ಶಿವಮೊಗ್ಗ ಲೋಕಸಭೆ ಕ್ಷೇತ್ರ ನಾಮಪತ್ರ ಸಲ್ಲಿಕೆ: ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಆಸ್ತಿ-ಪಾಸ್ತಿ ಎಷ್ಟು?

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.
ಗೀತಾ ಶಿವರಾಜ್ ಕುಮಾರ್ ತಮ್ಮ ಪತಿ ನಟ ಶಿವರಾಜ್ ಕುಮಾರ್ ಹಾಗೂ ಕಾಂಗ್ರೆಸ್ ಮುಖಂಡರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.
ಗೀತಾ ಶಿವರಾಜ್ ಕುಮಾರ್ ತಮ್ಮ ಪತಿ ನಟ ಶಿವರಾಜ್ ಕುಮಾರ್ ಹಾಗೂ ಕಾಂಗ್ರೆಸ್ ಮುಖಂಡರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.

ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಈ ವೇಳೆ ತಮ್ಮ ಬಳಿಯಿರುವ ಸ್ಥಿರಾಸ್ತಿ ಮತ್ತು ಚರಾಸ್ತಿಯ ವಿವರ ನೀಡಿದ ಅವರು ತಮ್ಮ ಬಳಿ ಹಾಗೂ ತಮ್ಮ ಪತಿ ನಟ ಶಿವರಾಜ್ ಕುಮಾರ್ ಬಳಿ ಒಟ್ಟಾರೆಯಾಗಿ 89.31 ಕೋಟಿ ರೂಪಾಯಿ ಆಸ್ತಿ ಇದೆ ಎಂದು ಅಫಿಡವಿಟ್ಟಿನಲ್ಲಿ ಘೋಷಿಸಿಕೊಂಡಿದ್ದಾರೆ.

ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ದಾಖಲೆಗಳ ಪ್ರಕಾರ ಗೀತಾ ಅವರ ಬಳಿಯಿರುವ ಆಸ್ತಿಯಲ್ಲಿ ಒಟ್ಟು 11,542 ಗ್ರಾಂ ತೂಕದ ವಜ್ರ ಮತ್ತು ಚಿನ್ನಾಭರಣಗಳಿದ್ದು ಅವುಗಳ ಮೌಲ್ಯ 3.50 ಕೋಟಿ ರೂಪಾಯಿ ಆಗಿದೆ. ಇನ್ನು ದಂಪತಿಯ ಒಟ್ಟಾರೆ ಆಸ್ತಿಯಲ್ಲಿ ಗೀತಾ ಅವರು 40.04 ಕೋಟಿ ರೂಪಾಯಿ ಆಸ್ತಿ ಹೊಂದಿದ್ದರೆ ಶಿವ ರಾಜ್‌ಕುಮಾರ್ ಅವರ ಬಳಿ 49 ಕೋಟಿ ರೂಪಾಯಿ ಆಸ್ತಿಯಿದೆ.

ಗೀತಾ ಶಿವರಾಜ್ ಕುಮಾರ್ ತಮ್ಮ ಪತಿ ನಟ ಶಿವರಾಜ್ ಕುಮಾರ್ ಹಾಗೂ ಕಾಂಗ್ರೆಸ್ ಮುಖಂಡರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.
Lok Sabha election 2024: 'ಮಲೆನಾಡ ಹೆಬ್ಬಾಗಿಲು' ಶಿವಮೊಗ್ಗದಲ್ಲಿ ಈ ಬಾರಿ ರೋಚಕ ತ್ರಿಕೋನ ಸ್ಪರ್ಧೆ!

ಇನ್ನು ಅವರ ಪುತ್ರಿ ನಿವೇದಿತಾ ಎಸ್, ಕೇವಲ 100 ರೂಪಾಯಿಗಳ ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ಹೊಂದಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಆದರೆ ಅವರು ತಮ್ಮ ಸ್ವಂತ ನಿರ್ಮಾಣ ಸಂಸ್ಥೆ ಶ್ರೀ ಮುತ್ತು ಸಿನಿ ಸರ್ವಿಸಸ್‌ಗೆ 1 ಲಕ್ಷ ರೂಪಾಯಿ ಸಾಲ ನೀಡಿದ್ದಾರೆ. 2022-23ನೇ ಹಣಕಾಸು ವರ್ಷದಲ್ಲಿ ತಮ್ಮ ವಾರ್ಷಿಕ ಆದಾಯ 1.48 ಕೋಟಿ ರೂಪಾಯಿ ಆಗಿತ್ತು ಎಂದು ಗೀತಾ ಹೇಳಿಕೊಂಡಿದ್ದಾರೆ.

2018-19ರಿಂದ 2021-22ರವರೆಗೆ ಅವರ ವಾರ್ಷಿಕ ಆದಾಯ 29 ಲಕ್ಷದಿಂದ 33.93 ಲಕ್ಷ ರೂಪಾಯಿಗಳಿಗೆ ಏರಿಕೆಯಾಗಿದ್ದರೆ, 2022-23ರಲ್ಲಿ 1.48 ಕೋಟಿ ರೂಪಾಯಿಗೆ ಏರಿಕೆ ಕಂಡಿದೆ. ಶಿವರಾಜ್‌ಕುಮಾರ್ ಅವರ ವಾರ್ಷಿಕ ಆದಾಯ 2022-23ರಲ್ಲಿ 2.97 ಕೋಟಿ ರೂಪಾಯಿ ಆಗಿತ್ತು. ಅವರು 2018-19ರಲ್ಲಿ ತಮ್ಮ ವಾರ್ಷಿಕ ಆದಾಯ 2.20 ಕೋಟಿ, 2019-20 ರಲ್ಲಿ 1.87 ಕೋಟಿ ರೂಪಾಯಿ, 2020-21 ರಲ್ಲಿ 97.98 ಲಕ್ಷ ರೂಪಾಯಿ ಮತ್ತು 2021-22 ರಲ್ಲಿ 1.27 ಕೋಟಿ ರೂಪಾಯಿ ವಾರ್ಷಿಕ ಆದಾಯ ಎಂದು ಘೋಷಿಸಿಕೊಂಡಿದ್ದಾರೆ. ಗೀತಾ ಅವರ ಬಳಿ 3 ಲಕ್ಷ ರೂಪಾಯಿ ನಗದು ಇದ್ದರೆ, ಶಿವ ರಾಜ್ ಕುಮಾರ್ ಬಳಿ 22.58 ಲಕ್ಷ ರೂಪಾಯಿ ಇದೆ ಎಂದು ದಂಪತಿ ಅಫಿಡವಿಟ್ಟಿನಲ್ಲಿ ನಮೂದಿಸಿಕೊಂಡಿದ್ದಾರೆ.

ಗೀತಾ ಶಿವರಾಜ್ ಕುಮಾರ್ ತಮ್ಮ ಪತಿ ನಟ ಶಿವರಾಜ್ ಕುಮಾರ್ ಹಾಗೂ ಕಾಂಗ್ರೆಸ್ ಮುಖಂಡರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.
ರೈತರಿಗೆ ಬೆಂಬಲ ಬೆಲೆ ಕೊಡಿಸುವುದು ನನ್ನ ಗುರಿ, ತಂದೆ ಹಾದಿಯಲ್ಲಿ ಸಾಗಲು ಆಶೀರ್ವದಿಸಿ: ಗೀತಾ ಶಿವರಾಜ್ ಕುಮಾರ್

ಗೀತಾ ಅವರು 1.07 ಕೋಟಿ ಮೌಲ್ಯದ ಟೊಯೊಟಾ ಹೈಬ್ರಿಡ್ ಕಾರನ್ನು ಹೊಂದಿದ್ದರೆ, ಶಿವ ರಾಜ್‌ಕುಮಾರ್ ಅವರು ಟೊಯೊಟಾ ಫಾರ್ಚುನರ್, ಮಾರುತಿ ಎರ್ಟಿಗಾ ಮತ್ತು ವೋಲ್ವೊ ಎಸ್ 90 ಹೊಂದಿದ್ದಾರೆ. ಕನಕಪುರ ತಾಲೂಕಿನ ಚಾಕನಹಳ್ಳಿಯಲ್ಲಿ ದಂಪತಿ ಹೆಸರಿನಲ್ಲಿ 11 ಎಕರೆ ಕೃಷಿ ಭೂಮಿಯಿದೆ.

ಶಿವಮೊಗ್ಗದಲ್ಲಿ ನಾಮಪತ್ರ ಸಲ್ಲಿಕೆ: ಶಿವಮೊಗ್ಗದಲ್ಲಿ ನಿನ್ನೆ ನಾಮಪತ್ರ ಸಲ್ಲಿಕೆ ಮುನ್ನ ಗೀತಾ ಮತ್ತು ಶಿವರಾಜ್ ಕುಮಾರ್ ದಂಪತಿ ಅಭಿಮಾನಿಗಳ ಜೊತೆ ಮೆರವಣಿಗೆಯಲ್ಲಿ ಸಾಗಿದರು.

ಇವರ ನಾಮಪತ್ರ ಸಲ್ಲಿಕೆ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್‌, ಗೀತಾ ಸಹೋದರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಸೇರಿದಂತೆ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com