ಧಾರವಾಡ: ಕಾಂಗ್ರೆಸ್ ಗೆ ಬಂಡಾಯದ ಬಿಸಿ; ಪಕ್ಷೇತರ ಅಭ್ಯರ್ಥಿಯಾಗಿ ಮಾಜಿ ಸಂಸದ ಮಂಜುನಾಥ ಕುನ್ನೂರ ಕಣಕ್ಕೆ?

ಕಾಂಗ್ರೆಸ್ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಮಾಜಿ ಲೋಕಸಭಾ ಸದಸ್ಯ ಮಂಜುನಾಥ ಕುನ್ನೂರ ಧಾರವಾಡದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದೆ. ಕಾಂಗ್ರೆಸ್‌ನಿಂದ ವಿನೋದ ಅಸೂಟಿ ಕಣಕ್ಕಿಳಿದಿದ್ದಾರೆ.
ಕಾಂಗ್ರೆಸ್ ಮಾಜಿ ಸಂಸದ ಮಂಜುನಾಥ ಕುನ್ನೂರ
ಕಾಂಗ್ರೆಸ್ ಮಾಜಿ ಸಂಸದ ಮಂಜುನಾಥ ಕುನ್ನೂರ

ಹುಬ್ಬಳ್ಳಿ: ಕಾಂಗ್ರೆಸ್ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಮಾಜಿ ಲೋಕಸಭಾ ಸದಸ್ಯ ಮಂಜುನಾಥ ಕುನ್ನೂರ ಧಾರವಾಡದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದೆ. ಕಾಂಗ್ರೆಸ್‌ನಿಂದ ವಿನೋದ ಅಸೂಟಿ, ಬಿಜೆಪಿ ಹಾಲಿ ಸಂಸದ ಪ್ರಲ್ಹಾದ ಜೋಶಿ ವಿರುದ್ಧ ಕಣಕ್ಕಿಳಿದಿದ್ದಾರೆ.

ಈ ಹಿಂದೆ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿದ್ದ ಕುನ್ನೂರು ಅವರಿಗೆ ಟಿಕೆಟ್ ನಿರಾಕರಣೆಯಾದಾಗಲೆಲ್ಲ ಪಕ್ಷ ಬದಲಾಯಿಸಿಕೊಳ್ಳುತ್ತಿದ್ದರು. 2009 ರಿಂದ ರಾಜಕೀಯ ಸುಪ್ತಾವಸ್ಥೆಯಲ್ಲಿದ್ದ ಕುನ್ನೂರು ಅವರು 2023 ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಸಕ್ರಿಯ ರಾಜಕೀಯಕ್ಕೆ ಮರಳಿ ಕಾಂಗ್ರೆಸ್ ಸೇರಿದರು. ಅವರು ಶಿಗ್ಗಾಂವ್ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದರು, ಆದರೆ ಪಕ್ಷವು ಅವರಿಗೆ ಅವಕಾಶವನ್ನು ನಿರಾಕರಿಸಿತು. ವಾಸ್ತವವಾಗಿ, ಕುನ್ನೂರ ಅವರು 1994 ರಲ್ಲಿ ಶಿಗ್ಗಾಂವ್ ಗೆದ್ದ ಕೊನೆಯ ಕಾಂಗ್ರೆಸ್ಸಿಗರಾಗಿದ್ದಾರೆ.

2004ರಲ್ಲಿ ಕಾಂಗ್ರೆಸ್ ಕುನ್ನೂರಿಗೆ ಟಿಕೆಟ್ ನಿರಾಕರಿಸಿದಾಗ ಬಿಜೆಪಿ ಸೇರಿ ಧಾರವಾಡ ದಕ್ಷಿಣ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆಯಾದರು. ವಾಜಪೇಯಿ ಅಲೆಯಿಂದಾಗಿ ಕೇಸರಿ ಪಕ್ಷವು ಮೊದಲ ಬಾರಿಗೆ ಈ ಸ್ಥಾನವನ್ನು ಗೆದ್ದಿತ್ತು. ಆದಾಗ್ಯೂ, ಅವರು 2008 ರಲ್ಲಿ ಇಂಡೋ-ಯುಎಸ್ ಪರಮಾಣು ಒಪ್ಪಂದದ ಪರವಾಗಿ ಮತ ಚಲಾಯಿಸಿ, ಪಕ್ಷದ ವಿಪ್ ಉಲ್ಲಂಘಿಸಿ ಬಿಜೆಪಿಯಿಂದ ಹೊರಹೋಗುವುದು ಸನ್ನಿಹಿತವಾಗಿತ್ತು. ಆಗ ಅವರು ಹಣದ ಲಾಭಕ್ಕಾಗಿ ಅಡ್ಡ ಮತದಾನ ಮಾಡಿದ್ದಾರೆ ಎಂದು ಆರೋಪಿಸಲಾಯಿತು. ಆದರೆ, ಆರೋಪಗಳನ್ನು ತಳ್ಳಿಹಾಕಿದ ಅವರು, ದೇಶದ ಜವಾಬ್ದಾರಿಯುತ ಪ್ರಜೆಯಾಗಿರುವ ತಾವು ತಮ್ಮ ಆತ್ಮಸಾಕ್ಷಿಯಂತೆ ಪರಮಾಣು ಒಪ್ಪಂದದ ಪ್ರಯೋಜನಗಳನ್ನು ಪರಿಗಣಿಸಿ ಮತ ಹಾಕಿದ್ದಾಗಿ ಹೇಳಿದ್ದರು.

ನಂತರ, ಕುನ್ನೂರು ಕಾಂಗ್ರೆಸ್‌ಗೆ ಮರುಸೇರ್ಪಡೆಯಾದರು ಮತ್ತು 2009 ರ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಲ್ಹಾದ್ ಜೋಶಿ ವಿರುದ್ಧ ಧಾರವಾಡ ಲೋಕಸಭಾ ಕ್ಷೇತ್ರದಿಂದ ಅವರನ್ನು ಕಣಕ್ಕಿಳಿಸಿದರು. ಅಲ್ಲಿ ಸೋಲಿನ ರುಚಿ ಕಂಡರು. 2014 ರ ಲೋಕಸಭಾ ಚುನಾವಣೆಗೆ ಪಕ್ಷವು ಅವರನ್ನು ಪರಿಗಣಿಸದ ಕಾರಣ, ಅವರು 2019 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಬಿಜೆಪಿಗೆ ಸೇರ್ಪಡೆಗೊಂಡರು. ಅವರು ಪಕ್ಷದಿಂದ ಯಾವುದೇ ಉತ್ತಮ ಸ್ಥಾನ ಪಡೆಯದ ಕಾರಣ, ಅವರು 2023 ರ ವಿಧಾನಸಭಾ ಚುನಾವಣೆಯ ಮೊದಲು ಕಾಂಗ್ರೆಸ್‌ಗೆ ಮರಳಿದರು.

ಕಾಂಗ್ರೆಸ್ ಮಾಜಿ ಸಂಸದ ಮಂಜುನಾಥ ಕುನ್ನೂರ
ಧಾರವಾಡ ಕ್ಷೇತ್ರಕ್ಕೆ ಪ್ರಹ್ಲಾದ್ ಜೋಶಿ ಉಮೇದುವಾರಿಕೆ ಬದಲಾವಣೆ ವಿಚಾರ: ಗುಂಪುಗಾರಿಕೆಯಿಂದ ಲಿಂಗಾಯತ ಶ್ರೀಗಳು ದೂರ!

ಕುನ್ನೂರ್ ಅವರು ಆಗಾಗ್ಗೆ ಪಕ್ಷಗಳನ್ನು ಬದಲಾಯಿಸುವ ಕಾರ್ಯವನ್ನು ಸಮರ್ಥಿಸಿಕೊಳ್ಳುತ್ತಾರೆ, ಅದು ಕೂಡ ಯಾವುದೇ ಚುನಾವಣೆಗೆ ಮುಂಚಿತವಾಗಿ. ತಾವು ಇದ್ದ ಪಕ್ಷ ತಮ್ಮನ್ನು ನ್ಯಾಯಯುತವಾಗಿ ನಡೆಸಿಕೊಳ್ಳಲಿಲ್ಲ, ಸ್ವಾಭಿಮಾನಕ್ಕೆ ಧಕ್ಕೆಯಾದಾಗಲೆಲ್ಲ ಪಕ್ಷ ಬದಲಿಸಿದರು. ಇದರ ಹೊರತಾಗಿ, ಜನಪರ ವಿಚಾರಗಳಲ್ಲಿ ತಮ್ಮ ನಿಲುವು ತೆಗೆದುಕೊಳ್ಳುವ ಪಕ್ಷಗಳು ಅವರ ಆತ್ಮಸಾಕ್ಷಿಗೆ ವಿರುದ್ಧವಾಗಿದ್ದರೆ, ಅದರ ವಿರುದ್ಧ ಬಹಿರಂಗವಾಗಿ ಬಂಡಾಯವೆದ್ದಿದ್ದೇನೆ ಮತ್ತು ಜನರ ಹಿತಾಸಕ್ತಿಗಾಗಿ ಅವರ ಜೊತೆಗೆ ನಿಂತಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಧಾರವಾಡ ಭಾಗದಲ್ಲಿ ಲಿಂಗಾಯತರು ಪ್ರಬಲ ಸಮುದಾಯವಾಗಿರುವುದರಿಂದ ಆ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ನಿರೀಕ್ಷೆಯಿತ್ತು. ಸಮುದಾಯದ ಪ್ರಭಾವಿ ಪಂಚಮಸಾಲಿ ಪಂಗಡಕ್ಕೆ ಸೇರಿದವರಾದ್ದರಿಂದ ಅವಕಾಶ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದರೂ ಪಕ್ಷ ಸಮುದಾಯವನ್ನು ಕಡೆಗಣಿಸಿದೆ. ಹೀಗಾಗಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಚಿಂತನೆ ನಡೆಸಿದ್ದು, ಒಂದೆರಡು ದಿನಗಳಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com