ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಮೋದಿ ಆಡಳಿತದಿಂದ ಜನರು ಸಂತುಷ್ಟರಾಗಿಲ್ಲ, ಎಲ್ಲೆಡೆ ಕಾಂಗ್ರೆಸ್ ಪರ ಅಲೆ ಇದೆ: ಸಿಎಂ ಸಿದ್ದರಾಮಯ್ಯ (ಸಂದರ್ಶನ)

ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಈ ನಡುವೆ ಪ್ರಮುಖ ರಾಜಕೀಯ ಪಕ್ಷಗಳು ಚುನಾವಣೆಗೆ ಸಿದ್ಧತೆ ಆರಂಭಿಸಿವೆ. ಇದರಂತೆ ರಾಜ್ಚ ರಾಜಕೀಯ ಪರಿಸ್ಥಿತಿ ಹಾಗೂ ಚುನಾವಣೆ ಸಿದ್ಧತೆಗಳ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ನಡಸಿದ ಸಂದರ್ಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನಬಿಚ್ಚಿ ಮಾತನಾಡಿದ್ದಾರೆ.

ಮೋದಿ ಆಡಳಿತದಿಂದ ಜನರು ಸಂತುಷ್ಟರಾಗಿಲ್ಲ. ಎಲ್ಲೆಡೆ ಇದೀಗ ಕಾಂಗ್ರೆಸ್ ಪರ ಅಲೆ ಎದ್ದಿದ್ದು, ಜನರು ಬದಲಾವಣೆಯನ್ನು ನಿರೀಕ್ಷಿಸುತ್ತಿದ್ದಾರೆಂದು ಹೇಳಿದ್ದಾರೆ.

Q

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ. ರಾಜ್ಯ ರಾಜಕೀಯ ಬೆಳವಣಿಗೆ ಬಗ್ಗೆ ಏನನ್ನು ಹೇಳುತ್ತೀರಿ?

A

ಮೋದಿ ಅಲೆ ಕಡಿಮೆಯಾಗಿ, ಕಾಂಗ್ರೆಸ್ ಪರ ವಾತಾವರಣ ನಿರ್ಮಾಣವಾಗಿದೆ. ಬಿಜೆಪಿಯ ಹತ್ತು ವರ್ಷಗಳ ಅಧಿಕಾರಾವಧಿಯನ್ನು ಜನರು ವಿಮರ್ಶಾತ್ಮಕವಾಗಿ ಮೌಲ್ಯಮಾಪನ ಮಾಡುತ್ತಿದ್ದಾರೆ, ಅಧಿಕಾರಕ್ಕಾಗಿ ಆಡಳಿತ ಪಕ್ಷದ ಹತಾಶೆ ಮತ್ತು ಸೇಡಿನ ತಂತ್ರಗಳನ್ನು ಗುರುತಿಸಿದ್ದಾರೆ. ಈ ಭಾವನೆಯು ಕರ್ನಾಟಕದಲ್ಲಿ ಬಲವಾಗಿ ಪ್ರತಿಧ್ವನಿಸುತ್ತದೆ ಎಂಬ ವಿಶ್ವಾಸವಿದೆ. ನಮ್ಮ ಸರ್ಕಾರದ ಗ್ಯಾರಂಟಿ ಹಾಗೂ ಶಾಸಕರ ಶ್ರಮಕ್ಕೆ ಜನರಿಂದ ವ್ಯಾಪಕ ಮೆಚ್ಚುಗೆಗಳು ವ್ಯಕ್ತವಾಗುತ್ತಿವೆ. ಇದು ಕಾಂಗ್ರೆಸ್ ಪರ ಭಾವನೆಯನ್ನು ಬೆಳೆಸುತ್ತದೆ ಮತ್ತು 20 ಸ್ಥಾನಗಳನ್ನು ಗೆಲ್ಲಲು ಸಹಾಯ ಮಾಡುತ್ತದೆ.

Q

ಲೋಕಸಭೆ ಚುನಾವಣೆಯ ನಂತರ ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸಬಹುದು ಎಂಬ ಪ್ರತಿಪಕ್ಷಗಳ ಹೇಳಿಕೆಗಳ ಬಗ್ಗೆ ನೀವು ಏನು ಹೇಳುತ್ತೀರಿ?

A

ನಮ್ಮ ಗ್ಯಾರಂಟಿ ಯೋಜನೆಗಳು ರಾಜ್ಯದ ಜನರ ಜೀವನಾಡಿಯಾಗಿವೆ. ಅಧಿಕಾರ ವಹಿಸಿಕೊಂಡ ಐದು ತಿಂಗಳೊಳಗೆ ನಾವು ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೇವೆ. ಈ ಪ್ರಮುಖ ಯೋಜನೆಗಳನ್ನು ನಿಲ್ಲಿಸುವ ಉದ್ದೇಶವೇ ಇಲ್ಲ. ಬರಗಾಲದಂತಹ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ನಮ್ಮ ಬದ್ಧತೆ ಹಾಗೆಯೇ ಉಳಿದಿದೆ. ನಮ್ಮ ಪೂರ್ಣ ಐದು ವರ್ಷಗಳ ಅಧಿಕಾರ ಮುಗಿಯುವವರೆಗೂ ಈ ಗ್ಯಾರಂಟಿ ಯೋಜನೆಗಳು ಮುಂದುವರೆಯಲಿದೆ.

Q

ರಾಜ್ಯದಲ್ಲಿ ಮಹಿಳಾ ಮತದಾರರಿಂದ ಗಮನಾರ್ಹ ಬೆಂಬಲವನ್ನು ಕಾಂಗ್ರೆಸ್ ನಿರೀಕ್ಷಿಸಬಹುದೇ?

A

ನಮ್ಮ ಉಪಕ್ರಮಗಳು ಮಹಿಳೆಯರ ಸಬಲೀಕರಣದ ಗುರಿಯನ್ನು ಹೊಂದಿವೆ ಮತ್ತು 'ಗೃಹಲಕ್ಷ್ಮಿ' ಮತ್ತು ಉಚಿತ ಬಸ್ ಸೇವೆಗಳಂತಹ ಗ್ಯಾರಂಟಿಗಳು ಸಹಾಯಕವಾಗಿವೆ. ಲೆಕ್ಕವಿಲ್ಲದಷ್ಟು ಮಹಿಳೆಯರು ಪ್ರಯೋಜನ ಪಡೆದಿದ್ದಾರೆ ಮತ್ತು ನಮ್ಮ ಆಂತರಿಕ ಸಮೀಕ್ಷೆಗಳ ಪ್ರಕಾರ 70-80 ಪ್ರತಿಶತದಷ್ಟು ಮಹಿಳೆಯರು ಕಾಂಗ್ರೆಸ್ ಅನ್ನು ಬೆಂಬಲಿಸಲು ಒಲವು ತೋರುತ್ತಿದ್ದಾರೆಂದು ತಿಳಿದುಬಂದಿದೆ. ಮಹಿಳಾ ಸಬಲೀಕರಣವು ಕೇವಲ ಘೋಷಣೆಯಲ್ಲ, ಇದು ನಮ್ಮ ಆಡಳಿತ ಬದ್ಧತೆ ಹಾಗೂ ವಾಸ್ತವವಾಗಿದೆ.ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳುತ್ತಿುವಂತೆ ಗ್ಯಾರಂಟಿ ಯೋಜನೆಗಳಿಗೆ ಹಣ ನೀಡಲು ರಾಜ್ಯದ ತೆರಿಗೆ ಪಾಲನ್ನು ಒತ್ತಾಯಿಸುತ್ತಿದ್ದೀರಾ?

Q

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳುತ್ತಿುವಂತೆ ಗ್ಯಾರಂಟಿ ಯೋಜನೆಗಳಿಗೆ ಹಣ ನೀಡಲು ರಾಜ್ಯದ ತೆರಿಗೆ ಪಾಲನ್ನು ಒತ್ತಾಯಿಸುತ್ತಿದ್ದೀರಾ?

A

ಆಯೋಗ ಶಿಫಾರಸು ಮಾಡಿದ ಹಣವನ್ನು ಕರ್ನಾಟಕಕ್ಕೆ ಮಂಜೂರು ಮಾಡಲು ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿರುವುದು ತೀವ್ರ ಅನ್ಯಾಯವಾಗಿದೆ. ನಮ್ಮ ಪ್ರಗತಿಪರ ರಾಜ್ಯದ ತೀವ್ರ ಆರ್ಥಿಕ ಅಗತ್ಯಗಳನ್ನು ಪರಿಹರಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ. ನ್ಯಾಯೋಚಿತ ಪಾಲು ಪಡೆಯಲು ರಾಜ್ಯ ಅರ್ಹವಾಗಿದ್ದು ನಾವು ನಮ್ಮ ಹಂಚಿಕೆಗಾಗಿ ಹೋರಾಟವನ್ನು ಮುಂದುವರಿಸುತ್ತೇವೆ. ಈ ಜನಪ್ರಿಯ ಗ್ಯಾರಂಟಿ ಯೋಜನೆಗಳಿಗೆ ಸಂಪನ್ಮೂಲಗಳ ಬಳಕೆ ಹಾಗೂ ಉತ್ಪಾದನೆಗೆ ನಾವು ಸಮರ್ಥರಾಗಿದ್ದೇವೆ. ಹೀಗಾಗಿ ಗ್ಯಾರಂಟಿ ಯೋಜನೆಗಳ ನಿಧಿಗಾಗಿ ನಾವು ಹಣ ಕೇಳುತ್ತಿಲ್ಲ. ಹಣಕಾಸು ಆಯೋಗವು ವಿಶೇಷ ಅನುದಾನಕ್ಕೆ 5,495 ಕೋಟಿ ರೂ., ಬೆಂಗಳೂರಿನ ಪೆರಿಫೆರಲ್ ರಿಂಗ್ ರೋಡ್‌ಗೆ ರೂ. 3,000 ಕೋಟಿ ಮತ್ತು ಕೆರೆ ಪುನರುಜ್ಜೀವನಕ್ಕೆ ರೂ. 3,000 ಕೋಟಿ ನೀಡುವಂತೆ ಶಿಫಾರಸು ಮಾಡಿದೆ. ಆದರೆ, ಕೇಂದ್ರ ಸರ್ಕಾರ ನೀಡುತ್ತಿಲ್ಲ. 15ನೇ ಹಣಕಾಸು ಆಯೋಗವು ರಾಜ್ಯಕ್ಕೆ ಶೇ.44ರಷ್ಟು ತೆರಿಗೆಯನ್ನು ಶಿಫಾರಸು ಮಾಡಿದ್ದರೂ ಪಾವತಿಸಿಲ್ಲ.

ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರಕಾರ 5,300 ಕೋಟಿ ರೂ. ಘೋಷಣೆ ಮಾಡಿದ್ದು, ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಅದನ್ನು ಪುನರುಚ್ಚರಿಸಿದ್ದಾರೆ. ಆದರೆ ಇದುವರೆಗೆ ಅನುದಾನ ಬಿಡುಗಡೆಯಾಗಿಲ್ಲ. 2023-24 ರ ಸೆಸ್ ಮತ್ತು ಹೆಚ್ಚುವರಿ ಶುಲ್ಕದ ಸಂಗ್ರಹವು ಶೇ.15 ರಷ್ಟು ಹೆಚ್ಚಾಗಿದೆ, ಆದರೆ, ಇದು ನೇರವಾಗಿ ಕೇಂದ್ರ ಸರ್ಕಾರಕ್ಕೆ ಹೋಗುವುದರಿಂದ ಅದನ್ನೂ ಪಡೆಯಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ.

Q

ಮೇಕೆದಾಟು ಯೋಜನೆ ಬಗ್ಗೆ ಏನು ಹೇಳುತ್ತೀರಿ? ಬೆಂಗಳೂರು ನೀರು ಬಿಕ್ಕಟ್ಟನ್ನು ಹೇಗೆ ಪರಿಹರಿಸುತ್ತಿದ್ದೀರಿ?

A

ಬೆಂಗಳೂರಿನ ನೀರಿನ ಬಿಕ್ಕಟ್ಟು ಒಂದು ಪ್ರಮುಖ ಸಮಸ್ಯೆಯಾಗಿದ್ದು, ಅದರ ಪರಿಣಾಮವನ್ನು ತಗ್ಗಿಸಲು ನಾವು ಹಲವಾರು ಕ್ರಮಗಳನ್ನು ಜಾರಿಗೆ ತಂದಿದ್ದೇವೆ. ಮಳೆ ಕೊರತೆ ಮತ್ತು ನೀರಿನ ಮೂಲಗಳು ಬರಿದಾಗುತ್ತಿರುವಂತಹ ಸವಾಲುಗಳ ಹೊರತಾಗಿಯೂ, ನೀರಿನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ನಾವು ಅವಿರತವಾಗಿ ಶ್ರಮಿಸುತ್ತಿದ್ದೇವೆ. ಕೆಆರ್‌ಎಸ್ ಮತ್ತು ಕಬಿನಿ ಅಣೆಕಟ್ಟುಗಳಿಂದ ಶೇ 60 ರಷ್ಟು ನೀರನ್ನು ಪಡೆಯುತ್ತಿದ್ದೇವೆ, ಆದರೆ ಬಹುತೇಕ ಬೋರ್‌ವೆಲ್‌ಗಳು ಬತ್ತಿ ಹೋಗಿರುವುದರಿಂದ ಉಳಿದ ಶೇ 40 ರಷ್ಟು ನೀರನ್ನು ಅಂತರ್ಜಲ ಮೂಲಗಳಿಂದ ನಮಗೆ ಪಡೆಯಲು ಸಾಧ್ಯವಾಗುತ್ತಿಲ್ಲ. ಬರ ಪರಿಹಾರಕ್ಕಾಗಿ ಕೇಂದ್ರದ ಮೊರೆ ಹೋಗಿದ್ದೆವು, ಆದರೆ ನಮ್ಮ ಮನವಿಗೆ ಕಿವಿಗೊಡದ ಕಾರಣ ನಾವು ಹಣಕ್ಕಾಗಿ ಕಾನೂನು ಹೋರಾಟ ನಡೆಸಬೇಕಾಯಿತು.

ಎರಡು ರಾಜ್ಯಗಳ ನಡುವಿನ ಕಾವೇರಿ ಜಲವಿವಾದ ಪರಿಹರಿಸಲು ಮೇಕದಾಟು ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸುತ್ತಿದ್ದೇವೆ. ಆದರೆ, ಎಐಎಡಿಎಂಕೆ ಮತ್ತು ಡಿಎಂಕೆ ಎರಡೂ ರಾಜಕೀಯ ಕಾರಣಗಳಿಗಾಗಿ ಸಮಸ್ಯೆಯನ್ನು ಜೀವಂತವಾಗಿರಿಸಿಕೊಂಡಿರುವುದು ದುರದೃಷ್ಟಕರ ಸಂಗತಿ. ಯೋಜನೆಯನ್ನು ವಿರೋಧಿಸುವುದರಲ್ಲಿ ಯಾವುದೇ ಪ್ರಯೋಜನವಿಲ್ಲ. ಕಾವೇರಿ ನಮ್ಮ ಭೂಪ್ರದೇಶದಲ್ಲಿದೆ ಮತ್ತು ತಮಿಳುನಾಡಿಗೆ 177.25 ಟಿಎಂಸಿ ಅಡಿ ನೀರನ್ನು ಹಂಚಿಕೆ ಮಾಡಲಾಗಿದೆ, ಆ ನೀರನ್ನು ನಾವು ಸಾಮಾನ್ಯ ವರ್ಷದಲ್ಲಿ ಬಿಡುಗಡೆ ಮಾಡುತ್ತೇವೆ. ಮೇಕೆದಾಟು ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಯೋಜನೆಗೆ ಮಾರ್ಗವನ್ನು ತೆರವುಗೊಳಿಸುವ ಮೂಲಕ ತಮಿಳುನಾಡು ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಬೇಕೆಂದು ನಾವು ಬಯಸುತ್ತೇವೆ.

Q

ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನಿಮ್ಮ ತವರು ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಪಡೆದು ಸ್ಪರ್ಧಿಸುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯ

A

ಪ್ರಜಾಪ್ರಭುತ್ವವು ವೈವಿಧ್ಯಮಯ ರಾಜಕೀಯ ಆಯ್ಕೆಗಳನ್ನು ಅನುಮತಿಸುತ್ತದೆ, ಅವರ ಸ್ಪರ್ಧೆ ಹಲವು ಸವಾಲುಗಳು ಎದುರು ಮಾಡಬಹುದು, ಆದರೆ, ಈ ಪ್ರದೇಶದಲ್ಲಿ ಕಾಂಗ್ರೆಸ್ ಬೇರು ಬಲವಾಗಿದ್ದು, ಇದು ನಮಗೆ ವಿಶ್ವಾಸವನ್ನು ನೀಡುತ್ತದೆ. ಈ ಕ್ಷೇತ್ರದ ಎಂಟು ವಿಧಾನಸಭಾ ಸ್ಥಾನಗಳ ಪೈಕಿ ಐದು ಕ್ಷೇತ್ರಗಳು ಕಾಂಗ್ರೆಸ್‌ ಪಾಲಾಗಿರುವುದರಿಂದ ನಾವು ಈ ಸ್ಥಾನದಲ್ಲಿ ಗೆಲ್ಲುವಸಾಧ್ಯತೆ ಹೆಚ್ಚು ಎಂಬುದು ನನ್ನ ಭಾವನೆ.ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಲ್ಲಿ ವಂಶ ರಾಜಕಾರಣ ಆರೋಪವಿದೆ.

Q

ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಲ್ಲಿ ವಂಶ ರಾಜಕಾರಣ ಆರೋಪವಿದೆ...?

A

ನಮ್ಮ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯು ಜನರ ಆಯ್ಕೆಗಳೇ ಆಗಿವೆ. ಪ್ರಾದೇಶಿಕ ಮತ್ತು ತಳಮಟ್ಟದ ಪಕ್ಷದ ಸದಸ್ಯರ ಶಿಫಾರಸುಗಳ ಮೇರೆಗೆ ಅಭ್ಯರ್ಥಿಗಳ ಆಯ್ಕೆ ನಡೆದಿದೆ. ಹಿರಿಯ ನಾಯಕರು ಸ್ಪರ್ಧಿಸಲು ನಿರಾಕರಿಸಿದ ಕ್ಷೇತ್ರಗಳಲ್ಲಿ ಸಂಬಂಧಿಕರು ಅಥವಾ ಹೊಸ ಮುಖಗಳಿಗೆ ಅವಕಾಶ ನೀಡುವಂತೆ ಸಹಜವಾಗಿಯೇ ಕೇಳಲಾಗುತ್ತದೆ. ಪಕ್ಷದ ಗೆಲುವನ್ನು ಖಚಿತಪಡಿಸಿಕೊಳ್ಳಲು ನಾವು ಜವಾಬ್ದಾರರಾಗಿದ್ದು, ಈ ಬಾರಿ ಆರು ಮಹಿಳಾ ಅಭ್ಯರ್ಥಿಗಳನ್ನೂ ಕಣಕ್ಕಿಳಿಸಿದ್ದೇವೆ. ಉದಾಹರಣೆಗೆ ಕೋಲಾರವನ್ನು ತೆಗೆದುಕೊಂಡರೆ ಅಲ್ಲಿ ಎರಡು ಬಣಗಳ ನಡುವಿನ ಜಗಳದ ನಡುವೆ ಹೊಸ ಮುಖ, ಗೌತನ್ ಅವರನ್ನು ಕಣಕ್ಕಿಳಿಸಲಾಗಿದೆ.ಈ ಚುನಾವಣೆಯಲ್ಲಿ ಜೆಡಿಎಸ್ ಭವಿಷ್ಯದ ಬಗ್ಗೆ ಏನು ಹೇಳುತ್ತೀರಿ?

Q

ಈ ಚುನಾವಣೆಯಲ್ಲಿ ಜೆಡಿಎಸ್ ಭವಿಷ್ಯದ ಬಗ್ಗೆ ಏನು ಹೇಳುತ್ತೀರಿ?

A

ವಿಧಾನಸಭೆಯಲ್ಲಿ ಜೆಡಿಎಸ್ ಸೋಲಿನ ರುಚಿ ಕಂಡಿದೆ. ಹಾಸನ ಸೇರಿದಂತೆ ಸ್ಪರ್ಧಿಸಿರುವ ಮೂರೂ ಕ್ಷೇತ್ರಗಳಲ್ಲಿ ಮತ್ತೊಮ್ಮೆ ಸೋಲನುಭವಿಸಲಿದೆ. ಮಂಡ್ಯದಲ್ಲಿ ತೀವ್ರ ಪೈಪೋಟಿ ಇದ್ದರೂ ಕಾಂಗ್ರೆಸ್‌ ಕ್ಷೇತ್ರವನ್ನು ತನ್ನದಾಗಿಸಿಕೊಳ್ಳಲಿದೆ.

Related Stories

No stories found.

Advertisement

X
Kannada Prabha
www.kannadaprabha.com