ಕಾಂಗ್ರೆಸ್ ಸಿದ್ಧಾಂತದಿಂದ ಅತೃಪ್ತಿ ಹೊಂದಿದವರು ಪಕ್ಷದಿಂದ ಹೊರಹೋಗಲು ಸ್ವತಂತ್ರರು: ರಾಷ್ಟ್ರೀಯ ವಕ್ತಾರ ಅಂಶುಲ್ ಅವಿಜಿತ್

ಕಾಂಗ್ರೆಸ್ ಸಿದ್ಧಾಂತದಿಂದ ಅತೃಪ್ತಿ ಹೊಂದಿದವರು ಪಕ್ಷದಿಂದ ಹೊರಹೋಗಲು ಸ್ವತಂತ್ರರು ಎಂದು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರ ಅಂಶುಲ್ ಅವಿಜಿತ್ ಅವರು ಶುಕ್ರವಾರ ಹೇಳಿದರು.
ಕಾಂಗ್ರೆಸ್
ಕಾಂಗ್ರೆಸ್online desk

ಬೆಂಗಳೂರು: ಕಾಂಗ್ರೆಸ್ ಸಿದ್ಧಾಂತದಿಂದ ಅತೃಪ್ತಿ ಹೊಂದಿದವರು ಪಕ್ಷದಿಂದ ಹೊರಹೋಗಲು ಸ್ವತಂತ್ರರು ಎಂದು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರ ಅಂಶುಲ್ ಅವಿಜಿತ್ ಅವರು ಶುಕ್ರವಾರ ಹೇಳಿದರು.

ಕಾಂಗ್ರೆಸ್‌ನ ಮಾಜಿ ವಕ್ತಾರ ಗೌರವ್ ವಲ್ಲಭ್ ಬಿಜೆಪಿಗೆ ಸೇರ್ಪಡೆಗೊಂಡಿರುವ ಹಿನ್ನೆಲೆಯಲ್ಲಿ ಅಂಶುಲ್ ಅವಿಜಿತ್ ಈ ಹೇಳಿಕೆಯನ್ನು ನೀಡಿದ್ದಾರೆ.

ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಗುರುವಾರ ಕಾಂಗ್ರೆಸ್ ಅಭ್ಯರ್ಥಿ ಬಿಎನ್‌ ಚಂದ್ರಪ್ಪ ಅವರು ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಚಂದ್ರಪ್ಪ ಅವರಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಅಂಶುಲ್ ಅವಿಜಿತ್ ಅವರು ಸಾಥ್ ನೀಡಿದ್ದರು.

ಈ ವೇಳೆ ಮಾತನಾಡಿದ ಅಂಶುಲ್ ಅವಿಜಿತ್ ಅವರು, ಚುನಾವಣೆ ಸಂದರ್ಭದಲ್ಲಿ ಇಂತಹ ವೈಮನಸ್ಸು ಸಾಮಾನ್ಯ. ಬಿಜೆಪಿಯಿಂದಲೂ ಸಾಕಷ್ಟು ಮಂದಿ ನಮ್ಮ ಪಕ್ಷ ಸೇರಿಕೊಂಡಿದ್ದಾರೆ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಇಟ್ಟುಕೊಂಡು ಪಕ್ಷ ತೊರಯದೆ ನಮ್ಮೊಂದಿಗೆ ಇದ್ದಿದ್ದರೆ ಕಷ್ಟವಾಗುತ್ತಿತ್ತು. ಪಕ್ಷ ತೊರೆದ ನಾಯಕರಿಗೆ ನಾನು ಶುಭ ಹಾರೈಸುತ್ತೇನೆ ಎಂದು ಹೇಳಿದರು.

ಕಾಂಗ್ರೆಸ್
ಕಾಂಗ್ರೆಸ್ ತೊರೆದ ಗೌರವ್ ವಲ್ಲಭ್, ಬಿಜೆಪಿ ಸೇರ್ಪಡೆ ಸಾಧ್ಯತೆ

ಕೇಂದ್ರೀಯ ಸಂಸ್ಥೆಗಳು ತಮ್ಮ ದಾಳಿ ಮಾಡಬಹುದು ಎಂದು ಕೆಲವರು ಎಂದು ಹೆದರುತ್ತಿದ್ದಾರೆ. ದಾಳಿಯಿಂದ ತಪ್ಪಿಸಿಕೊಳ್ಳಲು ಕೇಸರಿ ಪಕ್ಷಕ್ಕೆ ಸೇರುತ್ತಿದ್ದಾರೆ ಎಂದು ತಿಳಿಸಿದರು.

ನಾವು ಜಾತ್ಯತೀತತೆ, ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಸಬಲೀಕರಣಕ್ಕೆ ಬದ್ಧರಾಗಿದ್ದೇವೆ. ನಾವು ಧ್ರುವೀಕರಣ, ಕ್ರೋನಿ ಕ್ಯಾಪಿಟಲಿಸಂ ಮತ್ತು ಕಾರ್ಯಾಂಗದ ಅಧಿಕಾರ ದುರುಪಯೋಗದ ವಿರುದ್ಧ ಹೋರಾಡುತ್ತಿದ್ದೇವೆ, ಹೀಗಾಗಿ ಬಿಜೆಪಿಯು ಪ್ರತಿಪಕ್ಷಗಳ ವಿರುದ್ಧ ಸರ್ಕಾರಿ ಸಂಸ್ಥೆಗಳನ್ನೇ ಅಸ್ತ್ರವಾಗಿ ಬಳಸುತ್ತಿದೆ ಎಂದು ಆರೋಪಿಸಿದರು.

ಪಕ್ಷದ ವಕ್ತಾರರ ನಿರ್ಗಮನವು ಕಾಂಗ್ರೆಸ್ ನ್ನು ದುರ್ಬಲಗೊಳಿಸುತ್ತದೆ ಎಂಬ ಊಹಾಪೋಹ ಕುರಿತು ಮಾತನಾಡಿ I.N.D.I.A ಬ್ಲಾಕ್ ಅಡಿಯಲ್ಲಿ ಕಾಂಗ್ರೆಸ್ ಮತ್ತು ಅದರ ಮೈತ್ರಿ ಪಕ್ಷಗಳು ನೈತಿಕತೆ ದೃಢವಾಗಿದೆ ಎಂದು ಹೇಳಿದರು.

ನಮ್ಮ ಕಾರ್ಯಕರ್ತರು ಚುರುಕಾಗಿದ್ದು, ಉತ್ಸಾಹಭರಿತರಾಗಿದ್ದಾರೆ. ನಮ್ಮ ಅಭಿಯಾನಗಳು ಸಕಾರಾತ್ಮಕವಾಗಿವೆ. ನಮ್ಮ ಗ್ಯಾರಂಟಿಗಳು ದೇಶದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವ ಮತ್ತು ಉದ್ಯೋಗವನ್ನು ಒದಗಿಸುವುದಾಗಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com