ಮನ್ಸೂರ್ ಅಲಿ ಖಾನ್
ಮನ್ಸೂರ್ ಅಲಿ ಖಾನ್

ರಾಜ್ಯದಲ್ಲಿ ಮೋದಿ ಅಲೆ ಇಲ್ಲ, ರಾಜ್ಯ ಸರ್ಕಾರದ ಐದು ಖಾತರಿಗಳ ಅಲೆಯಿದೆ: ಮನ್ಸೂರ್ ಅಲಿ ಖಾನ್ (ಸಂದರ್ಶನ)

ಪ್ರತಿಷ್ಠಿತ ಕ್ಷೇತ್ರವಾಗಿರುವ ಬೆಂಗಳೂರು ಸೆಂಟ್ರಲ್‌‌ನಲ್ಲಿ ಹಾಲಿ ಬಿಜೆಪಿ ಸಂಸದ ಪಿಸಿ ಮೋಹನ್ ಮತ್ತು ಕಾಂಗ್ರೆಸ್‌ನ ಮನ್ಸೂರ್ ಅಲಿ ಖಾನ್ ನಡುವೆ ಜಟಾಪಟಿಗೆ ಕಾರಣವಾಗಿದೆ.
Published on

ಬೆಂಗಳೂರು: ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ದಿನದಿಂದ ದಿನಕ್ಕೆ ರಂಗೇರುತ್ತಿದೆ. ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ನಡೆಯಲಿದ್ದು, ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತಿನಲ್ಲಿ ತೊಡಗಿದ್ದಾರೆ. ಪ್ರತಿಷ್ಠಿತ ಕ್ಷೇತ್ರವಾಗಿರುವ ಬೆಂಗಳೂರು ಸೆಂಟ್ರಲ್‌‌ನಲ್ಲಿ ಹಾಲಿ ಬಿಜೆಪಿ ಸಂಸದ ಪಿಸಿ ಮೋಹನ್ ಮತ್ತು ಕಾಂಗ್ರೆಸ್‌ನ ಮನ್ಸೂರ್ ಅಲಿ ಖಾನ್ ನಡುವೆ ಜಟಾಪಟಿಗೆ ಕಾರಣವಾಗಿದೆ.

ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಸಂದರ್ಶನ ಇಲ್ಲಿದೆ.

Q

ಪ್ರಚಾರದ ವೇಳೆ ಪ್ರತಿಕ್ರಿಯೆ ಹೇಗಿದೆ?

A

ಪ್ರತಿಕ್ರಿಯೆ ಅಗಾಧವಾಗಿದೆ. ಪ್ರಚಾರಕ್ಕೆ ಸಾಕಷ್ಟು ಜನ ಬಂದು ಸೇರುತ್ತಿದ್ದಾರೆ.

Q

ನೀವು ಮತ್ತು ನಿಮ್ಮ ಪಕ್ಷವು ಯಾವ ವಿಷಯಗಳ ಬಗ್ಗೆ ಮಾತನಾಡುತ್ತಿದ್ದೀರಿ?

A

ಜನರು ಹಾಲಿ ಸಂಸದರನ್ನು ನೋಡಿಲ್ಲ, ಭೇಟಿಯಾಗಿಲ್ಲ ಎಂದು ಹೇಳುತ್ತಿದ್ದಾರೆ. ನಾನು ಕೂಡ ಅಲ್ಲಿ (ಅವರನ್ನು ಭೇಟಿಯಾಗಲು) ಇರುವುದಿಲ್ಲವೇ ಎಂದು ಅವರು ನನ್ನನ್ನು ಕೇಳುತ್ತಿದ್ದಾರೆ. ಬಿಜೆಪಿ ಸಂಸದರ ಇಲ್ಲದಿರುವಿಕೆ ಸೇರಿ ಹಲವು ದೂರುಗಳಿವೆ. ನಮ್ಮ ಪರವಾಗಿ ಕೆಲಸ ಮಾಡುತ್ತಿರುವ ಒಂದು ಪ್ರಮುಖ ವಿಷಯವೆಂದರೆ ರಾಜ್ಯ ಸರ್ಕಾರದ ಐದು ಖಾತರಿಗಳು. ಬಹಳಷ್ಟು ಜನ ಇದಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಸೆಂಟ್ರಲ್‌ನ ಬಿಜೆಪಿ ಸಂಸದ ಅಥವಾ ರಾಜ್ಯದ ಇತರ ಬಿಜೆಪಿ ಸಂಸದರು ಸಂಸತ್ತಿನಲ್ಲಿ ಪರಿಣಾಮಕಾರಿಯಾಗಿರಲಿಲ್ಲ. 25 ಬಿಜೆಪಿ ಸಂಸದರ ಪೈಕಿ ಯಾರೊಬ್ಬರೂ ಹಣಕಾಸು ಸಚಿವರು ಅಥವಾ ಪ್ರಧಾನಿಯೊಂದಿಗೆ ‘ನನ್ನ ತೆರಿಗೆ ನನ್ನ ಹಕ್ಕು’ ವಿಷಯ ಮತ್ತು ಬರ ಪರಿಹಾರ ನಿಧಿಯ ಬಗ್ಗೆ ಮಾತನಾಡಲು ಅಥವಾ ಕರ್ನಾಟಕಕ್ಕಾಗಿ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ.

Q

ಆಯ್ಕೆಯಾದರೆ ಕ್ಷೇತ್ರಕ್ಕೆ ನಿಮ್ಮ ಅಜೆಂಡಾ ಏನು?

A

ನಾನು ಚುನಾಯಿತನಾದರೆ, ನಾನು ಅಭಿವೃದ್ಧಿಯನ್ನು ಆಧರಿಸಿದ ಅಜೆಂಡಾವನ್ನು ಹೊಂದಿದ್ದೇನೆ. ಬೆಂಗಳೂರು ನಗರದಲ್ಲಿ ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕುರಿತು ನೀತಿ ನಿರ್ಧಾರಗಳನ್ನು ಕೈಗೊಳ್ಳಲು ನಾನು ಉತ್ಸುಕನಾಗಿದ್ದೇನೆ. ಮೂಲಸೌಕರ್ಯ ಅಭಿವೃದ್ಧಿ ಎಂದರೆ, ಬೆಂಗಳೂರಿನ ಹಸಿರು ಹೊದಿಕೆಯನ್ನು ಮರಳಿ ಪಡೆಯುವುದು, ಕೆರೆಗಳ ಅಭಿವೃದ್ಧಿ ಮತ್ತು ಅಂತರ್ಜಲದ ಪುನಶ್ಚೇತನ. ಅವು ನಗರದ ದೊಡ್ಡ ಸಮಸ್ಯೆಗಳಾಗಿದ್ದು, ನಗರದ ಮೇಲೆ ಪರಿಣಾಮ ಬೀರಬಹುದು. ನಗರದಲ್ಲಿ ನೀರಿಲ್ಲದಿದ್ದರೆ ನೀವು ಏನು ಮಾಡುತ್ತೀರಿ? ಎಂಬುದು ನಾನು ನಾಗರಿಕರ ಗಮನ ಸೆಳೆಯಲು ಬಯಸುವ ಒಂದು ವಿಷಯವಾಗಿದೆ. ಇದು ಸರ್ಕಾರ ಮತ್ತು ನಾಗರಿಕರ ಜಂಟಿ ಜವಾಬ್ದಾರಿಯಾಗಿದೆ.

ನಾವು ನಮ್ಮ ನಗರವನ್ನು ಮರಳಿ ಪಡೆಯಬೇಕು. ಅದರೊಂದಿಗೆ, ಹೊರ ವರ್ತುಲ ರಸ್ತೆ, ಮೆಟ್ರೊ ರೈಲು, ಮತ್ತು ಉಪನಗರ ರೈಲು ಯೋಜನೆಗೆ ಹೆಚ್ಚಿನ ಹಣವನ್ನು ತರಲು ನಾನು ಬಯಸುತ್ತೇನೆ. ಮಹದೇವಪುರದಂತಹ ಪ್ರದೇಶಗಳಲ್ಲಿ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಸಮೂಹ ಸಾರಿಗೆ ವ್ಯವಸ್ಥೆ ಬೇಕು. ನಾವು ನಡಿಗೆಯನ್ನು ಸಾರಿಗೆಯ ವಿಧಾನವಾಗಿ ಪರಿಗಣಿಸಲು ಪ್ರಾರಂಭಿಸಬೇಕು ಮತ್ತು ಜನರು ನಡೆಯಲು ಉತ್ತಮ ಕಾಲುದಾರಿಗಳನ್ನು ಒದಗಿಸಬೇಕು. ಬೆಂಗಳೂರು ಹೂಡಿಕೆದಾರರಿಗೆ ಆಕರ್ಷಕವಾಗಿರಬೇಕು.

Q

ಮೋದಿ ಫ್ಯಾಕ್ಟರ್ ಅವರಿಗೆ ಕೆಲಸ ಮಾಡುತ್ತದೆ ಎಂದು ಬಿಜೆಪಿ ಹೇಳುತ್ತದೆ. ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ?

A

ಒಂದು ವೇಳೆ ನಾನು 15 ವರ್ಷ ಸಂಸದನಾಗಿದ್ದಿದ್ದರೆ, ಸಂಸದನಾಗಿ ನನ್ನ ಸಾಧನೆಯನ್ನು ನಾನು ಪ್ರದರ್ಶಿಸುತ್ತೇನೆ. ಪ್ರಾಮಾಣಿಕವಾಗಿ ಹೇಳುವುದಾದರೆ, ಯಾರಾದರೂ ಪ್ರಧಾನಿಯನ್ನು ಭೇಟಿಯಾಗುತ್ತಾರೆಯೇ? ರಿಪೋರ್ಟ್ ಕಾರ್ಡ್ ಎಂದು ತೋರಿಸಿಕೊಳ್ಳಲು ಅವರ ಬಳಿ ಏನೂ ಇಲ್ಲದ ಕಾರಣ ಮೋದಿ ಅಲೆಯ ಬಗ್ಗೆ ಮಾತನಾಡುತ್ತಿದ್ದಾರೆ. ನಾನು ಇಲ್ಲಿ ನೋಡುವುದು ಗ್ಯಾರಂಟಿ ಅಲೆ ಮಾತ್ರ.

ಮನ್ಸೂರ್ ಅಲಿ ಖಾನ್
ಲೋಕಸಭೆ ಚುನಾವಣೆ 2024: ಪಿಸಿ ಮೋಹನ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕ್ತಾರಾ ಮನ್ಸೂರ್ ಅಲಿ ಖಾನ್?
Q

ಎಲ್ಲ ಕಾಂಗ್ರೆಸ್ ಶಾಸಕರು ನಿಮಗಾಗಿ ಕೆಲಸ ಮಾಡುತ್ತಿದ್ದಾರೆಯೇ?

A

ಎಲ್ಲರೂ ನನಗಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಇದು ಕಾಂಗ್ರೆಸ್ ಜಂಟಿ ಪ್ರಯತ್ನವಾಗಿದ್ದು, ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶಗಳು ತುಂಬಾ ಉತ್ತೇಜನಕಾರಿಯಾಗಿದೆ.

Q

ರಾಜ್ಯದ ಪರಿಸ್ಥಿತಿಯ ಬಗ್ಗೆ ನಿಮ್ಮ ಮೌಲ್ಯಮಾಪನವೇನು?

A

20ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುತ್ತೇವೆ ಎಂಬುದು ನನ್ನ ಭಾವನೆ. ಬಿಜೆಪಿ ಸೃಷ್ಟಿಸಿರುವ ಗ್ರಹಿಕೆ ಕುಸಿಯಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com