ಲೋಕಸಭೆ ಅಖಾಡದಲ್ಲಿ ಸುನೀಲ್ ಬೋಸ್: ಭಿನ್ನಮತದ ಕಾರ್ಮೋಡದ ನಡುವೆ ಚಾಮರಾಜನಗರದಲ್ಲಿ ಮಹಾದೇವಪ್ಪ 'ಸನ್ ರೈಸ್'!

ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣಾ ವಿಧಾನಸಭಾ ಕ್ಷೇತ್ರವು ಚಾಮರಾಜನಗರ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಬರುವುದರಿಂದ ಮುಂಬರುವ ಲೋಕಸಭೆ ಚುನಾವಣೆ ಎಲ್ಲಾ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠಿತ ಕಣವಾಗಿದೆ.
ಮಹಾದೇವಪ್ಪ ಮತ್ತು ಸುನೀಲ್ ಬೋಸ್
ಮಹಾದೇವಪ್ಪ ಮತ್ತು ಸುನೀಲ್ ಬೋಸ್

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣಾ ವಿಧಾನಸಭಾ ಕ್ಷೇತ್ರವು ಚಾಮರಾಜನಗರ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಬರುವುದರಿಂದ ಮುಂಬರುವ ಲೋಕಸಭೆ ಚುನಾವಣೆ ಎಲ್ಲಾ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠಿತ ಕಣವಾಗಿದೆ.

2023ರ ವಿಧಾನಸಭೆ ಚುನಾವಣೆಯಲ್ಲಿ ವರುಣಾದಿಂದ ಗೆದ್ದಿರುವ ಸಿದ್ದರಾಮಯ್ಯ ಚಾಮರಾಜನಗರವನ್ನು ಬಿಜೆಪಿಯಿಂದ ಕಿತ್ತುಕೊಳ್ಳುವ ಸಂಕಲ್ಪ ತೊಟ್ಟಿದ್ದಾರೆ. ಈ ಕ್ಷೇತ್ರವನ್ನು ಬಿಜೆಪಿಯ ವಿ ಶ್ರೀನಿವಾಸ ಪ್ರಸಾದ್ ಪ್ರತಿನಿಧಿಸುತ್ತಿದ್ದಾರೆ. ಶ್ರೀನಿವಾಸ ಪ್ರಸಾದ್ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ.

ವರುಣಾ, ಎಚ್‌ಡಿ ಕೋಟೆ, ನಂಜನಗೂಡು ಮತ್ತು ಟಿ ನರಸೀಪುರ (ಎಲ್ಲವೂ ಮೈಸೂರು ಜಿಲ್ಲೆಯಲ್ಲಿ), ಮತ್ತು ಹನೂರು, ಕೊಳ್ಳೇಗಾಲ, ಚಾಮರಾಜನಗರ ಮತ್ತು ಗುಂಡ್ಲುಪೇಟೆ (ಎಲ್ಲವೂ ಚಾಮನರಾಜನಗರ ಜಿಲ್ಲೆಯಲ್ಲಿ) ಸೇರಿದಂತೆ ಎಂಟು ವಿಧಾನಸಭಾ ಕ್ಷೇತ್ರಗಳು ಚಾಮರಾಜನಗರ ಲೋಕಸಭಾ ವ್ಯಾಪ್ತಿಗೆ ಬರುತ್ತವೆ.

ವರುಣಾದಲ್ಲಿ ಸಿದ್ದರಾಮಯ್ಯ, ಟಿ ನರಸೀಪುರದಿಂದ ಎಚ್‌ಸಿ ಮಹದೇವಪ್ಪ ಶಾಸಕರಾಗಿದ್ದಾರೆ. ಇಬ್ಬರೂ ನಾಯಕರು ತಮ್ಮ ವಲಯದಲ್ಲಿ ಇಬ್ಬರು ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಮುಂದಾಗಿದ್ದಾರೆ. ಬಿಜೆಪಿ ಮೊದಲ ಬಾರಿಗೆ ಚಾಮರಾಜನಗರ ಕ್ಷೇತ್ರದಲ್ಲಿ ಗೆದ್ದ ನಂತರ 2019 ರ ಸಾರ್ವತ್ರಿಕ ಚುನಾವಣೆಯು ಕಾಂಗ್ರೆಸ್‌ಗೆ ಹೆಚ್ಚು ಮುಜುಗರವನ್ನು ಉಂಟುಮಾಡಿತು. ಬಿಜೆಪಿಯ ಶ್ರೀನಿವಾಸ ಪ್ರಸಾದ್ ಅವರು ಕಾಂಗ್ರೆಸ್ಸಿನ ಆರ್ ಧ್ರುವನಾರಾಯಣ ಅವರನ್ನು 1,817 ಮತಗಳ ಅಂತರದಿಂದ ಸೋಲಿಸಿದರು. ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಏಳು ಕಾಂಗ್ರೆಸ್ ಶಾಸಕರಿದ್ದಾರೆ, ಹೀಗಾಗಿ ಕಾಂಗ್ರೆಸ್ ಸಚಿವ ಎಚ್‌ಸಿ ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್ ಅವರನ್ನು ಕಣಕ್ಕಿಳಿಸಿದೆ.

ಮಹಾದೇವಪ್ಪ ಮತ್ತು ಸುನೀಲ್ ಬೋಸ್
ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಮಹಾದೇವಪ್ಪ ನಕಾರ; ದರ್ಶನ್ ಧ್ರುವನಾರಾಯಣಗೆ ಮಣೆ; ರೇಸ್ ನಲ್ಲಿ ಸುನೀಲ್ ಬೋಸ್!

ಬಿ ಸೋಮಶೇಖರ್, ಮಾಜಿ ಸಂಸದ ಶಿವಣ್ಣ ಮುಂತಾದವರು ಟಿಕೆಟ್ ಪಡೆಯಲು ಲಾಬಿ ನಡೆಸಿದ್ದರೂ, ಆದರೆ ಚಾಮರಾಜನಗರ ಕ್ಷೇತ್ರಕ್ಕೆ ಯುವ ಕಾಂಗ್ರೆಸ್ ಮುಖಂಡ ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್ ಅವರನ್ನು ಆಯ್ಕೆ ಮಾಡಿದೆ. ಅಭ್ಯರ್ಥಿಯ ವಿಚಾರದಲ್ಲಿ ಒಮ್ಮತ ಮೂಡಿಲ್ಲ ಎಂದು ತಿಳಿದ ಸಿದ್ದರಾಮಯ್ಯ, ಬೋಸ್ ಪರ ಎರಡು ದಿನಗಳಿಂದ ಪ್ರಚಾರ ನಡೆಸುತ್ತಿದ್ದು ಎಲ್ಲ ಶಾಸಕರು, ಮುಖಂಡರ ಜತೆ ಮಾತುಕತೆ ನಡೆಸಿದ್ದಾರೆ.

ಚಾಮರಾಜನಗರ ಕಾಂಗ್ರೆಸ್ ಭದ್ರಕೋಟೆಯಾಗಿ ಉಳಿದುಕೊಂಡಿದ್ದು, 1962 ರಿಂದ 10 ಬಾರಿ ಪಕ್ಷ ಗೆದ್ದಿದೆ. ಜನತಾದಳ ಎರಡು ಬಾರಿ (1996 ಮತ್ತು 1998) ಗೆದ್ದರೆ, 1999 ರಲ್ಲಿ ಜೆಡಿಯು ಮತ್ತು 2004 ಮತ್ತು 2019 ರಲ್ಲಿ ಕ್ರಮವಾಗಿ ಜೆಡಿಎಸ್ ಮತ್ತು ಬಿಜೆಪಿ ಒಮ್ಮೆ ಗೆದ್ದಿವೆ. ದಲಿತರು, ಕುರುಬರು, ಒಬಿಸಿಗಳು, ಅಲ್ಪಸಂಖ್ಯಾತರು ಮತ್ತು ಉಪ್ಪಾರ ಮತದಾರರ ಮತಗಳ ಮೇಲೆ ಕಾಂಗ್ರೆಸ್ ಅವಲಂಬಿತವಾಗಿದೆ. ಬಿಜೆಪಿಯು ಹಾಲಿ ಸಂಸದ ವಿ.ಶ್ರೀನಿವಾಸಪ್ರಸಾದ್ ಅವರ ಅಳಿಯ ಮೋಹನ್ ಕುಮಾರ್‌ಗೆ ಟಿಕೆಟ್ ನಿರಾಕರಿಸುವ ಮೂಲಕ ಕುಟುಂಬ ರಾಜಕಾರಣವನ್ನು ತಿರಸ್ಕರಿಸಿ ಕೊಳ್ಳೇಗಾಲದ ಮಾಜಿ ಶಾಸಕರ ಎಸ್ ಬಾಲರಾಜ್ ಅವರನ್ನು ಕಣಕ್ಕಿಳಿಸಿದೆ.

ಬಿಜೆಪಿಯು ಸ್ಥಾನವನ್ನು ಉಳಿಸಿಕೊಳ್ಳಲು ಉತ್ಸುಕವಾಗಿದೆ ಮತ್ತು ಪ್ರಬಲ ಲಿಂಗಾಯತ ಸಮುದಾಯ, ಮತ್ತು ನಾಯಕರು, ಒಕ್ಕಲಿಗರು ಮತ್ತು ಗಣನೀಯ ತಮಿಳು ಮತದಾರರನ್ನು ಓಲೈಸುತ್ತಿದೆ. ದಲಿತರ ವಿಶ್ವಾಸ ಗಳಿಸುವ ನಿಟ್ಟಿನಲ್ಲಿಯೂ ಶ್ರಮಿಸುತ್ತಿದೆ. ಸರಳತೆಗೆ ಹೆಸರಾದ ಬಾಲರಾಜ್ ದಲಿತರ ಪ್ರಾಬಲ್ಯವಿರುವ ಕ್ಷೇತ್ರವಾದ ಕೊಳ್ಳೇಗಾಲದಿಂದ ಬಂದಿದ್ದು, ಬಿಜೆಪಿ ಶೇ.30ರಷ್ಟು ದಲಿತ ಮತಗಳು ಬಿಜೆಪಿಗೆ ಬಿದ್ದರೆ ಗೆಲ್ಲುವ ಸಾಧ್ಯತೆಯಿದೆ.

ಮಹಾದೇವಪ್ಪ ಮತ್ತು ಸುನೀಲ್ ಬೋಸ್
'ಮರಳು ಮಾಫಿಯಾದವರಿಗೆ ಮರಳಾಗಬೇಡಿ': ಚಾಮರಾಜನಗರದಲ್ಲಿ ಸುನೀಲ್ ಬೋಸ್ ವಿರುದ್ಧ 'ಗೋ ಬ್ಯಾಕ್' ಪೋಸ್ಟರ್ ಪ್ರತ್ಯಕ್ಷ!

ಬಿಜೆಪಿ ನಾಯಕರು ಕೊಳ್ಳೇಗಾಲ, ಹನೂರು ಮತ್ತು ಚಾಮರಾಜನಗರ ತಾಲೂಕುಗಳಲ್ಲಿ ಹರಡಿರುವ ಆದಿವಾಸಿಗಳು ಮತ್ತು ತಮಿಳು ಜನಸಂಖ್ಯೆಯನ್ನು ವಿಶೇಷವಾಗಿ ಗೌಂಡರ್ ಸಮುದಾಯವನ್ನು ಭೇಟಿ ಮಾಡಿ ಮತಯಾಚಿಸುತ್ತಿದ್ದಾರೆ. ಮಹದೇವಪ್ಪ ಅವರ ಪುತ್ರನನ್ನು ಕಣಕ್ಕಿಳಿಸಿರುವುದಕ್ಕೆ ಮಾಜಿ ಸಂಸದ ದಿವಂಗತ ಆರ್.ಧ್ರುವನಾರಾಯಣ ಅವರ ಬೆಂಬಲಿಗರರು ತೀವ್ರ ವಿರೋಧ ವ್ಯಕ್ತ ಪಡಿಸಿದ್ದಾರೆ. ಇವರನ್ನು ಬಿಜೆಪಿ ಅಭ್ಯರ್ಥಿ ಬಾಲರಾಜ್ ಸಂಪರ್ಕಿಸುತ್ತಿದ್ದಾರೆ. ತೀವ್ರ ಜಿದ್ದಾಜಿದ್ದಿಯಿಂದ ಕಣಕ್ಕಿಳಿದಿರುವ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಬಿಎಸ್‌ಪಿ ಅಭ್ಯರ್ಥಿಗಳ ನಡುವಿನ ಭಿನ್ನಾಭಿಪ್ರಾಯ ಮತ್ತು ಗುಂಪುಗಾರಿಕೆ ಪಕ್ಷಕ್ಕೆ ವರದಾನವಾಗಲಿದೆ ಎಂದು ಬಿಜೆಪಿ ಭಾವಿಸಿದೆ.

ಇದರ ನಡುವೆ ಪ್ರದೇಶದಾದ್ಯಂತ ಸಂವಿಧಾನ ಜಾಗೃತಿ ರ್ಯಾಲಿಗಳನ್ನು ಪ್ರಾರಂಭಿಸಿದ ಕಾಂಗ್ರೆಸ್, ಬಿಜೆಪಿ ಸಂವಿಧಾನವನ್ನು ಬದಲಾಯಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ. ಸಚಿವರಾದ ಮಹದೇವಪ್ಪ, ಕೆ.ವೆಂಕಟೇಶ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಶ್ರೀನಿವಾಸ ಪ್ರಸಾದ್ ಅವರನ್ನು ಭೇಟಿ ಮಾಡಿ ಸುನೀಲ್ ಬೋಸ್ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ಶ್ರೀನಿವಾಸ ಪ್ರಸಾದ್ ಅವರ ಅನೇಕ ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧ ಕಣಕ್ಕಿಳಿದಿದ್ದ ಮಾಜಿ ಶಾಸಕ ಭಾರತಿ ಶಂಕರ್‌ ಅವರನ್ನು ಪಕ್ಷ ಸೇರ್ಪಡೆ ಮಾಡಿಕೊಂಡಿದ್ದು, ಹಲವು ಜೆಡಿಎಸ್‌ ನಾಯಕರು ಕೂಡ ಕಾಂಗ್ರೆಸ್ ಸೇರಿದ್ದಾರೆ.

ಬಿಜೆಪಿಯು ಪ್ರಧಾನಿ ನರೇಂದ್ರ ಮೋದಿ, ಲಿಂಗಾಯತ ಪ್ರಭಾವಿ ನಾಯಕ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಮತ್ತು ಅವರ ಪುತ್ರ ಮತ್ತು ರಾಜ್ಯ ಬಿಜೆಪಿ ಮುಖ್ಯಸ್ಥ ಬಿವೈ ವಿಜಯೇಂದ್ರ ಅವರ ವರ್ಚಸ್ಸಿನ ಮೇಲೆ ಅವಲಂಬಿತವಾಗಿರುವುದರಿಂದ ಪ್ರಚಾರವು ವೇಗ ಪಡೆಯುವ ಸಾಧ್ಯತೆಯಿದೆ. ಜೆಡಿಎಸ್ ಪಕ್ಷವು ಎನ್‌ಡಿಎ ಅಭ್ಯರ್ಥಿ ಬಾಲರಾಜ್ ಅವರನ್ನು ಬೆಂಬಲಿಸುವಂತೆ ಮತದಾರರಲ್ಲಿ ಮನವಿ ಮಾಡುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com