ಬೆಳಗಾವಿ ಲೋಕಸಭೆ ಕ್ಷೇತ್ರ: ಮರಾಠಿ ಪಕ್ಷ MES ಸ್ಪರ್ಧೆಯಿಂದ ಮತ ವಿಭಜನೆ; ಬಿಜೆಪಿಯ ಶೆಟ್ಟರ್ ಗೆಲುವಿಗೆ ಅಡ್ಡಗಾಲು?

2021 ರಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಎಂಇಎಸ್ ಅಭ್ಯರ್ಥಿ ಶುಭಂ ಶೆಲ್ಕೆ ಅವರು ಗಳಿಸಿದ ಸುಮಾರು 1.16 ಲಕ್ಷ ಮತಗಳು ಬಿಜೆಪಿಗೆ ನಷ್ಟವನ್ನುಂಟುಮಾಡಿದವು.
ಜಗದೀಶ್ ಶೆಟ್ಟರ್
ಜಗದೀಶ್ ಶೆಟ್ಟರ್

ಬೆಳಗಾವಿ: ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಮರಾಠಿ ಸಮುದಾಯದ ಮತಗಳನ್ನು ಸೆಳೆಯುವ ಮೂಲಕ ಮಹಾರಾಷ್ಟ್ರ ಏಕೀಕರಣ ಸಮಿತಿ (MES) ಪಾತ್ರ ನಿರ್ಣಾಯಕವಾಗಿದೆ. ಮರಾಠಿ ಸಮುದಾಯದ ಮತದಾರರು ಸಾಂಪ್ರದಾಯಿಕವಾಗಿ ಬಿಜೆಪಿ ಬೆಂಬಲಿಗರಾಗಿರುವುದರಿಂದ ಇದು ಕೇಸರಿ ಪಕ್ಷದ ಭವಿಷ್ಯದ ಮೇಲೆ ಪರಿಣಾಮ ಬೀರಬಹುದು.

2021 ರಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಎಂಇಎಸ್ ಅಭ್ಯರ್ಥಿ ಶುಭಂ ಶೆಲ್ಕೆ ಅವರು ಗಳಿಸಿದ ಸುಮಾರು 1.16 ಲಕ್ಷ ಮತಗಳು ಬಿಜೆಪಿಗೆ ನಷ್ಟವನ್ನುಂಟುಮಾಡಿದವು, ಹಾಲಿ ಸಂಸದೆ ಮಂಗಳಾ ಅಂಗಡಿ ಸತೀಶ್ ಜಾರಕಿಹೊಳಿ ವಿರುದ್ಧ ಕೇವಲ 4,000 ಮತಗಳ ಅಂತರದಿಂದ ಗೆದ್ದಿದ್ದರು.

ಜಗದೀಶ್ ಶೆಟ್ಟರ್
ಶೆಟ್ಟರ್ ವೈಯಕ್ತಿಕ ಜೀವನ ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಎಂಇಎಸ್ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರಿಗೆ ಧಕ್ಕೆ ತರಬಹುದು ಎನ್ನುತ್ತಾರೆ ಹಿರಿಯ ಮರಾಠಿ ಪತ್ರಕರ್ತ ಸಂಜಯ್ ಸೂರ್ಯವಂಶಿ.

ಎಂಇಎಸ್ ರಮಾಕಾಂತ್ ಕೊಂಡೂಸ್ಕರ್ ಅಥವಾ ಶುಭಂ ಶೆಲ್ಕೆ ಅವರಂತಹ ಜನಪ್ರಿಯ ನಾಯಕರನ್ನು ಕಣಕ್ಕಿಳಿಸಿದರೆ ಬಿಜೆಪಿ ಸಂಕಷ್ಟಕ್ಕೆ ಸಿಲುಕುವುದು ಖಚಿತ. ಆದರೆ ಸಮಿತಿಯು ಕಡಿಮೆ ಹೆಸರುವಾಸಿ ನಾಯಕನನ್ನು ಕಣಕ್ಕಿಳಿಸಿದರೆ ಮರಾಠಿ ಮತದಾರರು ಶೆಟ್ಟರ್ ಅವರ ಬೆನ್ನಿಗೆ ಬಲವಾಗಿ ನಿಲ್ಲಬಹುದು.

ಜಗದೀಶ್ ಶೆಟ್ಟರ್
ಹೊಸಬ V/s ಹಿರಿಯ: ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ವಿರುದ್ಧ ಮೃಣಾಲ್ ಹೆಬ್ಬಾಳ್ಕರ್ ಸೆಣಸಾಟ

ಆದರೆ, ಶೆಟ್ಟರ್ ವಿರುದ್ಧ ಯಾವ ಅಭ್ಯರ್ಥಿ ಕಣಕ್ಕಿಳಿದರೂ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಬಿಜೆಪಿ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೂಲಗಳ ಪ್ರಕಾರ, ಎಂಇಎಸ್ ನಾಯಕತ್ವವು ಮಂಗಳವಾರ ಬೆಳಗಾವಿಯಲ್ಲಿ ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸಲು 32 ಸದಸ್ಯರ ಸಮಿತಿಯನ್ನು ರಚಿಸಿದೆ. ಮೊದಲ ದಿನವೇ ಮಾಜಿ ಮೇಯರ್ ದಿವಂಗತ ಸಂಭಾಜಿ ಪಾಟೀಲ್ ಅವರ ಸೊಸೆ ಸಾಧನಾ ಪಾಟೀಲ್ ಅರ್ಜಿ ಸಲ್ಲಿಸಿದ್ದರು. MES ತನ್ನ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮೊದಲು ಅನೇಕ ಇತರ ಆಕಾಂಕ್ಷಿಗಳು ಅರ್ಜಿಗಳನ್ನು ಸಲ್ಲಿಸುವ ನಿರೀಕ್ಷೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com