ದಿಂಗಾಲೇಶ್ವರ ಶ್ರೀಗಳು
ದಿಂಗಾಲೇಶ್ವರ ಶ್ರೀಗಳು

ಚುನಾವಣಾ ಇತಿಹಾಸದಲ್ಲೇ ಮೊದಲು: ದಿಂಗಾಲೇಶ್ವರ ಸ್ವಾಮೀಜಿ ಪರ, ಬಿಜೆಪಿ ವಿರುದ್ಧ 'ಕಾವಿ' ಪ್ರಚಾರ!

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕೇಸರಿ ಸೇನೆಯೊಂದು ಪ್ರಚಾರ ನಡೆಸಲಿದೆ. ಧಾರವಾಡ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧಿಸಿದ್ದಾರೆ

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕೇಸರಿ ಸೇನೆಯೊಂದು ಪ್ರಚಾರ ನಡೆಸಲಿದೆ. ಧಾರವಾಡ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧಿಸಿದ್ದಾರೆ.

ಲಿಂಗಾಯತ ಸ್ವಾಮೀಜಿಗಳು ಧಾರವಾಡ ಗ್ರಾಮಾಂತರದಾದ್ಯಂತ ಸ್ವಯಂಪ್ರೇರಿತರಾಗಿ ಪ್ರಚಾರ ನಡೆಸಲಿದ್ದಾರೆ. ಲಿಂಗಾಯತ ಗೌರವ ಮತ್ತು ಘನತೆ ಉಳಿಸುವಂತೆ ಮತ ಕೇಳಲಿದ್ದಾರೆ. ಆದರೆ ಇವರಿಗೆ ದಿಂಗಾಲೇಶ್ವರ ಸ್ವಾಮೀಜಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ, ಸ್ವಾಮೀಜಿಗಳು ಬೀದಿಗಿಳಿಯುವುದು ನನಗೆ ಇಷ್ಟವಿಲ್ಲ, ನನ್ನ ಬೆಂಬಲಿಗರು ಮತ್ತು ಸ್ವಾಮೀಜಿಗಳನ್ನು ಇದಕ್ಕಾಗಿ ಬಳಸಲು ನನ್ನ ಆತ್ಮಸಾಕ್ಷಿಯು ನನಗೆ ಅನುಮತಿಸುವುದಿಲ್ಲ. ಆದರೆ ಇವರೆಲ್ಲ ನನ್ನ ಪರವಾಗಿ ಹೋರಾಡಲು ಬೀದಿಗಿಳಿಯಲು ಸ್ವಯಂಪ್ರೇರಿತರಾಗಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಸುಮಾರು 6-7 ಲಕ್ಷ ಲಿಂಗಾಯತ ಮತದಾರರಿರುವ ಎಂಟು ವಿಧಾನಸಭಾ ಕ್ಷೇತ್ರಗಳಾದ್ಯಂತ ಹಲವು ಸ್ವಾಮೀಜಿಗಳು ಮನೆ ಮನೆಗೆ ಭೇಟಿ ನೀಡಲು ಮುಂದಾಗಿದ್ದಾರೆ. ಅವರು ಸ್ವಾಮಿ ದಿಂಗಾಲೇಶ್ವರ ಅವರಿಗೆ ಲಿಂಗಾಯತ ಗೌರವಕ್ಕಾಗಿ ಹೋರಾಡಲು, ಬೆಂಬಲವನ್ನು ಪಡೆಯಲು ಮತದಾರರನ್ನು ಭೇಟಿ ಮಾಡಲಿದ್ದಾರೆ.

ಕೇಸರಿ ವಸ್ತ್ರಧಾರಿ ಸ್ವಾಮೀಜಿಗಳು ಬೀದಿಗೆ ಬರಬಾರದು, ಕಾವಿಧಾರಿ ಬೀದಿಗೆ ಇಳಿಯಬಾರದು ಎಂದು ದಿಂಗಾಲೇಶ್ವರ ಸ್ವಾಮಿ ಹೇಳಿದರು. ಸುಮಾರು 18-19 ಲಕ್ಷ ಮತದಾರರಿದ್ದು, ಹಿಂದಿನ ಚುನಾವಣೆಯಲ್ಲಿ ಸುಮಾರು 12-13 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಲಿಂಗಾಯತರು ಸಾಂಪ್ರದಾಯಿಕವಾಗಿ ಬಿಜೆಪಿ ಬೆಂಬಲಿಗರು, ಆದರೆ ಈ ಬಾರಿ ಎಲ್ಲವೂ ಬದಲಾಗಬಹುದು ಎನ್ನಲಾಗಿದೆ.

ದಿಂಗಾಲೇಶ್ವರ ಶ್ರೀಗಳು
ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ ಬಗ್ಗೆ ಏನೂ ಹೇಳುವುದಿಲ್ಲ: ಪ್ರಹ್ಲಾದ್ ಜೋಶಿ

ಆದರೆ ದಿಂಗಾಲೇಶ್ವರ ಶ್ರೀಗಳ ನಿರ್ಧಾರದಿಂದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಬೆಂಬಲಿಗರು ವಿಚಲಿತರಲ್ಲ, 2019 ರ ಚುನಾವಣೆಯಲ್ಲಿ ಸುಮಾರು 2 ಲಕ್ಷ ಮತಗಳಿಂದ, 2014 ರ ಚುನಾವಣೆಯಲ್ಲಿ ಸುಮಾರು 1.1 ಲಕ್ಷ ಮತಗಳಿಂದ ಮತ್ತು 2009 ರಲ್ಲಿ, ಸುಮಾರು 1.35 ಲಕ್ಷ ಮತಗಳಿಂದ ಗೆದ್ದಿದ್ದಾರೆ ಎಂದು ಹೇಳಿದ್ದಾರೆ. ಜನರು ನಮ್ಮೊಂದಿಗಿದ್ದಾರೆ ಮತ್ತು ಪ್ರಲ್ಹಾದ್ ಜೋಶಿ ಅವರನ್ನು ಸೋಲಿಸಲು ಅವರು ಏನು ಬೇಕಾದರೂ ಮಾಡಲಿ, ರಾಷ್ಟ್ರೀಯ ವಿಷಯಗಳ ಬಗ್ಗೆ ಜನರು ಅರ್ಥಮಾಡಿಕೊಳ್ಳುತ್ತಾರೆ ಎಂದು ಅವರು ಹೇಳಿದರು.

ಜೋಶಿ ಅವರು ನಾಮಪತ್ರ ಸಲ್ಲಿಕೆ ವೇಳೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಜಗದೀಶ ಶೆಟ್ಟರ್, ಧಾರವಾಡದ ಮಾಜಿ ಸಂಸದ ವಿಜಯ ಸಂಕೇಶ್ವರ್ ಹಾಗೂ ಹಲವು ಲಿಂಗಾಯತ ಮುಖಂಡರು ಜೊತೆಗಿದ್ದರು. ಆದರೆ ಜೋಶಿಯವರ ಪರ ಇರುವ ಲಿಂಗಾಯತ ನಾಯಕರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ದಿಂಗಾಲೇಶ್ವರ ಸ್ವಾಮೀಜಿ, ಲಿಂಗಾಯತ ನಾಯಕರು ಜೋಶಿ ಅವರ ವರ್ಚಸ್ಸಿನಿಂದಾಗಿ ಮಾತನಾಡಲು ಹೆದರುತ್ತಾರೆ ಎಂದು ಹೇಳಿದರು. ಪಕ್ಷದ ಅಭ್ಯರ್ಥಿ ವಿನೋದ್ ಅಸೂಟಿ ಅವರು ಪ್ರಲ್ಹಾದ್ ಜೋಶಿಗೆ ಸರಿಸಾಟಿಯಿಲ್ಲ ಎಂದು ಸ್ಥಳೀಯ ಕಾಂಗ್ರೆಸ್ ವಲಯಗಳಲ್ಲಿ ಚರ್ಚೆಯಾಗಿದೆ ಮತ್ತು ಆಂತರಿಕ ಸಮೀಕ್ಷೆಗಳು ಮತ್ತು ವಿಚಾರಣೆಗಳು ಜೋಶಿ ವಿರುದ್ಧ ಗೆಲ್ಲಲು ಕಾಂಗ್ರೆಸ್ ಅಭ್ಯರ್ಥಿ ಹೆಚ್ಚು ಶ್ರಮಿಸಬೇಕಾಗುತ್ತದೆ ಎಂದು ತೋರಿಸಿದೆ.

ದಿಂಗಾಲೇಶ್ವರ ಶ್ರೀಗಳು
ಪ್ರಹ್ಲಾದ ಜೋಶಿ ವಿರುದ್ಧ ಸ್ಪರ್ಧಿಸುವ ದುಸ್ಸಾಹಸಕ್ಕೆ ದಿಂಗಾಲೇಶ್ವರ ಶ್ರೀ ಮುಂದಾಗಬಾರದು: ಯಡಿಯೂರಪ್ಪ

ಧಾರವಾಡದಲ್ಲಿ ಗೆಲುವು ಸಾಧಿಸಲು ಸ್ವಾಮೀಜಿ ಅವರನ್ನು ಕಾಂಗ್ರೆಸ್ ಬೆಂಬಲಿಸಬಹುದು ಎಂಬ ಮಾತು ಕೂಡ ಕೇಳಿಬಂದಿದೆ. ಈಗ ಬಿ-ಫಾರಂ ನೀಡಿರುವುದರಿಂದ ಪಕ್ಷ ಬದಲಾವಣೆಯ ಮಾತುಗಳನ್ನಾಡಿದರೆ ಪಕ್ಷಕ್ಕೆ ಮುಖಭಂಗವಾಗುವುದಿಲ್ಲ ಎಂದು ಕೆಲ ಮುಖಂಡರು ಕಿಡಿಕಾರಿದರು. ಕೆಲವು ಹಿರಿಯ ನಾಯಕರು ಧಾರ್ಮಿಕ ಮುಖಂಡರು ಕಣಕ್ಕಿಳಿಯುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ, ಕಾಂಗ್ರೆಸ್ ಯಾವಾಗಲೂ ಜಾತ್ಯತೀತ ಜಾಗದಲ್ಲಿ ಕೆಲಸ ಮಾಡಿದೆ ಎಂದು ಹೇಳಿದರು.

Related Stories

No stories found.

Advertisement

X
Kannada Prabha
www.kannadaprabha.com