ಅಖಾಡದಲ್ಲಿ ಅಧಿಕ 'ಡಮ್ಮಿ'ಗಳು: ಬಿಗ್ ಶಾಟ್ ಗಳಿಗೆ ಬಿಗ್ ಶಾಕ್; ಮತದಾರರಿಗೆ ಗೊಂದಲ ಸೃಷ್ಟಿಸುವ ತಂತ್ರ!

ರಾಜ್ಯ ಲೋಕಸಭಾ ಚುನಾವಣೆ ಬಿರುಸು ಪಡೆದುಕೊಂಡಿದೆ. ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿವೆ. ಇದೇ ವೇಳೆ ದೊಡ್ಡ ದೊಡ್ಡ ರಾಜಕೀಯ ಪಕ್ಷಗಳ ಹೆಸರನ್ನು ಹೋಲುವ ನಕಲಿ ಅಭ್ಯರ್ಥಿಗಳ ಪಟ್ಟಿ ಹಲವರ ಹುಬ್ಬೇರುವಂತೆ ಮಾಡಿದೆ.
EVM
EVM

ಬೆಂಗಳೂರು: ರಾಜ್ಯ ಲೋಕಸಭಾ ಚುನಾವಣೆ ಬಿರುಸು ಪಡೆದುಕೊಂಡಿದೆ. ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿವೆ. ಇದೇ ವೇಳೆ ದೊಡ್ಡ ದೊಡ್ಡ ರಾಜಕೀಯ ಪಕ್ಷಗಳ ಹೆಸರನ್ನು ಹೋಲುವ ನಕಲಿ ಅಭ್ಯರ್ಥಿಗಳ ಪಟ್ಟಿ ಹಲವರ ಹುಬ್ಬೇರುವಂತೆ ಮಾಡಿದೆ. ರಾಷ್ಟ್ರೀಯ ಪಕ್ಷಗಳಿಗೂ ಡಮ್ಮಿ ಅಭ್ಯರ್ಥಿಗಳ ಬಿಸಿ ತಟ್ಟಿದೆ.

ರಾಹುಲ್ ಗಾಂಧಿ, ಬಿಎಸ್ ಯಡಿಯೂರಪ್ಪ ಮತ್ತು ಎಚ್‌ಡಿ ರೇವಣ್ಣ ಸೇರಿದಂತೆ ಹಲವಾರು ಬಿಗ್ ಶಾಟ್‌ಗಳ ಹೆಸರಿಗೆ ಸಾಮ್ಯತೆ ಹೊಂದಿರುವ ಡಮ್ಮಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಅಭ್ಯರ್ಥಿಗಳಿಂದ ಯಾವುದೇ ತೊಂದರೆ ಇಲ್ಲದಿದ್ದರೂ ಚುನಾವಣಾ ಬೂತ್‌ಗಳ ಒಳಗೆ ಮತದಾರರನ್ನು ಗೊಂದಲಗೊಳಿಸಲು ಮತ್ತು ದಾರಿ ತಪ್ಪಿಸುವ ಭಾರತೀಯ ರಾಜಕೀಯದ ಹಳೆಯ ತಂತ್ರವು ಅಡಗಿದೆ.

ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಪಿ.ಎಸ್.ಯಡಿಯೂರಪ್ಪ, ಎಚ್.ಡಿ.ರೇವಣ್ಣ ಹಾಗೂ ಡಮ್ಮಿ 'ರಾಹುಲ್ ಗಾಂಧಿ' ಕೂಡ ಇದ್ದಾರೆ. ಏಪ್ರಿಲ್ 26ರ ಚುನಾವಣೆಗೆ ವೇದಿಕೆ ಸಜ್ಜಾಗುತ್ತಿದ್ದಂತೆ ಅಸಲಿ ಅಭ್ಯರ್ಥಿಗಳ ಜತೆಗೆ ಈ ‘ಡಮ್ಮಿ ಅಭ್ಯರ್ಥಿಗಳು’ ಇರುವುದು ಮತದಾರರಲ್ಲಿ ಗೊಂದಲ ಮೂಡಿಸಿದೆ. ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿಯಿಂದ ಡಾ.ಸುಧಾಕರ್‌ ಹಾಗೂ ಕಾಂಗ್ರೆಸ್‌ನಿಂದ ರಕ್ಷಾ ರಾಮಯ್ಯ ನಡುವೆ ಪೈಪೋಟಿ ಏರ್ಪಟ್ಟಿದೆ. ಅಭ್ಯರ್ಥಿಗಳ ಪಟ್ಟಿಯಲ್ಲಿ ನಕಲಿ ಅಭ್ಯರ್ಥಿಗಳ ಹೆಸರು ಸಹ ರಾರಾಜಿಸುತ್ತಿವೆ. ಇದರಲ್ಲಿ ಸುಧಾಕರ ಎನ್‌. ಮತ್ತು ಡಿ ಸುಧಾಕರ್‌ ಅವರಂತಹ ಹೆಸರುಗಳು ಪ್ರಮುಖವಾಗಿವೆ. ಇದರಿಂದ ಮತದಾರರು ಗೊಂದಲಕ್ಕೆ ಈಡಾಗಿದ್ದಾರೆ. ರಾಮಯ್ಯ ಎಂಬ ಹೆಸರಿ ಡಮ್ಮಿ ಅಭ್ಯರ್ಥಿ ಸಹ ನಾಮ ಪತ್ರ ಸಲ್ಲಿಸಿದ್ದಾರೆ.

EVM
ತಮಿಳುನಾಡು: ಪಟ್ಟಿಯಲ್ಲಿ ಮತದಾರರ ಹೆಸರು ನಾಪತ್ತೆ, ಮರು ಮತದಾನಕ್ಕೆ ಕೆ ಅಣ್ಣಾಮಲೈ ಒತ್ತಾಯ

ಬೆಂಗಳೂರು ಗ್ರಾಮಂತರದಲ್ಲೂ ಇದೇ ಹಾಡು. ಈ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿ ಡಾ.ಸಿಎನ್ ಮಂಜುನಾಥ್‌ ಕಣದಲ್ಲಿದ್ದು, ಕಾಂಗ್ರೆಸ್‌ನ ಡಿಕೆ ಸುರೇಶ್‌ ನಡುವೆ ಜಿದ್ದಾಜಿದ್ದಿನ ಪೈಪೋಟಿ ಕಂಡು ಬಂದಿದೆ. ಈ ಪಟ್ಟಿಯಲ್ಲಿ ಮಂಜುನಾಥ್ ಕೆ, ಮಂಜುನಾಥ್‌ ಸಿ, ಸಿಎನ್ ಮಂಜುನಾಥ್‌ ಎನ್ನುವ ಹೆಸರುಗಳು ಗಮನ ಸೆಳೆಯುತ್ತಿವೆ.

ಬಿಜೆಪಿಯ ಶೋಭಾ ಕರಂದ್ಲಾಜೆ ಮತ್ತು ಕಾಂಗ್ರೆಸ್‌ನ ಪ್ರೊಫೆಸರ್ ರಾಜೀವ ಗೌಡ ನಡುವಿನ ಪೈಪೋಟಿಯಿದ್ದು, ಶೋಭಾ ಎಂಬ ಬಹು ಅಭ್ಯರ್ಥಿಗಳು ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. 'ಡಮ್ಮಿ ಅಭ್ಯರ್ಥಿಗಳಲ್ಲಿ' ರಾಹುಲ್ ಗಾಂಧಿ, ಪಿ ಎಸ್ ಯಡೂರಪ್ಪ ಮತ್ತು ಎಚ್‌ಡಿ ರೇವಣ್ಣ (ಜೆಡಿ ಎಸ್ ನಾಯಕ ಎಚ್‌ಡಿ ರೇವಣ್ಣ ಅವರನ್ನು ಹೋಲುತ್ತಾರೆ) ಅವರಂತಹ ಪರಿಚಿತ ಹೆಸರುಗಳನ್ನು ಬಳಸುವುದು ಗೊಂದಲ ಹೆಚ್ಚಿಸುತ್ತದೆ.

'ಡಮ್ಮಿ ಅಭ್ಯರ್ಥಿಗಳು' ಈ ರೀತಿ ಮಾಡುವುದರಿಂದ ಗೆಲುವಿನ ಅಭ್ಯರ್ಥಿಗಳಿಗೆ ಪೆಟ್ಟು ನೀಡುತ್ತಾರೆ. ಅಲ್ಲದೆ ಇದರಿಂದ ಮತಗಳ ವಿಭಜನೆ ಆಗುತ್ತದೆ. ಜಿದ್ದಾಜಿದ್ದಿನ ಪೈಪೋಟಿ ಇರುವ ಕ್ಷೇತ್ರಗಳಲ್ಲಿ ಈ ರೀತಿ ಆಗುತ್ತಿರುವುದು ಮತದಾರರನ್ನು ಗೊಂದಲಕ್ಕೆ ಈಡು ಮಾಡಬಹುದು. ಇದು ಕೇವಲ ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳ ಕರ್ತವ್ಯ ಮಾತ್ರವಲ್ಲ, ಚುನಾವಣಾ ಆಯೋಗದ ಅಧಿಕಾರಿಗಳು ಸಹ ಜಾಗೃತಿ ಮೂಡಿಸುವಲ್ಲಿ ಮುಂದಾಗಬೇಕು. ಡಮ್ಮಿ ಹೆಸರಿನ ಮತದಾನದ ಪ್ರಮಾಣದ ಮೇಲೆ ಸ್ವಲ್ಪಮಟ್ಟಿಗೆ ಪರಿಣಾಮ ಬಿರಬಹುದು. ಗೆಲುವಿನ ಅಂತರವನ್ನು ಕಡಿಮೆ ಮಾಡುವ ಸಾಧ್ಯತೆಯಿದೆ. ವಿಶೇಷವಾಗಿ ನೆಕ್ ಟು ನೆಕ್ ಫೈಟ್ ಇರುತ್ತದೆ ಎಂದು ರಾಜಕೀಯ ವೀಕ್ಷಕ ವಿ ಸಂತೋಷ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com