ತಾಲಿಬಾನ್ ಪ್ರೇರಿತ ಕಾಂಗ್ರೆಸ್ ಪ್ರಣಾಳಿಕೆ ಸಮಾಜವನ್ನು ಒಡೆಯುತ್ತದೆ: ಸಿ.ಟಿ.ರವಿ

ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ ಪ್ರಕಟಿಸಿರುವ ಪ್ರಣಾಳಿಕೆ ತಾಲಿಬಾನ್‌ಗಳಿಂದ ಪ್ರೇರಿತವಾಗಿದೆ ಎಂದು ಹೇಳುವ ಮೂಲಕ ಬಿಜೆಪಿಯ ಹಿರಿಯ ಮುಖಂಡ ಸಿ.ಟಿ.ರವಿ ಅವರು ವಿವಾದವನ್ನು ಹುಟ್ಟುಹಾಕಿದ್ದಾರೆ.
ಸಿ.ಟಿ.ರವಿ.
ಸಿ.ಟಿ.ರವಿ.

ಮೈಸೂರು: ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ ಪ್ರಕಟಿಸಿರುವ ಪ್ರಣಾಳಿಕೆ ತಾಲಿಬಾನ್‌ಗಳಿಂದ ಪ್ರೇರಿತವಾಗಿದೆ ಎಂದು ಹೇಳುವ ಮೂಲಕ ಬಿಜೆಪಿಯ ಹಿರಿಯ ಮುಖಂಡ ಸಿ.ಟಿ.ರವಿ ಅವರು ವಿವಾದವನ್ನು ಹುಟ್ಟುಹಾಕಿದ್ದಾರೆ.

ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು. ಎ.ಓ.ಹ್ಯೂಮ್ ಅವರು ಕಾಂಗ್ರೆಸ್ ನ್ನು ಸ್ಥಾಪಿಸಿದ್ದರು. ಮೊದಲೆರಡು ದಶಕಗಳಲ್ಲಿ ಬ್ರಿಟಿಷರಿಗೆ ಅರ್ಜಿ ಸಲ್ಲಿಸುವ ಸಂಸ್ಥೆಯಾಗಿಯೇ ಇದು ಸೇವೆ ಸಲ್ಲಿಸುತ್ತಿತ್ತು. ನಂತರ, ಹಲವಾರು ನಾಯಕರು ಕಾಂಗ್ರೆಸ್ಗೆ ಸೇರಿಕೊಂಡರು. ನಂತರ ಅವರು ಸ್ವಾತಂತ್ರ್ಯ ಚಳುವಳಿಗಾಗಿ ಕೆಲಸ ಮಾಡಿದರು. ಆದರೆ. ಮಹಾತ್ಮ ಗಾಂಧೀಜಿಯವರ ನಂತರ ಜವಾಹರಲಾಲ್ ನೆಹರು ಕಾಂಗ್ರೆಸ್ ಅನ್ನು ಕುಟುಂಬದ ಪಕ್ಷವನ್ನಾಗಿ ಮಾಡಿದರು. ಪಕ್ಷದಲ್ಲಿ ಅವರು ತಮ್ಮ ಕುಟುಂಬಕ್ಕೆ ಬಲವಾದ ಅಡಿಪಾಯವನ್ನು ಹಾಕಿದರು, ಅದನ್ನು ಇನ್ನೂ ರಾಹುಲ್ ಗಾಂಧಿಯವರು ಮುಂದುವರಿಸಿದ್ದಾರೆ. ಕಾಂಗ್ರೆಸ್ ಪಕ್ಷ ಅರ್ಬನ್ ನಕ್ಸಲೀಯರನ್ನು ಬೆಂಬಲಿಸಿದ್ದು, ಇದೀಗ ಪ್ರಕಟಿಸಿರುವ ಪ್ರಣಾಳಿಕೆ ತಾಲಿಬಾನ್‌ ಪ್ರೇರಿಚ ಮತ್ತು ನಕ್ಸಲ್ ಬೆಂಬಲಿತವಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಪ್ರಕಟಿಸಿರುವ ಪ್ರಣಾಳಿಕೆ ಸಮಾಜದಲ್ಲಿ ಒಡಕು ಮೂಡಿಸುತ್ತದೆ. ಕಾಂಗ್ರೆಸ್‌ನ ಭರವಸೆಗಳನ್ನು ನಂಬಿ ಜನರು ಮತ ಹಾಕಿದರೆ ರಾಜ್ಯದಲ್ಲಿ ಮತ್ತಷ್ಟು ಕುಕ್ಕರ್‌ ಸ್ಫೋಟಗಳು ಸಂಭವಿಸಲಿವೆ ಎಂದು ವ್ಯಂಗ್ಯವಾಡಿದರು.

ಸಿ.ಟಿ.ರವಿ.
ಕೇರಳದಂತೆ ನಾವು ಸಹ ಸಾಲದ ಸುಳಿಯಲ್ಲಿ ಸಿಲುಕಿದ್ದೇವೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಟಿ ರವಿ ವಾಗ್ದಾಳಿ

ಕಾಂಗ್ರೆಸ್ ಪಕ್ಷವನ್ನು ಕೋಮುವಾದಿಯಾಗಿ ಪರಿವರ್ತಿಸಿ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯಲಾಗುತ್ತಿದೆ ಎಂದರು.

ಇದೇ ವೇಳೆ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ರಾಜ್ಯಕ್ಕೆ ನೀಡಿದ ಯೋಜನೆಗಳನ್ನು ಬಹಿರಂಗಪಡಿಸಬೇಕ ಎಂದು ಸವಾಲು ಹಾಕಿದ ಅವರು, ರಾಜ್ಯಕ್ಕೆ ಅತೀ ಹೆಚ್ಚು ಅನುದಾನ, ತೆರಿಗೆ ಪಾಲು ಕೊಟ್ಟಿರುವುದು ಮೋದಿ ಸರ್ಕಾರ. ಚರ್ಚೆ ಬೇಕಾದರೆ ಕಾಂಗ್ರೆಸ್ ನಡೆಸಲಿ. ನಾವು ಕಾಂಗ್ರೆಸ್‍ನ ದೃಷ್ಟಿದೋಷ ನಿವಾರಿಸುತ್ತೇವೆ. ಕಾಂಗ್ರೆಸ್ ಗೆ ವಿಭಜನೆ ರೋಗ ಆವರಿಸಿದೆ. ದೇಶ ವಿಭಜಿಸುವ ರೋಗ ಕಾಂಗ್ರೆಸ್‍ಗೆ ಬಹು ಹಿಂದಿನಿಂದ ಇದೆ, ಈಗಲೂ ಇದೆ ಎಂದು ವಾಗ್ದಾಳಿ ನಡೆಸಿದರು.

ಬಳಿಕ ಮೈಸೂರು ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯಕ್ಕೆ ಟಿಕೆಟ್ ಕೊಟ್ಟಿದ್ದೇವೆ ಎಂಬ ಸಿಎಂ ಹೇಳಿಕೆಗೆ ತಿರುಗೇಟು ನೀಡಿದ ಅವರು, ಯಾರನ್ನೋ ಕರೆದುಕೊಂಡು ಬಂದು ಇವನು ಒಕ್ಕಲಿಗ ಅಂದರೆ ಹೇಗೆ? ಸಂಸ್ಕಾರ ಇಲ್ಲದವರನ್ನು ಒಕ್ಕಲಿಗರು ನಾಯಕ ಅಂತಾ ಒಪ್ಪಿಕೊಳ್ಳಲ್ಲ. ಕಾಂಗ್ರೆಸ್ ನವರೇ ನಿಮ್ಮ ಅಭ್ಯರ್ಥಿ ಲಕ್ಷ್ಮಣ್ ಅವರನ್ನು ಲೂಸ್ ಟಾಕರ್ ಅಂತಾ ಹೇಳುತ್ತಿದ್ದಾರೆ. ನಿಮಗೆ ಗತಿ ಇಲ್ಲದೇ ನಾಲ್ಕು ಚುನಾವಣೆ ಸೋತವರನ್ನು ಮೈಸೂರು ಅಭ್ಯರ್ಥಿ ಮಾಡಿದ್ದೀರಿ. ಮಂತ್ರಿಗಳು ಬರಗೆಟ್ಟವರ ಥರ ಯಾವುದನ್ನು ಬಿಡದೆ ಎಲ್ಲದಕ್ಕೂ ಬಾಯಿ ಹಾಕುತ್ತಾ ಇರೋದು ಈ ಚುನಾವಣೆಯಲ್ಲಿ ಚರ್ಚೆ ಆಗುತ್ತೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com