೂ ಹೇಳುತ್ತಾರೆ. ನಾವು ಯಾವುದೇ ರಾಜಕೀಯ ಪಕ್ಷ ಅಥವಾ ನಾಯಕರಿಂದ ಪ್ರೇರಿತರಾಗಿಲ್ಲ, ಅಭ್ಯರ್ಥಿಯ ವಿರುದ್ಧ ನಮಗೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ ಆದರೆ ನಾವು ಸಮುದಾಯದ ಧ್ವನಿಯನ್ನು ಸಹ ಕೇಳಬೇಕಾಗಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com