ಬಿಜೆಪಿ ಸರ್ಕಾರದಿಂದ ಜನಸಾಮಾನ್ಯರಿಗೆ ಏನೂ ಲಾಭವಾಗಿಲ್ಲ: ಗೃಹ ಸಚಿವ ಜಿ ಪರಮೇಶ್ವರ

2024ರ ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಗೃಹ ಸಚಿವ ಜಿ ಪರಮೇಶ್ವರ ಅವರು ಶುಕ್ರವಾರ ಕಾಂಗ್ರೆಸ್ ಪಕ್ಷದ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೇಂದ್ರದ ಆಡಳಿತಾರೂಢ ಬಿಜೆಪಿ ಸರ್ಕಾರದಿಂದ ಸಾಮಾನ್ಯ ಜನರಿಗೆ ಏನೂ ಸಿಕ್ಕಿಲ್ಲ ಮತ್ತು ಜನರು ಇದಕ್ಕೆ ತಕ್ಕ ಉತ್ತರ ನೀಡುತ್ತಾರೆ ಎಂದಿದ್ದಾರೆ.
ಜಿ ಪರಮೇಶ್ವರ
ಜಿ ಪರಮೇಶ್ವರ

ತುಮಕೂರು: 2024ರ ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಗೃಹ ಸಚಿವ ಜಿ ಪರಮೇಶ್ವರ ಅವರು ಶುಕ್ರವಾರ ಕಾಂಗ್ರೆಸ್ ಪಕ್ಷದ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೇಂದ್ರದ ಆಡಳಿತಾರೂಢ ಬಿಜೆಪಿ ಸರ್ಕಾರದಿಂದ ಸಾಮಾನ್ಯ ಜನರಿಗೆ ಏನೂ ಸಿಕ್ಕಿಲ್ಲ ಮತ್ತು ಜನರು ಇದಕ್ಕೆ ತಕ್ಕ ಉತ್ತರ ನೀಡುತ್ತಾರೆ ಎಂದಿದ್ದಾರೆ.

ಎಎನ್‌ಐ ಜೊತೆ ಮಾತನಾಡಿದ ಅವರು, 'ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ, ಈ ಬಾರಿ ವಿಭಿನ್ನವಾಗಿದೆ. ಅವರ (ಜನರ) ಗ್ರಹಿಕೆಯಲ್ಲಿ ಬದಲಾವಣೆಯನ್ನು ನಾವು ನೋಡಿದ್ದೇವೆ. ಅವರ ನಿರ್ಧಾರ ತೆಗೆದುಕೊಳ್ಳುವ ವಿಷಯದಲ್ಲಿ ಬದಲಾವಣೆಯಾಗಿದೆ. ಈಗ ಜನರು ತುಮಕೂರಿನಲ್ಲಿ ಕಾಂಗ್ರೆಸ್‌ನತ್ತ ಹೆಚ್ಚು ದೃಷ್ಟಿ ಹಾಯಿಸುತ್ತಿದ್ದಾರೆ. ತುಮಕೂರಿನಲ್ಲಿ ನಾವು ಗೆಲ್ಲಲಿದ್ದೇವೆ. ಜನರಿಗೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿರುವ ಬಗ್ಗೆ ಅರಿವಿದೆ. ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದ ಅಡಿಯಲ್ಲಿ ಸಾಮಾನ್ಯ ನಾಗರಿಕನ ಜೀವನ ಬದಲಾಗಿಲ್ಲ ಮತ್ತು ಇದು ದೇಶದಾದ್ಯಂತ ಇದೇ ರೀತಿಯ ಸನ್ನಿವೇಶವಿದೆ ಎಂದು ನಾನು ಭಾವಿಸುತ್ತೇನೆ' ಎಂದರು.

'ಒಬ್ಬ ಸಾಮಾನ್ಯ ಮನುಷ್ಯನಿಗೆ ವೈಯಕ್ತಿಕವಾಗಿ ಏನೂ ಬದಲಾವಣೆಯಾಗಿಲ್ಲ. ಆದ್ದರಿಂದ ಸಹಜವಾಗಿಯೇ, ಅವರು ತಕ್ಕ ಪ್ರತಿಕ್ರಿಯೆ ನೀಡುತ್ತಾರೆ. ಮೋದಿಜಿಯವರ 10 ವರ್ಷಗಳ ಆಡಳಿತದ ನಂತರವೂ, ದೇಶದಲ್ಲಿನ ಸಾಮಾನ್ಯ ಜನರ ಜೀವನ ಸುಧಾರಣೆಯಾಗಿಲ್ಲ. ಅವರಿಗೆ ಹೆಚ್ಚುವರಿಯಾಗಿ ಏನೂ ಸಿಕ್ಕಿಲ್ಲ ಎಂದು ನಾನು ಭಾವಿಸುತ್ತೇನೆ' ಎಂದು ಅವರು ಹೇಳಿದರು. .

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಮೂಲಕ 6,500 ಸ್ಥಳೀಯ ಜನರಿಗೆ ಉದ್ಯೋಗ ನೀಡುವುದಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನೀಡಿದ್ದ ಭರವಸೆ ವಿರುದ್ಧ ವಾಗ್ದಾಳಿ ನಡೆಸಿದ ಪರಮೇಶ್ವರ ಅವರು, ಅವರು ಉದ್ಯೋಗ ನೀಡುವ ಭರವಸೆಯನ್ನು ಈಡೇರಿಸಿಲ್ಲ ಎಂದು ಆರೋಪಿಸಿದರು.

ಎಕೆ ಆಂಟನಿ ರಕ್ಷಣಾ ಸಚಿವರಾಗಿದ್ದಾಗ ಡಾ. ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಎಚ್‌ಎಎಲ್ ಹೆಲಿಕಾಪ್ಟರ್ ಕಾರ್ಖಾನೆಗೆ ಅನುಮೋದನೆ ನೀಡಲಾಗಿತ್ತು. ನಂತರ ಸರ್ಕಾರ ಬದಲಾಯಿತು ಮತ್ತು ನಂತರ ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ಮುಂದಿನ 18 ತಿಂಗಳಲ್ಲಿ ನಾವು ಇಲ್ಲಿಂದ ಮೊದಲ ಹೆಲಿಕಾಪ್ಟರ್ ಅನ್ನು ಪ್ರಾರಂಭಿಸುತ್ತೇವೆ ಎಂದು ತಮ್ಮ ಪ್ರಕಟಣೆಯಲ್ಲಿ ಹೇಳಿದ್ದರು. ಅದಾದ 5 ವರ್ಷಗಳ ನಂತರವೂ ನಾವು ಕಾಯುತ್ತಿದ್ದೇವೆ. ಅವರ 6,500 ಸ್ಥಳೀಯ ಜನರಿಗೆ ಉದ್ಯೋಗ ನೀಡುವ ಭರವಸೆ ಈಡೇರಿಲ್ಲ' ಎಂದರು.

ಆಡಳಿತಾರೂಢ ಬಿಜೆಪಿ ನೇತೃತ್ವದ ಸರ್ಕಾರವು ಎಲ್ಲದರಲ್ಲೂ ರಾಜಕೀಯ ಲಾಭವನ್ನು ಪಡೆಯುತ್ತಿದೆ. ಅವರು ಇಲ್ಲಿಯವರೆಗೆ ಏನೆಲ್ಲ ಮಾಡಿದ್ದಾರೋ ಅದೆಲ್ಲದರಲ್ಲೂ ರಾಜಕೀಯ ಲಾಭವನ್ನಷ್ಟೇ ಪಡೆದಿದ್ದಾರೆ ಮತ್ತು ಅವರ ಗಮನ ರಾಜಕೀಯದ ಕಡೆಗೆ ಇದೆ. ಒಂದು ರಾಷ್ಟ್ರವಾಗಿ, ಪ್ರಧಾನ ಮಂತ್ರಿಯಾಗಿ, ಸರ್ಕಾರವಾಗಿ ಇದು ದುರದೃಷ್ಟಕರ. ದೇಶವನ್ನು ಅಭಿವೃದ್ಧಿಪಡಿಸುವುದರತ್ತ ನೋಡುವುದು ನಿಮ್ಮ ಕರ್ತವ್ಯ ಎಂದರು.

ಜಿ ಪರಮೇಶ್ವರ
ಮೋದಿಗೆ ಹೇಳಿ ಗುಂಡಿಕ್ಕಿ ಕೊಲ್ಲುವ ಕಾನೂನು ಜಾರಿಗೊಳಿಸಲಿ: ಈಶ್ವರಪ್ಪಗೆ ಪರಮೇಶ್ವರ ತಿರುಗೇಟು

ನೀವು ಜನರಿಗೆ ನೀಡಿದ್ದ ಭರವಸೆಯಂತೆ ಸಮಾಜವನ್ನು ಅಭಿವೃದ್ಧಿ ಮಾಡುವುದು ನಿಮ್ಮ ಮೂಲಭೂತ ಕರ್ತವ್ಯವಾಗಿದೆ. ಹಾಗಾಗಿ ಇದರಲ್ಲೇನು ವಿಶೇಷತೆ ಇಲ್ಲ. ಆದರೆ, ನೀವು ಯಾವ ರೀತಿಯಲ್ಲಿ ಇದನ್ನು ನೋಡುತ್ತಿದ್ದೀರಿ ಎಂಬುದರ ಬಗ್ಗೆ ನಮ್ಮ ಕಾಳಜಿ ಇದೆ ಎಂದು ಪರಮೇಶ್ವರ ಹೇಳಿದರು.

28 ಲೋಕಸಭಾ ಸ್ಥಾನಗಳನ್ನು ಹೊಂದಿರುವ ಕರ್ನಾಟಕದಲ್ಲಿ ಏಪ್ರಿಲ್ 26 ಮತ್ತು ಮೇ 7 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಜೂನ್ 4 ರಂದು ಮತಗಳ ಎಣಿಕೆ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com